Entertainment

ಶಿವರಾಜ್ ಕುಮಾರ್ ಅಳಿಯ ಯಾರು ಗೊತ್ತಾ? ಮನೆಯಲ್ಲಿ ಅಳಿಯನೊಂದಿಗೆ ಶಿವಣ್ಣ ಹೇಗಿರುತ್ತಾರೆ ಗೊತ್ತಾ?

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ಅವರ ವಿವಾಹ ಮಹೋತ್ಸವ ಇಂದು (ಆಗಸ್ಟ್ 31, 2015) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಡಾ.ನಿರುಪಮ ಕೈಹಿಡಿದಿರುವ ವರ ಡಾ.ದಿಲೀಪ್. ಡಾ.ದಿಲೀಪ್ ಮೂಲತಃ ಮಂಡ್ಯದವರು. ಆದರೂ, ಹುಟ್ಟಿ-ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ.

 

 

ಅವರ ನಿವಾಸ ಎಚ್.ಎಸ್.ಆರ್.ಲೇಔಟ್ ನಲ್ಲಿ. ಅವರ ತಂದೆ ಎಲ್.ಮಂಜೇಗೌಡ ಬಿಡಿಎ ಎಂಜಿನಿಯರ್. ತಾಯಿ ಪಾರ್ವತಿ ಗೃಹಿಣಿ. ಡಾ.ದಿಲೀಪ್ ಗೆ ಹಿರಿಯ ಸಹೋದರೊಬ್ಬರಿದ್ದಾರೆ. ಚಿಕ್ಕವಯಸ್ಸಿನಿಂದಲೂ ದಿಲೀಪ್ ಅವರಿಗೆ ಡಾಕ್ಟರ್ ಆಗಬೇಕೆಂಬ ಕನಸು. ಅದನ್ನ ನನಸು ಮಾಡಿಕೊಳ್ಳುವುದಕ್ಕೆ ಬೆಂಗಳೂರಿನ ವೈದೇಹಿ ಕಾಲೇಜಿಗೆ ಸೇರಿದರು. ಅಲ್ಲೇ, ದಿಲೀಪ್ ಅವರಿಗೆ ನಿರುಪಮ ಪರಿಚಯ ಆಗಿದ್ದು.

 

 

ಅಂಡರ್ ಗ್ರ್ಯಾಡ್ಜ್ಯುಯೇಷನ್ ಲೆವೆಲ್ ನಿಂದಲೂ ನಿರುಪಮ-ದಿಲೀಪ್ ಕ್ಲಾಸ್ ಮೇಟ್ಸ್. ಓದಿನಲ್ಲಿ ಸದಾ ಮುಂದಿರುತ್ತಿದ್ದ ನಿರುಪಮ, ದಿಲೀಪ್ ಅವರಿಗೆ ಸ್ಟಡೀಸ್ ವಿಷಯದಲ್ಲಿ ಸಹಾಯ ಮಾಡುತ್ತಿದ್ದರಂತೆ. ದಿನಗಳು ಉರುಳಿದಂತೆ ಇಬ್ಬರ ಗೆಳೆತನ ಪ್ರೀತಿಗೆ ತಿರುಗಿತು. ಇಬ್ಬರ ಎಂಟು ವರ್ಷದ ಪ್ರೇಮಕ್ಕೆ ಮನೆಯವರೂ ಸಮ್ಮತಿ ಸೂಚಿಸಿರುವ ಪರಿಣಾಮ, ಇಬ್ಬರ ವಿವಾಹ ಇಂದು ಅದ್ದೂರಿಯಾಗಿ ನಡೆಯಿತು.

 

 

ಸ್ಟಾರ್ ನಟನ ಮಗಳಾಗಿ, ಡಾ.ರಾಜ್ ಕುಮಾರ್ ಮೊಮ್ಮಗಳಾಗಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮೊಮ್ಮಗಳಾಗಿದ್ದರೂ ಸರಳ- ಸೌಜನ್ಯ ವಾಗಿರುವ ನಿರುಪಮ ಅವರ ಗುಣ ದಿಲೀಪ್ ಮನಸೋಲುವುದಕ್ಕೆ ಕಾರಣವಂತೆ. ಸದ್ಯ ಎಂ.ಎಸ್ ಮುಗಿಸಿರುವ ದಿಲೀಪ್, ಮದುವೆ ನಂತರ ಉನ್ನತ ಶಿಕ್ಷಣ ಮಾಡುವ ಪ್ಲಾನ್ ಮಾಡಿದ್ದಾರೆ.

 

 

View this post on Instagram

 

A post shared by DrShivaRajkumar (@nimmashivarajkumar)

 

ಅಂತೂ ರೀಲ್ ನಲ್ಲಿ ಸಾಧನೆ ಮಾಡಿ ಡಾಕ್ಟರೇಟ್ ಪಡೆದಿರುವ ಶಿವಣ್ಣನಿಗೆ ರಿಯಲ್ ಡಾಕ್ಟರ್ ಅಳಿಯನಾಗಿ ಬಂದಿರುವುದು ಖುಷಿಯ ವಿಚಾರ. ಶಿವಣ್ಣ ಅವರು ತಮ್ಮ ಹಿರಿಯ ಪುತ್ರಿ ನಿರುಪಮಾ ಅವರನ್ನು ಡಾಕ್ಟರ್ ದಿಲೀಪ್ 2015ರಲ್ಲಿ ಬಹಳ ಅದ್ದೂರಿಯಾಗಿ ವಿಜ್ರಂಭಣೆಯಿಂದ ಮದುವೆ ಮಾಡಿಕೊಟ್ಟರು. ಇವರ ವಿವಾಹ ಬೆಂಗಳೂರು ಅರಮನೆಯಲ್ಲಿ 30 ಆಗಸ್ಟ್ 2015 ರಲ್ಲಿ ನಡೆದಿತ್ತು.

 

 

ಇನ್ನು ನಿರುಪಮಾ ಗೋ ದಿಲೀಪ್ ಅವರು ತಮ್ಮ ಓದಿನ ದಿನಗಳಿಂದಲೂ ಬಹಳ ಸ್ನೇಹಿತರಾಗಿದ್ದರು. ಎಂಟು ವರ್ಷದ ಇವರ ಪ್ರೀತಿಗೆ ಅಂತಿಮವಾಗಿ ಮದುವೆಯೆಂಬ ಒಂದು ಅಂತಿಮ ತೆರೆ ಬಿದ್ದಿತು.ಇನ್ನು ಶಿವಣ್ಣ ಅವರ ಅಳಿಯ ಡಾಕ್ಟರ್ ದಿಲೀಪ್ ಅವರು ಕೊಡ ಶಿವಣ್ಣ ಅವರ ಜೊತೆ ಬಹಳ ಆತ್ಮೀಯವಾಗಿ ಇರುತ್ತಾರಂತೆ. ಶಿವಣ್ಣ ಅವರು ಸಹ ತಮ್ಮ ಅಳಿಯನನ್ನು ಮಗನಂತೆ ಕಾಣುತ್ತಾರಂತೆ.

 

 

ಹಬ್ಬ-ಹರಿದಿನಗಳು ಬಂದಾಗ ಶಿವಣ್ಣ ಅವರು ತಮ್ಮ ಅಳಿಯ ಹಾಗೂ ಮಗಳನ್ನು ತಮ್ಮ ಮನೆಗೆ ಕರೆದು ತುಂಬಾ ಸಂತಸದಿಂದ ಮಗಳು-ಅಳಿಯನ ಜೊತೆ ಸಮಯ ಕಳೆಯುತ್ತಾರೆ. ಇನ್ನು ಯಾವುದೇ ರೀತಿಯ ಪ್ರವಾಸವನ್ನು ಸಹ ಶಿವಣ್ಣ ಅವರು ಕೈಗೊಂಡರೂ ಸಹ ತಮ್ಮ ಅಳಿಯ ಹಾಗೂ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಇನ್ನು ಶಿವಣ್ಣ ಅವರು ಚಿತ್ರೀಕರಣದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತಮ್ಮ ಕುಟುಂಬಕ್ಕೂ ಹೆಚ್ಚಿನ ಸಮಯವನ್ನು ನೀಡುತ್ತಾರೆ.

Related Articles

Leave a Reply

Your email address will not be published. Required fields are marked *

Back to top button