Entertainment

ರಾಹುಲ್ ಗಾಂಧಿ ವಿಚಾರದಲ್ಲಿ ನಾನು ದೊಡ್ಡ ತಪ್ಪನ್ನ ಮಾಡಿಬಿಟ್ಟೆ. ರಮ್ಯಾ ಮಾಡಿದ ಆ ತಪ್ಪೇನು ಗೊತ್ತಾ.?

ನಟಿ ರಮ್ಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಅಂದರೆ ಅದು ರಮ್ಯಾ ಎಂದು ಹೇಳಬಹುದು. ಕನ್ನಡದ ಟಾಪ್ ನಟಿಯಾಗಿ ಮಿಂಚಿದ ನಟಿ ರಮ್ಯಾ ಅವರು ಕನ್ನಡ ಹಲವು ಖ್ಯಾತ ನಾಯಕ ನಟರ ಜೊತೆ ನಟನೆಯನ್ನ ಮಾಡಿ ಸೈ ಎನಿಸಿಕೊಂಡಿದ್ದರು ಎಂದು ಹೇಳಬಹುದು. ಸದ್ಯ ಚಿತ್ರರಂಗದಿಂದ ಬಹಳ ದೂರ ಉಳಿದುಕೊಂಡಿರುವ ನಟಿ ರಮ್ಯಾ ಅವರು ಆಗಾಗ ಸುದ್ದಿಯಾಗುತ್ತಾರೆ ಎಂದು ಹೇಳಬಹುದು.

 

 

ಹೌದು ರಮ್ಯಾ ಅವರು ಚಿತ್ರರಂಗವನ್ನ ಬಿಟ್ಟು ರಾಜಕೀಯಕ್ಕೆ ಸೇರಿಕೊಂಡು ಬಹಳ ಒಳ್ಳೆಯ ಹೆಸರನ್ನ ಕೂಡ ಮಾಡಿದರು ಎಂದು ಹೇಳಬಹುದು. ಇನ್ನು ಈಗ ರಾಜಕೀಯದಿಂದ ದೂರ ಉಳಿದುಕೊಂಡಿರುವ ನಟಿ ರಮ್ಯಾ ಅವರು ಈಗ ವಿದೇಶದಲ್ಲಿ ಇದ್ದು ಅಲ್ಲಿಯೇ ಇದ್ದುಕೊಂಡು ಆಗಾಗ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಬಹುದು.

 

 

ಇನ್ನು ಸದ್ಯ ವಿದೇಶದಲ್ಲಿ ಇರುವ ನಟಿ ರಮ್ಯಾ ಅವರು ಆಗಾಗ ರಾಜಕೀಯವನ್ನ ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇನ್ನು ಈಗ ನಟಿ ರಮ್ಯಾ ಅವರು ಒಂದು ವಿಶೇಷ ಘಟನೆಯನ್ನ ಹೇಳಿದ್ದು ಇದು ಈಗ ದೊಡ್ಡ ಸುದ್ದಿಯಾಗಿದೆ ಎಂದು ಹೇಳಬಹುದು. ಹೌದು ರಾಹುಲ್ ಗಾಂಧಿ ಅವರೊಂದಿಗೆ ಜರ್ಮನಿಗೆ ತೆರಳಿದ್ದಾಗ ನಾವು ಮಾಡಿದ ತಪ್ಪು ಮತ್ತು ಅದರಿಂದಾದ ಸಮಸ್ಯೆಯ ಹೇಳಿದ್ದಾರೆ ರಮ್ಯಾ ಅವರು.

 

 

ಹಾಗಾದರೆ ರಾಹುಲ್ ಗಾಂಧಿ ಅವರ ಜೊತೆ ಅಜರ್ಮನಿಗೆ ಹೋಗಿದ್ದಾಗ ಅಲ್ಲಿ ರಮ್ಯಾ ಅವರು ಮಾಡಿದ ತಪ್ಪೇನು ಮತ್ತು ಅದರಿಂದ ಆ ಸಮಸ್ಯೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 

 

ಹೌದು ಆ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು ಆ ಸಮಯದಲ್ಲಿ ರಮ್ಯಾ ಅವರು ಪಕ್ಷದ ಸಾಮಾಜಿಕ ಜಾಲತಾಣದ ಹೆಡ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಆಗ ಪಕ್ಷದ ವತಿಯಿಂದ ಜರ್ಮನಿಗೆ ಸಂಸದರ ಒಂದು ನಿಯೋಗದ ಭೇಟಿಯನ್ನು ಆಯೋಜಿಸಲಾಗಿತ್ತು. ರಾಹುಲ್​ ಗಾಂಧಿ, ರಮ್ಯಾ ಸೇರಿ ಅನೇಕರು ಜರ್ಮನಿಗೆ ತೆರಳಿದ್ದರು.

 

 

ಜರ್ಮನಿಯ ಬರ್ಲಿನ್​ನಲ್ಲಿದ್ದ ಮ್ಯೂಸಿಯಂ ಒಂದಕ್ಕೆ ನಾಯಕರೆಲ್ಲರು ಭೇಟಿ ನೀಡಿದ್ದರು ಮತ್ತು ಅಲ್ಲಿನ ಕೆಲವು ಸಂಸದರು ರಾಹುಲ್ ಅವರನ್ನು ಕರೆದುಕೊಂಡು ಹೋಗಿ ಮ್ಯೂಸಿಯಂನ ವಿಶೇಷತೆಗಳನ್ನು ತೋರಿಸುತ್ತಿದ್ದರು. ಆಗ ರಮ್ಯಾ ಅವರು ರಾಹುಲ್ ಅವರ ಫೋಟೋವನ್ನು ವಿವಿಧ ಭಂಗಿಗಳಲ್ಲಿ ತೆಗೆದು ಅದನ್ನು ನಮ್ಮ ಸೋಶಿಯಲ್ ಮೀಡಿಯಾ ಟೀಂಗೆ ಕಳುಹಿಸಿದ್ದರಂತೆ, ಅದನ್ನು ರಾಹುಲ್ ಗಾಂಧಿಯ ಹಲವು ಮುಖಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಯಿತು.

 

 

ಇನ್ನು ಆ ಸಮಯದಲ್ಲಿ ರಮ್ಯಾ ಅವರು ಅಂದುಕೊಂಡಂತೆ ಆ ಫೋಟೋಗಳು ಒಳ್ಳೆಯ ಅಭಿಪ್ರಾಯಗಳನ್ನು ಮೂಡಿಸಲೇ ಇಲ್ಲ ಮತ್ತು ಬೇರೆ ಪಕ್ಷಗಳು ಆ ಫೋಟೋಗಳನ್ನು ತಮ್ಮ ವಿನಾದಕ್ಕೆ ಬಳಸಿಕೊಂಡರು ಮತ್ತು ಕೆಲವು ಫೋಟೋಗಳನ್ನ ಟ್ರೊಲ್ ಕೂಡ ಮಾಡಲಾಯಿತು, ಕ್ಷಣ ಮಾತ್ರದಲ್ಲಿ ಫೋಟೋಗಳು ಭಾರೀ ವೈರಲ್ ಆದವು.

 

 

ಆಗ ನಾನು ಮಾಡಿದ ತಪ್ಪಿನಿಂದಾಗಿ ನನಗೆ ಒಂದೆರೆಡು ದಿನ ನಿದ್ರೆಯೇ ಬಂದಿರಲಿಲ್ಲ. ಆದರೆ ಅದು ನನ್ನ ತಪ್ಪಿಗೆ ತಕ್ಕ ಶಿಕ್ಷೆಯಲ್ಲ ಎನ್ನವುದು ನನಗೆ ಗೊತ್ತಿತ್ತು.  ಆಮೇಲೆ ರಾಹುಲ್ ಅವರ ಬಳಿ ಹೋಗಿ ನಾನು ಸೋಶಿಯಲ್ ಮೀಡಿಯಾ ಹೆಡ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ನನ್ನಿಂದ ತಪ್ಪಾಗಿದೆ ಎಂದು ಹೇಳಿದೆ.

 

 

ಅದಕ್ಕೆ ಅವರು ನಗುತ್ತಾ ಇಟ್ಸ್​ ಒಕೆ, ಮುಂದಿನ ಸಲ ಪೋಸ್ಟ್ ಮಾಡುವಾಗ ಕೇರ್​ಫುಲ್ ಆಗಿರು ಎಂದು ಹೇಳಿದರು. ನನಗೆ ಕಣ್ಣೀರು ಬಂದುಬಿಟ್ಟಿತು ಎಂದು ಹೇಳಿದ್ದಾರೆ. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button