Entertainment

ಮದುವೆ ಮುರಿದಿದ್ದೇ ತಡ ಸನ್ಯಾಸಿನಿ ಆದ್ರಾ ನಟಿ ಚೈತ್ರಾ ಕೋಟೂರು?

ಲೇಖಕಿ, ಬಿಗ್‍ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರು ತಾವು ಸನ್ಯಾಸತ್ವ ಪಡೆದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

 

 

ಚೈತ್ರಾ ಅವರು ಇನ್‍ಸ್ಟಾಗ್ರಾಂನಲ್ಲಿ ಬೆಳಗಾವಿಯ ಓಶೋ ಧ್ಯಾನ ಮಂದಿರದಲ್ಲಿನ ಫೋಟೋ ಧ್ಯಾನ ಮತ್ತು ನೃತ್ಯ ಮಾಡಿದ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರಿಂದ ನಟಿ ಸನ್ಯಾಸ ಸ್ವೀಕರಿಸಿದ್ದಾರೆ ಎನ್ನಲಾಗಿತ್ತು. ಓಶೋ ಸನ್ಯಾಸ ದೀಕ್ಷೆ ಅಂದ್ರೆ ಎಲ್ಲವನ್ನೂ ತ್ಯಜಿಸುವದಲ್ಲ. ಮಠವಂತೂ ಅಲ್ಲವೇ ಅಲ್ಲ.

 

 

ಎಲ್ಲದರೊಳಗೆ ಇದ್ದುಕೊಂಡು ಬದುಕನ್ನು ಸಂತೋಷಮಯವಾಗಿ, ಸುಂದರಮಯವಾಗಿ ಅರ್ಥಪೂರ್ಣವಾಗಿ ಬದುಕುವುದು ಎಂದು ಚೈತ್ರಾ ತಿಳಿಸಿದ್ದಾರೆ. ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಚೈತ್ರಾ ತಾವು ಸನ್ಯಾಸಿನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

ಮದುವೆ ವಿಚಾರದಲ್ಲಿ ಕೋಲಾಹಲ. ಆರೋಪ ಪ್ರತ್ಯಾರೋಪಗಳಿಂದ ಬೇಸತ್ತಿದ್ದು ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರ ಕೊಟ್ಟೂರು ಅವರು ದಿಢೀರ್ ಅಂತಾ ಆಧ್ಯಾತ್ಮದ ಹಾದಿ ಹಿಡಿದಿದ್ದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ ಎಂಬ ವದಂತಿ ಹರಡಿತ್ತು.

 

 

ಸಿನಿಮಾ, ಸಾಹಿತ್ಯ ಮತ್ತು ರಿಯಾಲಿಟಿ ಶೋ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಚೈತ್ರ ಕೊಟ್ಟೂರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ತಾವು ಆಧ್ಯಾತ್ಮದ ಹಾದಿ ಹಿಡಿದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದರು ಇದು ಅನೇಕ ಅನುಮಾನಗಳನ್ನು ಉಟ್ಟಿಸಿತ್ತು.

 

 

ಚೈತ್ರಾ ಕೊಟ್ಟೂರು ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡಿದ್ದಾರೆ. ಆಧ್ಯಾತ್ಮ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಚೈತ್ರಾ ಭಾಗವಹಿಸುತ್ತಿದ್ದಾರೆ. ಇನ್ನು ತಮ್ಮ ಹೆಸರನ್ನು ಬದಲಿಸಿಕೊಂಡಿರುವ ಅವರು ಮಾ ಪ್ರಗ್ಯಾ ಭಾರತಿ ಎಂದು ಬರೆದುಕೊಂಡಿದ್ದಾರೆ. ಈಗ ಸನ್ಯಾಸಿನಿಯಾಗಿದ್ದಾರೆ ಎಂಬ ವದಂತಿಗೆ ತೆರೆಬಿದ್ದಿದೆ.

Related Articles

Leave a Reply

Your email address will not be published. Required fields are marked *

Back to top button