Entertainment

ತಮ್ಮಿಚ್ಚೆಯಂತೆ ಸೀಮಂತ ಮಾಡಿಕೊಂಡ ಕಿರುತೆರೆ ನಟಿ ಕುಲವಧು ಖ್ಯಾತಿಯ ಅಮೃತಾ ರಾಮಮೂರ್ತಿ…!!!

‘ಕುಲವಧು’ ಧಾರಾವಾಹಿ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ಅವರು ಸೀಮಂತ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿಯೇ ತಾಯಿಯಾಗುತ್ತಿರುವ ಖುಷಿಯಲ್ಲಿ ಇರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸೀಮಂತದ ಫೋಟೋ ಹಂಚಿಕೊಂಡಿದ್ದಾರೆ.

 

 

ಕನಸು ಈಡೇರಿದ ಖುಷಿಯಲ್ಲಿ ಅಮೃತಾ “ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು (ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಾಘವೇಂದ್ರ, ಅತ್ತೆ, ಮಾವ, ಅತ್ತಿಗೆ, ಅಣ್ಣ, ಅಮ್ಮ, ಅಪ್ಪ , ಅಕ್ಕ, ಬಾವ, ಸ್ನೇಹಿತರು, ಆತ್ಮೀಯರಿಗೆ ಧನ್ಯವಾದಗಳು” ಎಂದು ಅಮೃತಾ ರಾಮಮೂರ್ತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

 

 

ಅಮೃತಾ ರಾಮಮೂರ್ತಿ ಕನ್ನಡದ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಫೋಟೋ ಹಂಚಿಕೊಂಡು ತಾವು ತಾಯಿಯಾಗುತ್ತಿರುವ ವಿಷಯ ಹೇಳಿಕೊಂಡಿದ್ದರು. ಅದಕ್ಕೂ ಮುನ್ನವೇ ಅವರು ‘ಕಸ್ತೂರಿ ನಿವಾಸ’ ಧಾರಾವಾಹಿಯಿಂದ ಹೊರಬಂದಿದ್ದರು, ಆ ನಂತರದಲ್ಲಿ ಅವರ ಪಾತ್ರವನ್ನು ಕೂಡ ಮುಕ್ತಾಯ ಮಾಡಲಾಗಿತ್ತು. ಸದ್ಯ ಅಮೃತಾ ನಟನೆಯಿಂದ ದೂರವಿದ್ದಾರೆ.

 

 

ತಾಯಿಯಾಗುತ್ತಿರುವ ಅಮೃತಾಗೆ ಸಾಕಷ್ಟು ಜನರು ಶುಭಾಶಯ ತಿಳಿಸುತ್ತಿದ್ದಾರೆ. ಅಮೃತಾ ಪತಿ ರಾಘವೇಂದ್ರ ಕೂಡ ನಟರಾಗಿದ್ದು, ಪ್ರಸ್ತುತ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ಮಿಸ್ಟರ್ & ಮಿಸ್‌ಸ್‌ ರಂಗೇಗೌಡ’ ಧಾರಾವಾಹಿಯಲ್ಲಿ ನಟಿಸಿದ್ದ ಅಮೃತಾ ಹಾಗೂ ರಾಘವೇಂದ್ರ ನಡುವೆ ಸ್ನೇಹ ಬೆಸೆದಿತ್ತು, ಆನಂತರದಲ್ಲಿ ಅದು ಪ್ರೀತಿಗೆ ತಿರುಗಿ ಪಾಲಕರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು.

 

 

ವಿವಾಹ ವಾರ್ಷಿಕೋತ್ಸವದ ದಿನದಂದೇ ಸೋಶಿಯಲ್ ಮೀಡಿಯಾದಲ್ಲಿ ಅಮೃತಾ ರಾಮಮೂರ್ತಿ ಅವರು ತಾಯಿಯಾಗುತ್ತಿರುವ ವಿಚಾರ ಹಂಚಿಕೊಂಡಿದ್ದರು. ಅನೇಕ ಕಿರುತೆರೆ ಮಂದಿ ಸೇರಿ ನೆಟ್ಟಿಗರು ಅಮೃತಾ ಹಾಗೂ ರಾಘವೇಂದ್ರ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ. 2019ರಲ್ಲಿ ಈ ಜೋಡಿ ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಈ ಮದುವೆಗೆ ಹಾಜರಾಗಿ, ಶುಭ ಹಾರೈಸಿದ್ದರು.

Related Articles

Leave a Reply

Your email address will not be published. Required fields are marked *

Back to top button