Entertainment

ನಟ ಯಶಸ್ ಸೂರ್ಯ ಮದುವೆಯಲ್ಲಿ ಡಿಬಾಸ್ ದರ್ಶನ್..ದಂಪತಿಗಳಿಗೆ ಶುಭಾಶಯ ಕೋರಿದ ದಾಸ ಹೇಳಿದ್ದೇನು?

ಚಿಂಗಾರಿ’, ‘ಪರಮಶಿವ’, ‘ಚಕ್ರವರ್ತಿ’, ‘ರಾಮ ಧಾನ್ಯ’, ‘ಒಡೆಯ’ ಮುಂತಾದ ಸಿನಿಮಾಗಳಲ್ಲಿ ನಟಿಸಿ, ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ ಯಶಸ್ ಸೂರ್ಯ ಅವರು ಗುರುವಾರ (ಆ.12) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಯಶಸ್ ಸೂರ್ಯ. ಹೀರೋ, ಫೋಷಕ ಪಾತ್ರ.. ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿ, ಗಮನಸೆಳೆದಿರುವ ಯಶಸ್, ಇಂದು (ಆ.12) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರ್ಥಾತ್, ಅಂಬಿಕಾ ಅವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

 

 

ಬೆಂಗಳೂರಿನ ಬನಶಂಕರಿಯಲ್ಲಿ ಇರುವ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಅಂಬಿಕಾ ಅವರ ಜೊತೆಗೆ ಸಪ್ತಪದಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಯಶಸ್ ಸೂರ್ಯ. ಸರಳವಾಗಿ, ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ, ಈ ಮದುವೆಯನ್ನು ಮಾಡಲಾಗಿದೆ. ಮದುವೆಗೆ ಚಿತ್ರರಂಗದ ಗಣ್ಯರು, ಯಶಸ್ ಅವರು ಆಪ್ತರು, ಸ್ನೇಹಿತರು ಆಗಮಿಸಿ, ನೂತನ ವಧು-ವರರಿಗೆ ಶುಭಾಶಯ ತಿಳಿಸಿದ್ದಾರೆ.

 

 

2007ರಲ್ಲಿ ತೆರೆಕಂಡ ‘ಯುಗ ಯುಗಗಳೇ ಸಾಗಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಯಶಸ್, 2009ರಲ್ಲಿ ತೆರೆಕಂಡ ‘ಶಿಶರ’ ಸಿನಿಮಾದಿಂದ ಗಮನಸೆಳೆದರು. ‘ಚಿಂಗಾರಿ’, ‘ಪರಮಶಿವ’, ‘ಜಿಲೇಬಿ’, ‘ಚಕ್ರವರ್ತಿ’, ‘ಸೈಕೋ ಶಂಕರ’, ‘ರಾಮ ಧಾನ್ಯ’, ‘ಚಿಟ್ಟೆ’, ‘ಒಡೆಯ’ ಅವರ ನಟಿಸಿದ್ದ ಇನ್ನಿತರ ಸಿನಿಮಾಗಳು. 2019ರಲ್ಲಿ ತೆರೆಕಂಡ ಬಹುನಿರೀಕ್ಷಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಸಹದೇವನ ಪಾತ್ರವನ್ನು ಯಶಸ್ ನಿಭಾಯಿಸಿದ್ದರು.

 

 

ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಯಶಸ್ ಡಿಬಾಸ್ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ. ದರ್ಶನ್ ತಮ್ಮ ಗೆಳೆಯನ ಮದುವೆಗೆ ಆಗಮಿಸಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಸದ್ಯ ‘ಗೋಲ್ಡನ್ ಸ್ಟಾರ್’ ಗಣೇಶ್, ಮೇಘಾ ಶೆಟ್ಟಿ ನಟಿಸುತ್ತಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಯಶಸ್ ಸೂರ್ಯ ಅತಿಥಿ ಪಾತ್ರ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನ ಒಂದು ಇಂಪಾರ್ಟೆಂಟ್ ಸೀನ್‌ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button