Entertainment

ಶ್ರೀಮುರಳಿ ಜೊತೆಗೆ ಪ್ರೀತಿಗಾಗಿ ಸಿನಿಮಾದಲ್ಲಿ ನಟಿಸಿದ್ದ ನಟಿ ಶ್ರೀದೇವಿ ಅವರು ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?

 

ಚಿತ್ರರಂಗದಲ್ಲಿ ಅಭಿನಯಿಸುವ ನಟಿಯರ ಜೀವನವೇ ಹಾಗೆ. ತಮ್ಮ ಯಶಸ್ಸಿನ ಕುದುರೆ ಓಡುವಾಗ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಜನಪ್ರಿಯತೆ, ಖ್ಯಾತಿ ಹಾಗೂ ಒಂದಷ್ಟು ಹಣ ಸಂಪಾದಿಸಿ ಯಶಸ್ಸಿನ ಉತ್ತುಂಗದಲ್ಲಿರುತ್ತಾರೆ. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗ ಹಾಗೂ ಅಭಿಮಾನಿಗಳೆಲ್ಲರೂ ಮರೆತು ಹೋಗುವಷ್ಟು ಕಣ್ಮರೆಯಾಗಿ ಬಿಡುತ್ತಾರೆ.

 

 

ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿ ಕಣ್ಮರೆಯಾದ ನಟ ನಟಿಯರು ಇದ್ದಾರೆ. ಮದುವೆಯಾದ ನಂತರ ಸಾಕಷ್ಟು ನಟಿಯರು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಪ್ರೀತಿಗಾಗಿ ಸಿನಿಮಾ ನೆನಪಿರಬೇಕು. ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಶ್ರೀದೇವಿ ವಿಜಯ್ ಕುಮಾರ್ ಅವರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಅವರು ಈಗಲೂ ಮೊದಲಿನಂತೆಯೇ ಕಾಣುತ್ತಾರೆ.

 

 

ಅಕ್ಟೋಬರ್ 26, 1986ರಂದು ಕ್ಯಾಲಿಫೋರ್ನಿಯಾದಲ್ಲಿ ಶ್ರೀದೇವಿ ಅವರು ಜನಿಸಿದರು. ಇವರ ತಂದೆ ವಿಜಯ್ ಕುಮಾರ್ ಅವರು ತಮಿಳು ಚಿತ್ರರಂಗದ ಪ್ರಖ್ಯಾತ ನಟರಾಗಿದ್ದಾರೆ. ಅಲ್ಲದೇ ಇವರ ತಾಯಿ ಮಂಜುಳಾ ಅವರು ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರು. ಶೀದೇವಿ ಅವರು ವಿಜಯ್ ಹಾಗೂ ಮಂಜುಳ ದಂಪತಿಗಳ ಕಿರಿಯ ಮಗಳಾಗಿದ್ದು, ಕವಿತಾ, ವನಿತಾ ಹಾಗೂ ಅನಿತಾ ಎಂಬ ನಾಲ್ಕು ಜನ ಅಕ್ಕಂದಿರು ಇದ್ದಾರೆ. ಅಲ್ಲದೇ ಅರುಣ್ ವಿಜಯ್ ಎಂಬ ತಮ್ಮ ಕೂಡ ಇದ್ದಾರೆ.

 

 

ಬಾಲನಟಿಯಾಗಿ ತಮ್ಮ ಸಿನಿಮಾ ಜೀವನ ಪ್ರಾರಂಭಿಸಿದ ನಟಿ ಶ್ರೀದೇವಿ ಅವರು ರಿಕ್ಷಾಮಾಮ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದರು. ಇದಾದ ಬಳಿಕ ಶ್ರೀದೇವಿ ಅವರು ಕಾದಲ್ ವೈರಸ್ ಎಂಬ ಸಿನಿಮಾದ ಮೂಲಕ ಪರಿಪೂರ್ಣ ನಾಯಕಿಯಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು.

 

 

ಇದಾದ ಬಳಿಕ ಅವರು ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲೂ ನಟಿಸಲು ಪ್ರಾರಂಭಿಸಿದರು. ಅಲ್ಲದೇ, ಕನ್ನಡ ಸಿನಿಮಾ ರಂಗದಲ್ಲೂ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯೂ ಆದರು. ಶ್ರೀಮುರುಳಿ ಅವರ ಜೊತೆ ಪ್ರೀತಿಗಾಗಿ ಹಾಗೂ ಶಿವರಾಜ್‌ಕುಮಾರ್‌ ಅವರು ಅಭಿನಯಿಸಿದ ಕಾಂಚನ ಗಂಗಾ ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಈ ಸಿನಿಮದ ಮೂಲಕ ಕನ್ನಡ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಿನಿಮಾ ರಂಗದಲ್ಲಿ ಬೇಡಿಕೆ ಇರುವ ಸಂದರ್ಭದಲ್ಲೇ ಜೂನ್ 18, 2009ರಲ್ಲಿ ಹೈದರಾಬಾದ್ ನ ಖ್ಯಾತ ಉದ್ಯಮಿ ರಾಹುಲ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 

 

ಇವರಿಗೆ ಈಗ ರೂಪಿಕಾ ಎಂಬ ಮಗಳಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ಪತಿ ಸೇನಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ವಿವಾಹವಾಗಿ 12 ವರ್ಷಗಳೇ ಕಳೆದಿದೆ. ಅಂದಿನಿಂದ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ.

Related Articles

Leave a Reply

Your email address will not be published. Required fields are marked *

Back to top button