Entertainment

ಲವ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಪ್ರೇಮ್ ಅವರಿಗೆ ೨೧ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

 

ಸ್ನೇಹ, ಪ್ರೀತಿ, ಮದುವೆ ಎಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಕನಸುಗಳು ಇದ್ದೇ ಇರುತ್ತದೆ. ಆ ವ್ಯಕ್ತಿಗೆ ತಾನು ಇಷ್ಟಪಟ್ಟ ಹುಡುಗಿ ಅಥವಾ ಹುಡುಗ ಸಿಕ್ಕರೆ ಸ್ವರ್ಗವೇ ಸಿಕ್ಕಷ್ಟು ಸಂಭ್ರಮ ಪಡುತ್ತಾರೆ. ಮದುವೆ ಬಗ್ಗೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಯೂ ತನ್ನದೇ ಆದ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾನೆ. ತಾನು ಅಂದುಕೊಂಡಂತೆಯೇ ತನ್ನ ಬದುಕನ್ನು ಇಷ್ಟಪಟ್ಟ ಸತಿಯ ಜೊತೆಗೆ ಬದುಕಬೇಕು ಎಂಬೆಲ್ಲಾ ಕನಸು ಕಂಡಿರುತ್ತಾನೆ.

 

 

ಅದು ನೈಸರ್ಗಿಕವೂ ಹೌದು. ಅದರಲ್ಲೂ ಸೆಲೆಬ್ರಿಟಿಗಳು ಅಂದ ಮೇಲೆ ಕೇಳಬೇಕಾ? ಅವರುಗಳು ಸಾಮಾನ್ಯ ಜನರ ಕಾಣುವ ಕನಸುಗಳಿಂತ ಹೆಚ್ಚಾಗಿಯೇ ಕಾಣುತ್ತಾರೆ. ತಮ್ಮ ಬದುಕಿನಲ್ಲಿ ಹಾಗೆಯೇ ಬದುಕಿ ತೋರಿಸುವ ಮೂಲಕ ಮತ್ತೊಬ್ಬರಿಗೆ ಮಾದರಿಯನ್ನು ಹಾಕಿಕೊಡುತ್ತಾರೆ. ಅದೇ ದಾರಿಯನ್ನು ಅವರ ಅಭಿಮಾನಿಗಳು ಕೂಡ ಪಾಲಿಸುತ್ತಾರೆ.

 

 

ನೆನಪಿರಲಿ ಪ್ರೇಮ್ ಅವರು ಕೂಡ ತಮ್ಮ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಸಿನಿಮಾ ಕ್ಷೇತ್ರಕ್ಕೆ ಯಾವುದೇ ಗಾಡ್ ಫಾದರ್ ಇಲ್ಲದೇ, ತಮ್ಮ ಸ್ವಂತ ಪ್ರತಿಭೆಯಿಂದಲೇ ಮೇಲೆ ಬಂದವರು. ಪ್ರೇಮ್ ಕುಮಾರ್ ಅವರು ಕನ್ನಡ ಚಲನಚಿತ್ರ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್ ಪ್ರೇಮ್‌ ಎಂದೆಲ್ಲಾ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ೨೦೦೪ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದರು.

 

 

ಪ್ರೇಮ್ ಕುಮಾರ್ ಅವರು ಸಾಧಾರಣ ನೇಕಾರರ ಕುಟುಂಬ ವರ್ಗದಿಂದ ಬಂದವರು. ಅವರು ಕಲ್ಯಾಣಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಉದ್ಯೋಗ ಪಡೆದುಕೊಂಡರು. ಶಾಲೆಯಲ್ಲಿ ಓದುತ್ತಿದ್ದಾಗ ತಮ್ಮ ತಂದೆಯ ಜೊತೆಗೆ ನೇಕಾರನ ಕೆಸವನ್ನು ನಿರ್ವಹಿಸುತ್ತಿದ್ದರು.

 

 

ಬಾಲ್ಯದಿಂದಲೂ ಚಲನಚಿತ್ರಗಳ ಬಗ್ಗೆ ಅವರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ತಮ್ಮ ದುಡಿಮೆಯ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ಚಲನಚಿತ್ರ ವೀಕ್ಷಣೆ ಮಾಡಲು ವಿನಿಯೋಗಿಸುತ್ತಿದ್ದರು. ಅಲ್ಲದೇ, ಚಲನಚಿತ್ರ-ಸಂಬಂಧಿತ ನಿಯತಕಾಲಿಕೆಗಳು, ಪುಸ್ತಕಗಳು ಮತ್ತು ವೃತ್ತಪತ್ರಿಕೆಗಳನ್ನು ಖರೀದಿಸಲು ಖರ್ಚು ಮಾಡುತ್ತಿದ್ದರು. ಅವರಿಗೆ ಸಿನಿಮಾ ರಂಗದ ಯಾವುದೇ ಹಿನ್ನಲೆಯನ್ನು ಹೊಂದಿರಲಿಲ್ಲ.

 

 

ಆ ಸಮಯದಲ್ಲಿ ಜನಪ್ರಿಯ ನಿರ್ದೇಶಕರಾಗಿದ್ದ ಟಿ. ಎನ್. ಸೀತಾರಾಂ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತರ ಒತ್ತಾಯದ ಮೇರೆಗೆ ಅವರು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಟಿ. ಎನ್. ಸೀತಾರಾಂ ಅವರ ನಿರ್ದೇಶನದ ಮನ್ವಂತರ ಧಾರಾವಾಹಿಯಲ್ಲಿ ಎಂಟು ಸಂಚಿಕೆಗಳಲ್ಲಿ ಕಿರಿಯ ಕಲಾವಿದನಾಗಿ ಕಾಣಿಸಿಕೊಂಡರು. ಆ ಕಾಲಕ್ಕೆ ಪ್ರತಿ ಸಂಚಿಕೆಗೆ 300 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

 

 

ಇದಾದ ಬಳಿಕ ಅರ್ಧ ಸತ್ಯ ಎಂಬ ಧಾರಾವಾಹಿಯ ಒಂದು ಸಂಚಿಕೆಯಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಅವರು ನಟನೆಯನ್ನು ಗಂಭೀರವಾಗಿ ತೆಗೆದುಕೊಂಡರು ಮತ್ತು ಪ್ರಾಣ ಸಿನಿಮಾದ ಪಾತ್ರವೊಂದಕ್ಕೆ ಆಡಿಷನ್ ನಲ್ಲಿ ಭಾಗವಹಿಸಿದರು. ಅಲ್ಲಿ ಅವರು ನಾಯಕರಾಗಿ ಆಯ್ಕೆಯಾದರು. ಅಲ್ಲಿಂದ ಅವರ ಸಿನಿಮಾ ಪ್ರಯಾಣ ಪ್ರಾರಂಭವಾಯಿತು.

 

 

ನಟ ‘ನೆನಪಿರಲಿ’ ಪ್ರೇಮ್ ಅವರು ಆಗಸ್ಟ್ ೧, ೨೦೦೦ದಲ್ಲಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳುತ್ತಾರೆ. ಪ್ರೇಮ್ ಅವರು ಇಂದಿಗೆ ೨೧ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರೇಮ್ ಅವರದ್ದು ಪ್ರೇಮ ವಿವಾಹ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲೇ ಇವರು ವಿವಾಹ ಮಾಡಿಕೊಂಡಿದ್ದರು.

 

 

 

ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ‌್ಳ ವೀರಪ್ಪನ್ ಅವರು ಕಿಡ್ನಾಪ್ ಮಾಡಿದ ಎರಡು ದಿನಗಳ ನಂತರ ಮದುವೆಯನ್ನು ಮಾಡಿಕೊಂಡರು. ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿರುವ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಇವರು ತಮ್ಮ ಮದುವೆ ಸಮಾರಂಭವನ್ನು ಮಾಡಿಕೊಂಡರು. ಆ ಸಮಯದಲ್ಲಿ ಕರ್ನಾಟಕದಲ್ಲಿ ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿದ್ದರಿಂದ ಇಡೀ ರಾಜ್ಯವೇ ಬಂದ್ ಆಗಿತ್ತು. ಆ ವೇಳೆಯಲ್ಲೇ ಪ್ರೇಮ್ ಅವರು ಜ್ಯೋತಿ ಅವರನ್ನು ವಿವಾಹವಾದರು. ಇಂದಿಗೆ ವಿವಾಹವಾಗಿ ಬರೋಬ್ಬರಿ ೨೧ ವರ್ಷಗಳೇ ಕಳೆದಿದೆ.

Related Articles

Leave a Reply

Your email address will not be published. Required fields are marked *

Back to top button