News

ಮೈಸೂರಿನ ಅತ್ಯಾ@ರ ವಿಡಿಯೋ ವೈರಲ್ ಹುಡುಗಿಯ ಪ್ರೀಯತಮನ ಗುಟ್ಟು ರಟ್ಟಾಯ್ತು..!

ಮೈಸೂರು ಅತ್ಯಾ@ರ ಪ್ರಕರಣ ಸಂಬಂಧ ಐವರು ಕಾಮುಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 85 ಗಂಟೆಗಳ ಕಾಲ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮೂಹಿಕ ಅತ್ಯಾ@ರವೆಸಗಿದ ಬಳಿಕ ಆರೋಪಿಗಳು ಪರಾರಿ ಆಗಿದ್ದರು. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆಂದು ತಿಳಿದುಬಂದಿದೆ.

 

 

 

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾ@ರ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಘಟನೆ ನಡೆದ ಮೂರು ದಿನಗಳಲ್ಲಿ ಪ್ರಕರಣವನ್ನು ಬೇಧಿಸಿದ ಮೈಸೂರು ಪೊಲೀಸರ ತಂಡ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಮೈಸೂರು ಅತ್ಯಾ@ರ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಯಶಸ್ವಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೆ.

 

 

ಹೀಗಾಗಿ 6 ವಿಶೇಷ ರಹಸ್ಯ ತಂಡಗಳನ್ನು ರಚಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಕರ್ನಾಟಕ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದರು. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಶೀಘ್ರವೇ ಬಂಧಿಸಿದರು ಅಂತಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾ@ರ  ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನ ಪೊಲೀಸರ ತಂಡ ಹೆಡೆಮುರಿ ಕಟ್ಟಿ ಮೈಸೂರಿಗೆ ಕರೆತಂದಿದೆ.

 

 

ಆರೋಪಿಗಳನ್ನು ಹೆಡೆಮುರಿ ಕಟ್ಟಿದ ತಂಡದಲ್ಲಿ ಎಸಿಪಿ ಶಿವಶಂಕರ್, ಪೊಲೀಸ್ ಇನ್‍ಸ್ಪೆಕ್ಟರ್ ಗಳಾದ ಶ್ರೀಕಾಂತ್, ಮಹಾದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಜಯಪ್ರಕಾಶ್, ಸಹಾಯಕ ಸಬ್ ಇನ್‍ಸ್ಪೆಕ್ಟರ್ ಗಳಾದ ಅನಿಲ್ ಮತ್ತು ಅಲೆಕ್ಸ್, ಹೆಡ್ ಕಾನ್‍ಸ್ಟೇಬಲ್ ರಮೇಶ್, ಕಾಂತರಾಜು, ಭಗತ್, ಶರೀಫ್, ಮಹಾದೇವು, ರಾಜು ಹಾಗೂ ಪೊಲೀಸ್ ಕಾನ್‍ಸ್ಟೇಬಲ್ ಜೀವನ್, ಗಿರೀಶ್, ಸಾಗರ್ ಮತ್ತು ಸಿಬ್ಬಂದಿಗಳಾದ ಮಂಜುನಾಥ್, ಕಿಶೋರ್ ಹಾಗೂ ಲತೀಫ್ ಇದ್ದರು.

 

 

ಬಂಧಿತ ಆರೋಪಿಗಳನ್ನು ಗೌಪ್ಯ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇಡೀ ಪ್ರಕರಣ ಭೇದಿಸಿದ್ದಲ್ಲಿ ನಾಲ್ವರು ಪ್ರಮುಖರು. ಹೌದು, ಒಬ್ಬರು ಡಿಸಿಪಿ, ಒಬ್ಬರು ಇನ್ಸ್‌ ಪೆಕ್ಟರ್, ಇಬ್ಬರು ಸಿಡಿಆರ್ ವಿಭಾಗದ ಸಿಬ್ಬಂದಿ. ಘಟನೆ ನಡೆದ ಬೆನ್ನಲ್ಲೆ ಪ್ರಕರಣ ಇಡಿ ರಾಜ್ಯಾದ್ಯಂತ ಭಾರಿ ಸುದ್ಧಿಯಾಗಿತ್ತು. ಈ ಮಧ್ಯೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದ ಮೊದಲ ದಿನವೇ ಬಸ್ ಟಿಕೆಟ್ ಪತ್ತೆಯಾಗಿತ್ತು. ಮೈಸೂರಿನಲ್ಲಿ ಘಟನೆ ನಡೆದ ಸ್ಥಳ, ಮತ್ತೊಂದು ಚಾಮರಾಜನಗರ ಒಟ್ಟು ಎರಡು ಕಡೆಗಳಲ್ಲಿ ಮೊಬೈಲ್ ಟವರ್ ಡಂಪ್ ನಡೆಸಲಾಗಿತ್ತು.

 

 

ಆರೋಪಿಗಳು ತಾಳವಾಡಿಯಿಂದ ಚಾಮರಾಜನಗರಕ್ಕೆ ಬಂದಿದ್ದರು. ಹೀಗಾಗಿ ಪೊಲೀಸರಿಗೆ ಎರಡೂ ಕಡೆಗಳಲ್ಲಿ ಒಂದೇ ಸಿಮಿಲರ್ ನಂಬರ್ ಸಿಕ್ಕಿದ್ದು, ಆ ಒಂದೇ ನಂಬರ್ ಜಾಡು ಹಿಡಿದು ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಮೈಸೂರಿನಲ್ಲಿ ಆಗಸ್ಟ್ 24 ರ ಸಂಜೆ 7 ರಿಂದ‌9 ಗಂಟೆ ಸಮಯ. ಚಾಮರಾಜನಗರದಲ್ಲಿ ಅಂದೇ ಮಧ್ಯಾಹ್ನ 2 ರಿಂದ 3 ಗಂಟೆ ಸಮಯದ ಟವರ್ ಡಂಪ್ ನಡೆದಿತ್ತು. ಈ ಮಾರ್ಗದಲ್ಲಿ ಖಾಕಿಪಡೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.

 

Related Articles

Leave a Reply

Your email address will not be published. Required fields are marked *

Back to top button