Entertainment

ನಟ ಮಂಡ್ಯ ರಮೇಶ್‌ ಅವರ ಮನೆಗೆ ಬಂದ ಅಪರೂಪದ ಅತಿಥಿ, ಅದನ್ನು ಬೆಚ್ಚಿ ಬಿದ್ದ ಮಂಡ್ಯ ರಮೇಶ್

ಕೊರೊನಾ ಲಾಕ್‌ ಡೌನ್‌ ನ ಪರಿಣಾಮವಾಗಿ ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ಎಲ್ಲರಿಗೂ ಉಂಟಾಗಿದೆ. ಹಾಗಾಗಿ ಮಂಡ್ಯ ರಮೇಶ್‌ ಅವರು ಕೂಡ ತಮ್ಮ ಮನೆಯಲ್ಲೇ ಕಾಲ ಕಳೆಯುತ್ತಿದ್ದವರಿಗೆ ಶಾಕ್‌ ಆಗಿದೆ. ಮನೆಯಲ್ಲೇ ಇದ್ದು ಕಾಲ ಕಳೆಯುತ್ತಿದ್ದ ಮಂಡ್ಯ ರಮೇಶ್‌ ಅವರ ಮನೆಗೆ ಅಪರೂಪದ ಅತಿಥಿ ಮನೆಗೆ ಎಂಟ್ರಿ ಕೊಟ್ಟಿದ್ದು ನೋಡಿ ಶಾಕ್‌ ಆಗಿದ್ದಾರೆ. ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಪುಟಾಣಿ ಹಾವಿನ ಮರಿಯನ್ನು ಕಂಡು ಪ್ಲಾಸ್ಟಿಕ್‌ ಡಬ್ಬದಲ್ಲಿ ಹಾವನ್ನು ಮುಚ್ಚಿಟ್ಟಿದ್ದರು.

 

 

ಇದಾದ ಬಳಿಕ ಉರಗ ಸಂರಕ್ಷಕ ಸೂರ್ಯ ರವಿ ಅವರಿಂದ ಹಾವಿನ ಮರಿಯನ್ನು ಸುರಕ್ಷಿತ ಜಾಗಕ್ಕೆ ರವಾನೆ ಮಾಡಲಾಗಿದೆ. ತೋಳದ ಜಾತಿಯ ವಿಷರಹಿತ ಹಾವಿನ ಮರಿ ಇದಾಗಿತ್ತು. ಮನೆಯಲ್ಲಿ ಹಾವಿನ ಮರಿಯನ್ನು ಕಂಡು ಭಯ ಭೀತರಾಗಿದ್ದರು. ಆದರೆ ಉರಗ ತಜ್ಞ ಸೂರ್ಯ ಅವರು ಮಂಡ್ಯ ರಮೇಶ್‌ ಅವರ ಮನೆಗೆ ತೆರಳಿ ಅಲ್ಲಿದ್ದ ಹಾವಿನ ಮರಿಯನ್ನು ಕೈಯಲ್ಲಿ ಹಿಡಿಯುವಂತೆ ಮಂಡ್ಯ ರಮೇಶ್‌ ಅವವರಿಗೆ ಮನವೊಲಿಸಿದರು.

 

 

ಹಾವಿನ ಮರಿಯನ್ನು ಕೈಯಲ್ಲಿ ಹಿಡಿಯಲು ನಿಜಕ್ಕೂ ಭಯವಾಗುತ್ತದೆ ಎಂದು ಹೆದರಿದ್ದರು. ಆದರೆ ಸೂರ್ಯ ಅವರು ಇದು ಏನೂ ಮಾಡುವುದಿಲ್ಲ. ಇದರಲ್ಲಿ ವಿಷ ಕೂಡ ಇಲ್ಲ ಎಂದು ಭರವಸೆ ನೀಡಿದ ನಂತರ ಕೈಯಲ್ಲಿ ಹಿಡಿಯಲು ಮುಂದಾದರು. ಅಲ್ಲದೇ, ೫೦೦೦ ಪ್ರೇಕ್ಷಕರ ಮುಂದೆ ನಿಂತುಕೊಂಡು ನಟನೆ ಮಾಡುತ್ತೇನೆ. ಆದರೆ ಹಾವು ಎಂದರೆ ಮಾತ್ರ ತುಂಬಾ ಭಯ ಎಂದು ತಮ್ಮ ಆತಂಕವನ್ನು ಹೊರಹಾಕಿದ್ದಾರೆ.

 

 

ಅವರೇ ಹೇಳಿದಂತೆ, ಮೊದಲು ಹಾವಿನ ಮರಿಯನ್ನು ಎರೆಹುಳು ಎಂದುಕೊಂಡಿದ್ದರಂತೆ. ಆಮೇಲೆ ಸರಿಯಾಗಿ ನೋಡಿದಾಗಲೇ ಅದು ಹಾವಿನ ಮರಿ ಎಂಬುದು ಅರಿವಾಯಿತು. ಹಾಗಾಗಿ ನಿಮಗೆ ಕರೆ ಮಾಡಿ ತಿಳಿಸಿದೆ ಎಂದಿದ್ದಾರೆ. ಹೌದು ಸಹಜವಾಗಿ ಹಾವು ಅಥವಾ ಹಾವಿನ ಮರಿಯನ್ನು ನೋಡಿದಾಗ ಎಂಥವರಿಗೂ ಭಯವಾಗುತ್ತದೆ. ಆದರೆ ಅವುಗಳನ್ನು ಅಲ್ಲೇ ಹೊಡೆದು ಸಾಯಿಸುವ ಬದಲು ಉರಗ ತಜ್ಞರನ್ನು ಕರೆಸಿ ಅದನ್ನು ಸುರಕ್ಷಿತ ಪ್ರದೇಶಗಳಿಗೆ ಬಿಡುವುದು ಕ್ಷೇಮ.

 

 

ಹಾವು ಕೂಡ ಮನುಷ್ಯನಂತೆಯೇ ಒಂದು ಪ್ರಾಣಿ ಎಂಬುದನ್ನು ಮರೆಯಬಾರದು. ಅದನ್ನು ಕಂಡ ಕಂಡ ಕಡೆ ಸಾಯಿಸಿ ಹುತ್ತ ಹೋಗಿ ಹಾಲು ಎರೆದರೆ ಏನು ಪ್ರಯೋಜನ ಎಂದು ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಹಾವುಗಳನ್ನು ಸಾಯಿಸಬೇಡಿ. ಬದಲಾಗಿ ಅವುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿ ಅವುಗಳು ಬದುಕಲು ಅವಕಾಶ ಮಾಡಿಕೊಡಿ ಎಂಬುದೇ ನಮ್ಮ ಕಳಕಳಿಯ ಮನವಿ.

 

Related Articles

Leave a Reply

Your email address will not be published. Required fields are marked *

Back to top button