Entertainment

ಕೋಟಿ ರಾಮು ಕೊನೆ ಆಸೆ ನೆರವೇರಿಸಿದ ನಟಿ ಮಾಲಾಶ್ರೀ ಮಗಳು! ನಿಜಕ್ಕೂ ಮೆಚ್ಚಲೇ ಬೇಕು ಶಾಕಿಂಗ್!

ಕನ್ನಡ ಸಿನಿಮಾ ರಂಗದಲ್ಲಿ ಕನಸಿನ ರಾಣಿ ಎಂದೇ ಹೆಸರು ಮಾಡಿದ್ದ ಮಾಲಾಶ್ರೀ ಅವರು ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದರು. ಅವರು ಪತಿ ಕೋಟಿ ರಾಮು ಅವರು ಕೊರೊನಾ ಕಾರಣದಿಂದಾಗಿ ಮೃತಪಟ್ಟಿದ್ದರು. ಹಾಗಾಗಿ ಇಡೀ ಚಿತ್ರರಂಗವೇ ಅವರ ಸಾವಿಗೆ ಕಂಬನಿ ಮಿಡಿದಿತ್ತು. ಅವರ ಸಾವು ನಿಜಕ್ಕೂ ಬಹುದೊಡ್ಡ ಶಾಕ್‌ ಹಾಗೂ ನೋವನ್ನು ತಂದಿದ್ದು ಮಾತ್ರ ಸುಳ್ಳಲ್ಲ.

 

 

ಕೊರೊನಾ ಕಾರಣದಿಂದಾಗಿ ಪತಿ ಸಾವನ್ನಪ್ಪಿದ ನಂತರ ಸಹಜವಾಗಿ ಮಾಲಾಶ್ರೀ ಅವರು ಕುಟುಂಬದ ನಿರ್ವಹಣೆಯ ಜವಾಬ್ದಾರಿ ಅವರ ಹೆಗಲ ಮೇಲೆಯೇ ಹಾಕಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳು ತಮ್ಮ ತಂದೆಯ ಸಮಾಧಿ ಬಳಿ ತೆರಳಿ ಅವರ ಕೊನೆಯ ಆಸೆಯನ್ನು ನೆನದು ಕಣ್ಣೀರು ಸುರಿಸಿದ್ದಾರೆ.

 

 

ಕೋಟಿ ರಾಮು ಅವರು ಪತ್ನಿ ಮಾಲಾಶ್ರೀ ಹಾಗೂ ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು. ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಕೊಡಿಸಿ ಅವರನ್ನು ದೊಡ್ಡ ಹುದ್ದೆಯಲ್ಲಿ ನೋಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲದೇ, ತಮ್ಮ ಮಕ್ಕಳಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡಿ ಸ್ವತಃ ಅವರೇ ಅದಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಬೇಕು ಎಂದೆಲ್ಲಾ ಅಂದುಕೊಂಡಿದ್ದರು.

 

 

ಕೋಟಿ ರಾಮು ಅವರು ನಿಧನ ಹೊಂದಿ ಒಂದು ತಿಂಗಳ ನಂತರ ತಂದೆಯ ಸಮಾಧಿ ಬಳಿ ಬಂದು ಅಪ್ಪನ ಆಸೆಯಂತೆ ನಾವು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರುತ್ತೇವೆ. ನಮಗೆ ಸಿನಿಮಾ ಬಗ್ಗೆ ಅಷ್ಟೊಂದು ಆಸಕ್ತಿಯಿಲ್ಲ. ಆದರೆ ವಿದ್ಯಾಭ್ಯಾಸ ಮುಗಿದ ಬಳಿಕ ಅಮ್ಮ ಹೇಳಿದ ಹಾಗೆ ಮುಗಿದ ಮಾಡುತ್ತೇವೆ ಎಂದಿದ್ದಾರೆ. ಮಾಲಾಶ್ರೀ ಹಾಗೂ ರಾಮು ಅವರ ಹಾಗೆಯೇ ಅವರ ಮಕ್ಕಳು ಕೂಡ ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲಿ ಎಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

 

 

ಮಾಲಾಶ್ರೀ ಅವರು ಕನ್ನಡ ಚಿತ್ರರಂಗಕ್ಕೆ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಟ ರಾಘವೇಂದ್ರ ರಾಜ್‌ ಕುಮಾರ್‌ ಅವರ ಜೊತೆಗೆ ನಾಯಕಿಯಾಗಿ ಅಭಿನಯಿಸಿದರು. ಅಲ್ಲಿಂದ ಪ್ರಾರಂಭವಾದ ಸಿನಿಮಾ ಪ್ರಯಾಣ ಬಹಳ ದಿನಗಳವರೆಗೆ ನಡೆಯಿತು. ಅಂದಿನ ಕಾಲದಲ್ಲಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದರು. ವರ್ಷವೊಂದಕ್ಕೆ ಆಕೆ ಏನಿಲ್ಲಾ ಎಂದರೂ ಸುಮಾರು ೧೨-೧೫ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

 

 

ಇದಾದ ನಂತರ ನಿರ್ಮಾಪಕ ರಾಮು ಅವರ ಮಾಲಾಶ್ರೀ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಇಬ್ಬರು ಮಕ್ಕಳನ್ನು ಪಡೆದು ಸುಖವಾದ ದಾಂಪತ್ಯವನ್ನು ನಡೆಸಿದರು. ಆದರೆ ದುರಾದೃಷ್ಟವಶಾತ್‌ ರಾಮು ಅವರು ಇತ್ತೀಚೆಗೆ ಕೊರೊನಾ ಕಾರಣದಿಂದಾಗಿ ನಿಧನ ಹೊಂದಿದರು.

Related Articles

Leave a Reply

Your email address will not be published. Required fields are marked *

Back to top button