Entertainment

ಶಂಕರ್‌ ಅಶ್ವಥ್‌ ಅವರು ಈಗ ಎಲ್ಲಿದ್ದಾರೆ? ಏನು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಗೊತ್ತಾ?

ಶಂಕರ್‌ ಅಶ್ವಥ್‌ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹಳ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟ ಕೆ. ಎಸ್.‌ ಅಶ್ವಥ್‌ ಅವರ ಮಗ ಶಂಕರ್‌ ಅಶ್ವಥ್‌ ಅವರು. ಶಂಕರ್‌ ಕೂಡ ತಮ್ಮ ತಂದೆಯಂತೆ ಪ್ರತಿಭಾನ್ವಿತ ನಟರಾಗಿದ್ದಾರೆ. ಆದರೆ ಕೆಲವೊಮ್ಮೆ ಚಿತ್ರರಂಗದಲ್ಲಿ ನಟಿಸಲು ಅವಕಾಶ ಸಿಗದೇ ಇದ್ದಾಗ ಖಾಲಿ ಕೂರುವ ವ್ಯಕ್ತಿ ಇವರು ಅಲ್ಲವೇ ಅಲ್ಲ.

 

 

ತಮ್ಮ ಬದುಕಿನ ಬಂಡಿಯನ್ನು ನಡೆಸಲು ಇವರು ಯಾವುದೇ ಗೌರವಾನ್ವಿತ ಕೆಲಸ ಮಾಡಲೂ ಹಿಂಜರಿಯುವುದಿಲ್ಲ. ಇವರು ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರ ಹೆಂಡತಿ ಈಗಲೂ ಮೈಸೂರಿನಲ್ಲಿ ತಮ್ಮ ಮನೆಯಲ್ಲಿ ಊಟದ ಕೇಟರಿಂಗ್ ನಡೆಸುತ್ತಾರೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಪಿಜಿಯನ್ನು ನಡೆಸಿ ಜೋವನ ಸಾಗಿಸುತ್ತಾರೆ. ದಂಪತಿಗಳಿಬ್ಬರೂ ಶ್ರಮ ಜೀವಿಗಳು.

 

 

ಶಂಕರ್‌ ಅಶ್ವಥ್‌ ಅವರು ಬದುಕು ಸಾಮಾನ್ಯ ಜನರೆಲ್ಲರಿಗೂ ಸ್ಫೂರ್ತಿದಾಯಕವಾದುದು. ಇವರು ತಮ್ಮ ಬದುಕಿನಲ್ಲಿ ಸ್ವಾಭಿಮಾನಿಯಾಗಿ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗದೇ ಇದ್ದಾಗ ಊಬರ್‌ ಕ್ಯಾಬ್‌ ಓಡಿಸುವ ಮೂಲಕ ತಮ್ಮ ಬದುಕನ್ನು ನಡೆಸಿದರು. ಈ ಬಾರಿ ಶಂಕರ್‌ ಅಶ್ವಥ್‌ ಅವರು ಬಿಗ್‌ ಬಾಶ್‌ ನಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಆದರೆ ೫ನೇ ವಾರಕ್ಕೆ ಅವರು ಹೊರಬಂದರು.

 

 

ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಆಕ್ಟೀವ್‌ ಇರುವುದರಿಂದ ಇವರು ಅಭಿಮಾನಿಗಳ ಜೊತೆಗೆ ಒಂದಲ್ಲಾ ಒಂದು ಒಳ್ಳೆಯ ವಿಚಾರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ರಾಜ್ಯದಲ್ಲಿ ಈಗ ಲಾಕ್‌ ಡೌನ್‌ ಇರುವುದರಿಂದ ಅವರು ಮನೆಯಲ್ಲೇ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಡಿದು ತಿನ್ನುವುದಕ್ಕಿಂತ ದುಡಿಯುವುದು ಮೇಲು. ಬಡಿದು ತಿಂದರೆ ನಮ್ಮ ಸಂತಾನವನ್ನು ಹಾಳುಮಾಡುತ್ತದೆ. ಆದರೆ ದುಡಿದು ತಿಂದರೆ ನಮ್ಮನ್ನು ಅದೆಷ್ಟೋ ದುಪ್ಪಟ್ಟು ಕಾಪಾಡುತ್ತದೆ. ಇದು ನಮ್ಮ ತಂದೆ ನನಗೆ ಹೇಳಿಕೊಟ್ಟ ಪಾಠ.

 

 

ಊಬರ್‌ ಓಡಿಸಲು ಲಾಕ್‌ ಡೌನ್‌ ಇರುವುದರಿಂದ ಸಾಧ್ಯವಿಲ್ಲ. ಹಾಗಾಗಿ ದುಡಿಮೆ ಮಾಡಲು ನಮ್ಮ ಮನೆಯಿಂದ ೨೦ ಕಿಮೀ ದೂರದಲ್ಲಿರುವ ಮನೆಯ ಜನರೊಂದಿಗೆ ಕೈ ಜೋಡಿಸಿದ್ದೇನೆ. ಮನೆಯಲ್ಲಿ ಕೂತು ಸುಮ್ಮನೆ ಕಾಲ ಕಳೆಯುವುದಕ್ಕಿಂತ ಊಟ ಕ್ಯಾರಿಯರ್ಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸಿದರೆ ಆ ದಿನದ ಸಂಪಾದನೆಯೂ ಆಗುತ್ತದೆ. ಅಲ್ಲದೇ, ಆ ದಿನ ನೆಮ್ಮದಿಯಿಂದ ನಿದ್ದೆಯನ್ನೂ ಮಾಡಬಹುದು ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

 

 

ಹೌದು ಕೂತು ಮನೆಯಲ್ಲಿ ಕಾಲಹರಣ ಮಾಡುವುದಕ್ಕಿಂತ ನಮ್ಮ ಕೈಲಾದಷ್ಟು ದುಡಿಮೆ ಮಾಡುತ್ತಾ ಸ್ವಾಭಿಮಾನದಿಂದ ಜೀವನ ನಡೆಸುವುದು ಮೇಲು. ಅದರಲ್ಲೂ ಈಗ ರಾಜ್ಯದಲ್ಲಿ ಲಾಕ್‌ ಡೌನ್‌ ಇರುವುದರಿಂದ ಸಾಕಷ್ಟು ಜನರಿಗೆ ಊಟದ ಅಗತ್ಯವಿರುತ್ತದೆ. ಅಗತ್ಯವಿರುವವರಿಗೆ ಊಟ ಮಾಡಿ, ಅವರಿಗೆ ತಲುಪಿಸಿದರೆ ಅವರಿಗೆ ಊಟ ಹಾಕಿದ ಪುಣ್ಯವೂ ಬರುತ್ತದೆ ಎಂಬುದು ಸುಳ್ಳಲ್ಲ. ಹೀಗೆ ಸ್ವಾಭಿಮಾನದ ದುಡಿಮೆಯ ಹಾದಿ ಹಿಡಿದಿರುವ ಶಂಕರ್‌ ಅಶ್ವಥ್‌ ಅವರಿಗೆ ನಮ್ಮ ಕಡೆಯಿಂದಲೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

Related Articles

Leave a Reply

Your email address will not be published. Required fields are marked *

Back to top button