Entertainment

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕಷ್ಟ ಪಟ್ಟು ದುಡಿದು ಕಟ್ಟಿಸಿರುವಮನೆ ಹೇಗಿದೆ ನೋಡಿದ್ದೀರಾ?

ಕರ್ನಾಟಕದ ಕ್ರಶ್‌ ಎಂದೇ ಖ್ಯಾತರಾಗಿದ್ದ ರಶ್ಮಿಕಾ ಮಂದಣ್ಣ ಅವರ ನ್ಯಾಷನಲ್‌ ಕ್ರಶ್‌ ಆಗಿದ್ದಾರೆ. ಈಕೆ ಮೂಲತಃ ಕೊಡಗಿನವರಾಗಿದ್ದು, ಮಾಡೆಲಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಇದ್ದಿದ್ದರಿಂದ ಅವರು ಬೆಂಗಳೂರಿಗೆ ಬಂದರು. ಅಲ್ಲಿಂದ ಅವರು ಕಿರಿಕ್‌ ಪಾರ್ಟಿ ಸಿನಿಮಾಕ್ಕೆ ಆಯ್ಕೆಯಾದರು. ಅಲ್ಲಿಂದ ಅವರ ಸಿನಿಮಾ ಪ್ರಯಾಣ ಪ್ರಾರಂಭವಾಯಿತು.

 

 

ಏಪ್ರಿಲ್‌ ೫, ೧೯೯೯ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ಕೊಡಗಿನ ಬೆಡಗಿ ರಶ್ಮಿಕಾ ಅವರು ೨೦೧೯ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆಕೆ ನಟಿಸಿದ ಮೊದಲ ಚಿತ್ರಕ್ಕೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.

 

 

ಇದಾದ ನಂತರ ಪುನೀತ್‌ ರಾಜ್‌ ಕುಮಾರ್‌ ಅವರ ಜೊತೆಗೆ ಅಂಜನಿಪುತ್ರ, ದರ್ಶನ್‌ ಅವರ ಜೊತೆಗೆ ಯಜಮಾನ ಸಿನಿಮಾದಲ್ಲಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಜೊತೆ ಚಮಕ್‌, ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರ ಜೊತೆಗೆ ಪೊಗರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸಟಾರ್‌ ಗಳ ಜೊತೆಗೆ ನಟಿಸುವ ಸೈ ಎನಿಸಿಕೊಳ್ಳುತ್ತಾರೆ.

 

 

ಇದೇ ವೇಳೆಗೆ ಅವರು ತೆಲುಗು ಚಿತ್ರರಂಗವನ್ನು ಪ್ರವೇಶ ಮಾಡುತ್ತಾರೆ. ಅಲ್ಲಿಯೂ ಕೂಡ ದೊಡ್ಡ ದೊಡ್ಡ ನಟರ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗುತ್ತಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ತಮಿಳು ಹಾಗೂ ಬಾಲಿವುಡ್‌ ತನಕ ಇವರು ದಾಪುಗಾಲು ಹಾಕಿದ್ದಾರೆ.

 

 

ಪರಿಸರದ ಮಧ್ಯೆದಲ್ಲಿ ವಿರಾಜಮಾನವಾಗಿ ಕಟ್ಟಿಸಿರುವ ಬಂಗಲೆಯಂತಹ ಮನೆಯನ್ನು ಅವರು ಕೊಡಗಿನಲ್ಲಿ ಹೊಂದಿದ್ದಾರೆ. ಕೊಡಗು ಯಾವಾಗಲೂ ಪರಿಸರದ ಮಡಿಲಿನಲ್ಲಿರುವ ಪ್ರದೇಶ ಇಲ್ಲಿ ಎಲ್ಲಿ ನೋಡಿದರೂ ಹಸಿರೇ ಕಾಣಸಹುತ್ತದೆ. ಇಲ್ಲಿನ ವಾತಾವರಣ ಯಾವಾಗಲೂ ತಂಪಾಗಿರುತ್ತದೆ. ಸಿನಿಮಾ ಚಿತ್ರೀಕರಣ ಇಲ್ಲವಾದಲ್ಲಿ ರಶ್ಮಿಕಾ ಅವರು ಇಲ್ಲಿರುವ ಮನೆಗೆ ಬಂದು ತನ್ನ ತಂಗಿಯ ಜೊತೆಗೆ ತುಂಟಾಟ ಮಾಡುತ್ತಾ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ.

 

 

ಇವರು ಹೈದರಾಬಾದ್‌ ಹಾಗೂ ಬೆಂಗಳೂರಿನಲ್ಲೂ ಮನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರು ಬಹುತೇಕ ಸಮಯ ಹೈದರಾಬಾದ್‌ ಅಥವಾ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಾರೆ. ಹಾಗಾಗಿ ಅಲ್ಲಿಯೂ ವಾಸ ಕೂಡ ಮಾಡಲು ಮನೆಯನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಅವರಿಗೆ ವಿರಾಜಪೇಟೆಯಲ್ಲಿರುವ ಈ ಮನೆಯೆಂದರೆ ಬಹಳ ಅಚ್ಚುಮೆಚ್ಚು.

 

 

ರಶ್ಮಿಕಾ ಅವರು ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಅವರು ದೇಶದ ನಟಿಯಾಗಿ ಬೆಳೆಯುತ್ತಿದ್ದಾರೆ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ನಾವೂ ಹಾರೈಸುತ್ತೇವೆ.

Related Articles

Leave a Reply

Your email address will not be published. Required fields are marked *

Back to top button