Entertainment

ಪಟ್ಟುಗೌರಿ ಮದುವೆ ಧಾರಾವಾಹಿಯ ಬಾಲ ನಟ ಮಹೇಶ ಯಾರು ಗೊತ್ತಾ? ಅವರ ತಂದೆ ಕೂಡ ಖ್ಯಾತ ನಟ ಹಾಗೂ ನಿರ್ದೇಶಕ

ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಧಾರಾವಾಹಿಗಳು ಪ್ರಸಾರವಾಗಿವೆ. ಆದರೆ ಕೆಲವೊಂದು ಧಾರಾವಾಹಿಗಳು ಮಾತ್ರ ವೀಕ್ಷಕರ ಮನಸ್ಸಿನಲ್ಲಿ ಹಾಗೆಯೇ ಉಳಿದು ಬಿಟ್ಟಿದೆ. ಸಾಕಷ್ಟು ಸಂಚಿಕೆಗಳ ಮೂಲಕ ಜನರಿಗೆ ಮನರಂಜನೆ ನೀಡಿ ಇಂದಿಗೂ ಕೂಡ ಅಚ್ಚಳಿಯದೇ ಉಳಿದಿವೆ. ಇಂತಹ ಧಾರಾವಾಹಿಗಳಲ್ಲಿ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಕೂಡ ಒಂದು. ಇದು ಹಿಂದಿ ಭಾಷೆಯ ‘ಬಾಲಿಕಾವಧು’ ಎಂಬ ಧಾರವಾಹಿ ರಿಮೇಕ್ ಆಗಿತ್ತು.

 

 

2012ರ ಮಾರ್ಚ್ ತಿಂಗಳಿನಲ್ಲಿ ಪ್ರಸಾರ ಮಾಡಲು ಪ್ರಾರಂಭಿಸಿದ ‘ಪುಟ್ಟಗೌರಿ ಮದುವೆ’, ‘ಮಂಗಳ ಗೌರಿ ಮದುವೆ’ ಎಂದು ಮರುನಾಮಕರಣ ಮಾಡಿಕೊಂಡು ಈಗಲೂ ಪ್ರಸಾರವಾಗುತ್ತಿದೆ. ಈ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ರಂಜನಿ ರಾಘವನ್, ರಕ್ಷಿತ್ ಗೌಡ, ನಮ್ರತಾ ಗೌಡ, ಚಂದ್ರಕಲಾ ಮೋಹನ್ ಸೇರಿದಂತೆ ಸುನಿಲ್ ಪುರಾಣಿಕ್ ಹಾಗೂ ಇತರೆ ಫೇಮಸ್ ಕಲಾವಿದರು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

 

 

ಈ ಧಾರಾವಾಹಿಯಲ್ಲಿ ಪುಟ್ಟ ಮಹೇಶನಾಗಿ ಕಾಣಿಸಿಕೊಂಡ ಬಾಲನಟನ ತಂದೆ ಕೂಡ ಖ್ಯಾತನಟರು. ಹಾಗಾದರೆ ಅವರು ಯಾರು? ಬಾಲ ನಟ ಮಹೇಶ್ ಈಗ ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಬಾಲ ಮಹೇಶನಾಗಿ ನಟಿಸಿದ್ದ ಸಮೀರ್‌ ಪುರಾಣಿಕ್ ಅವರು ಅದೇ ಧಾರಾವಾಹಿಯಲ್ಲಿ ದೊಡ್ಡಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಪುರಾಣಿಕ್ ಅವರ ಸುಪುತ್ರ. ಬಾಲಕನಾಗಿ ಕಾಣಿಸಿಕೊಂಡಿದ್ದ ಮಹೇಶ ಪಾತ್ರಧಾರಿ ಸಮೀರ್‌ ಅವರ ನಿಜಜೀವನದ ತಂದೆ ಖ್ಯಾತ ನಟ ಹಾಗೂ ನಿರ್ದೇಶಕ ಸುನಿಲ್ ಪುರಾಣಿಕ್.

 

 

ತಂದೆ ಹಾಗೂ ಮಗ ಒಂದೇ ಧಾರವಾಹಿಯಲ್ಲಿ ಅಭಿನಯಿಸಿರುವುದು ವಿಶೇಷ. ಸುನಿಲ್ ಪುರಾಣಿಕ್ ಅವರು ಕರ್ನಾಟಕ ಫಿಲಂ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ಸಮೀರ್ ಪುರಾಣಿಕ್ ಅವರು ತಂದೆಯೊಂದಿಗೆ ನಟನಾ ಕ್ಷೇತ್ರಕ್ಕೆ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು.

 

 

 

ಸಮೀರ್ ಪುರಾಣಿಕ ಅವರು ತಮ್ಮ ನಟನೆ ಬಗ್ಗೆ ಮಾತನಾಡಿದ್ದು, ನಾನು ಬಾಲ್ಯದಿಂದಲೇ ಅಪ್ಪನೊಂದಿಗೆ ಶೂಟಿಂಗ್ ಗೆ ತೆರಳುತ್ತಿದ್ದೆ. ಅಪ್ಪ ನಟಿಸುವಾಗ ನಾನು ದೂರದಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೆ. ನಾನು ಲೈಟ್ಸ್ ಹಾಗೂ ಕ್ಯಾಮೆರಾಗಳ ಮಧ್ಯೆಯೇ ಬೆಳೆದವನು. ನನಗೆ ನನ್ನ ತಂದೆಯೇ ದೊಡ್ಡ ಸ್ಫೂರ್ತಿ. ನನ್ನನ್ನು ನಾನು ತೆರೆಮೇಲೆ ನೋಡಲು ಬಹಳ ಆಸೆ ಪಡುತ್ತಿದ್ದೆ. ನನಗೆ ನನ್ನದೇ ಆದ ಗುರುತು ಬೇಕು. ಇನ್ನು ಈ ವಿಷಯದಲ್ಲಿ ನನಗೆ ಸಂಪೂರ್ಣವಾದ ಸ್ವಾತಂತ್ರ್ಯ ಇದೆ ಎಂದು ನನ್ನ ತಂದೆ ಹೇಳಿದ್ದಾರೆ.

 

 

ಪುಟ್ಟಗೌರಿ ಮದುವೆ ಧಾರಾವಾಹಿ ಆಡಿಶನ್ ಗಾಗಿ ಧಾರಾವಾಹಿ ತಂಡ ನಮ್ಮ ಸ್ಕೂಲ್ ಗೆ ಬಂದಿತ್ತು. ಅದೇ ಸರಿಯಾದ ಸಮಯ ಎಂದುಕೊಂಡು ನಾನು ಆಡಿಷನ್ ನಲ್ಲಿ ಭಾಗಿಯಾಗಿ ಸೆಲೆಕ್ಟ್ ಕೂಡ ಆದೆ. ಆದರೆ ಅಲ್ಲಿಯವರೆಗೂ ನಾನು ಸುನಿಲ್ ಪುರಾಣಿಕ್ ಅವರ ಮಗ ಎಂದು ಯಾರಿಗೂ ಗೊತ್ತಿರಲಿಲ್ಲ. ಧಾರಾವಾಹಿ ಶೂಟಿಂಗ್ ಆರಂಭವಾದ ಬಳಿಕ ನಾನು ಸ್ಕೂಲಿಗೆ ರಜೆ ಹಾಕುವುದು ಅನಿವಾರ್ಯವಾಯಿತು. ಈ ವೇಳೆ ನನ್ನ ಸ್ನೇಹಿತರು ನನಗೆ ಬಹಳ ಪ್ರೋತ್ಸಾಹ ನೀಡಿದರು.

 

 

ನಾನು ತೆರೆ ಮೇಲೆ ಮಹೇಶನಾಗಿ ನಟಿಸಿದರೆ ನನ್ನ ಅಪ್ಪ ದೊಡ್ಡಪ್ಪನಾಗಿ ನಟಿಸಿದ್ದರು. ಯಾವ ಸಂಬಂಧವೇ ಆಗಿರಲಿ ತೆರೆಮೇಲೆ ಪ್ರೊಫೆಷನಲ್ ಆಗಿರಬೇಕು. ಆ ಸಮಯದಲ್ಲಿ ಅವರು ಅಪ್ಪ, ಮಗ, ಅಣ್ಣ ತಮ್ಮ ಎಂಬ ಸೆಂಟಿಮೆಂಟ್ ಯಾವತ್ತಿಗೂ ಇರಬಾರದು ಎಂದು ನನ್ನ ತಂದೆ ಹೇಳಿಕೊಡುತ್ತಿದ್ದರು. ಪದವಿ ವ್ಯಾಸಂಗ ಮುಗಿದ ಕೂಡಲೇ ಮತ್ತೆ ತೆರೆ ಮೇಲೆ ವಾಪಸ್ ಬರುತ್ತೇನೆ. ಆದರೆ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ನನ್ನ ಆದ್ಯತೆಯೂ ಅದೇ ಆಗಿರುತ್ತದೆ ಎಂದು ಸಮೀರ್ ಪುರಾಣಿಕ್ ಅವರು ತಮ್ಮ ಹಿಂದಿನ ಹಾಗೂ ಮುಂದಿನ ಗುರಿ ಬಗ್ಗೆ ಮಾತನಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button