Entertainment

ಡಾ. ರಾಜ್‌ ಕುಮಾರ್‌ ಅವರ ಯೋಗ ಗುರು ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್‌ ಇನ್ನಿಲ್ಲ

೨೦೨೧ನೇ ವರ್ಷ ಬಂದಿದ್ದೇ ಬಂದಿದ್ದು ಅದೇನೋ ಬರೀ ಸಾವಿನ ಸುದ್ದಿಯನ್ನೇ ನಿರಂತರವಾಗಿ ಕೇಳುತ್ತಿದ್ದೇವೆ. ಹಾಳು ಚೀನಾ ಇಡೀ ಜಗತ್ತನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು ಎಂಬ ಹಪಾಹಪಿಗೆ ಬಿದ್ದು ಇಡೀ ಜಗತ್ತನ್ನೇ ಮಕಾಡೆ ಮಲಗಿಸುತ್ತಿದೆ. ಇದರಿಂದ ಅದಕ್ಕೆ ಅದೇನು ಸಿಕ್ಕಿತೋ ಕಾಣೆ. ಆದರೆ ಮುಗ್ಧ ಜನರಂತೂ ಕೊರೊನಾ ಮಹಾಮಾರಿಗೆ ತುತ್ತಾಗಿ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಮನೆಯಿಂದ ಹೊರ ಹೋಗುವುದೇ ದುಸ್ಥರ ಎಂಬ ಸ್ಥಿತಿ ನಿರ್ಮಾಣವಾಗಿದೆ.

 

 

ಈ ಲಾಕ್‌ ಡೌನ್‌ ನಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸ್ವತಂತ್ರವಾಗಿ ತನ್ನ ಬದುಕನು ತಾನು ಕಟ್ಟಿಕೊಳ್ಳುತ್ತೇವೆ ಎಂದು ಹೊರಡ ಅದೆಷ್ಟೋ ಜನರಿಗೆ ಭ್ರಮೆ ಕಳಚಿದಂತಾಗಿದೆ. ಹೀಗೆ ಆದರೆ ಮುಂದೆ ಬದುಕೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದ್ದೆ. ಇದೇ ಹೊತ್ತಿನಲ್ಲಿ ನಮ್ಮ ಕುಟುಂಬದ ಆಪ್ತರು, ಕುಟುಂಬದ ಸದಸ್ಯರನ್ನು ಈ ಕೊರೊನಾ ಮಾಹಾಮಾರಿ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಕೊರೊನಾಗೆ ತುತ್ತಾಗಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

 

 

ಇದಕ್ಕೆ ಬಡವರು, ಶ್ರೀಮಂತರು ಎಂಬ ಯಾವುದೇ ಬೇದಭಾವವಿಲ್ಲ. ಸೆಲೆಬ್ರಿಟಿಗಳು, ಸಾಮಾನ್ಯ ಜನರು ಎಂದು ನೋಡದೇ ಎಲ್ಲರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಮನೆ ಎಂದೇ ಖ್ಯಾತಿ ಪಡೆದಿರುವ ಡಾ. ರಾಜ್‌ ಕುಮಾರ್‌ ಅವರ ಕುಟುಂಬದ ಸದಸ್ಯರೊಬ್ಬರು ಈ ಕೊರೊನಾ ಮಾಹಾಮಾರಿಗೆ ತುತ್ತಾಗಿದ್ದಾರೆ. ಡಾ. ರಾಜ್‌ ಕುಮಾರ್‌ ಅವರು ತನ್ನ ಜೀವಮಾನವಿಡೀ ಯೋಗ ಸಾಧನೆಯನ್ನು ಮಾಡಿಕೊಂಡೇ ಬಂದರು. ಇದೇ ಕಾರಣಕ್ಕಾಗಿ ಅವರು ಅಷ್ಟೊಂದು ಆರೋಗ್ಯವಂತರಾಗಿ ಇದ್ದರು.

 

 

ಇನ್ನು ಅವರ ಯೋಗ ಗುರು ಕೆಎಸ್‌ ಆರ್‌ ಪಿ ನಿವೃತ್ತ ಡಿಐಜಿ ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ್‌ ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಂದೆ ಸಮಾನರಾಗಿದ್ದ ಯೋಗ ಗುರುಗಳು ನಿಧನ ಹೊಂದಿದ್ದು ನಿಜಕ್ಕೂ ಬಹಳ ಬೇಸರವನ್ನುಂಟು ಮಾಡಿದೆ. ಪೂಜ್ಯ ಗುರುಗಳು ನಮ್ಮ ಕುಟುಂಬದಲ್ಲಿ ಒಬ್ಬರಾಗಿದ್ದರು.

 

 

ನಾಯ್ಕರ್‌ ಅವರು ಮೂರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರು ಧಾರವಾಡ ಮೂಲದವರಾಗಿದ್ದು, ಕಳೆದ ೫-೬ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನಕಪುರ ರಸ್ತೆಯಲ್ಲಿರುವ ಬಿ. ಎಂ. ಕಾವಲ್‌ ನಲ್ಲಿ ಮಹಾಯೋಗ ಕೇಂದ್ರವನ್ನು ಸ್ಥಾಪನೆ ಮಾಡಿದ್ದರು. ಅವರು ಡಾ. ರಾಜ್‌ ಕುಮಾರ್‌ ಸೇರಿದಂತೆ ನಾನಾ ಗಣ್ಯರಿಗೆ ಹಠಯೋಗದ ಸಾಧನೆಯನ್ನು ಮಾಡಿಸಿದ್ದರು. ಇಂತಹ ಮಹಾನ್‌ ಸಾಧಕರನ್ನು ಇಂದು ಕರುನಾಡು ಕಳೆದುಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button