Entertainment

‘ನಿಂದು ಕಪ್ಪಗಿದೆ, ಆಂಟಿ ಥರ ಕಾಣ್ತೀಯ, ಡುಮ್ಮಿ ಆಗಿದೀಯ ಅಂದವರ ವಿರುದ್ಧ ಸಿಡಿದ್ದೆದ್ದ ಪ್ರಿಯಾಮಣಿ

ದೇಶದಲ್ಲಿ ಕೊರೊನಾ ಎರಡನೇ ಹೆಚ್ಚಾದ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳು ಲಾಕ್‌ ಡೌನ್‌ ಘೋಷಣೆ ಮಾಡಿದ್ದವು. ಹಾಗಾಗಿ ಚಿತ್ರರಂಗ ಸೇರಿದಂತೆ ಎಲ್ಲಾ ವಲಯಗಳ ಚಟುವಟಿಕೆಗಳು ಸ್ಥಬ್ಧವಾಗಿದ್ದವು. ಹಾಗಾಗಿ ಚಿತ್ರೀಕರಣ ಮುಗಿಸಿದ ಯಾವುದೇ ಚಿತ್ರಗಳು ತೆರೆ ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಕನ್ನಡದಲ್ಲಿಯೂ ಕೂಡ ಸಾಕಷ್ಟು ಚಿತ್ರಗಳು ಬಿಡುಗಡೆಗಾಗಿ ಸಾಲಾಗಿ ನಿಂತಿದ್ದವು. ಆದರೆ ಲಾಕ್‌ ಡೌನ್‌ ಘೋಷಣೆ ಮಾಡಿದ್ದರಿಂದ ಎಲ್ಲವೂ ನಿಂತಲ್ಲೇ ನಿಂತಿವೆ.

 

 

ಹಾಗಾಗಿ ಈಗಾಗಲೇ ಬಿಡುಗಡೆ ಮಾಡಿದ ಸಿನಿಮಾಗಳನ್ನು ಒಟಿಟಿ ಪ್ಲಾಟ್‌ ಫಾರಂನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಅಲ್ಲದೇ, ಎಲ್ಲಾ ಭಾಷೆಯಲ್ಲೂ ಓಟಿಟಿಗಳ ದರ್ಬಾರು ಪ್ರಾರಂಭವಾಗಿದೆ. ದೊಡ್ಡ ಪರದೆ ಹಾಗೂ ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಹುತೇಕ ನಟ, ನಟಿಯರು ಈಗ ಓಟಿಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಪ್ರಿಯಾಮಣಿ ಕೂಡ ಒಬ್ಬರಾಗಿದ್ದಾರೆ. ಅವರು ಮುಸ್ಲಿಂ ಹುಡುಗನನ್ನು ಮದುವೆ ಮಾಡಿಕೊಂಡ ಎಂಬ ನೆಪವನ್ನು ಮುಂದಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಬಂದಿತು.

 

 

ಹಾಗಾಗಿ ಅವರು ಓಟಿಟಿಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿರುವ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಮೂಲಕ ನಟಿ ಪ್ರಿಯಾಮಣಿ ಅವರು ಓಟಿಟಿಯಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ಮೊದಲ ಸರಣಿಯಲ್ಲೂ ಅವರ ಪಾತ್ರ ಹೈಲೈಟ್​ ಆಗಿತ್ತು. ಎರಡನೇ ಸರಣಿಯಲ್ಲೂ ಅದು ಮುಂದುವರೆದಿದೆ. ಹಲವು ಹಿಟ್​ ಸಿನಿಮಾಗಳಲ್ಲಿ ಹಲವು ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಅಲ್ಲದೇ, ಬಹುಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಹಲವು ರಾಷ್ಟ್ರ ಪ್ರಶಸ್ತಿ ಪಡೆದ ನಂತರವೂ ಪ್ರಿಯಾಮಣಿಗೆ ಟ್ರೋಲಿಗರ ಕಾಟ ತಪ್ಪಿಲ್ಲ.

 

 

ಅವರಿಗೂ ತಮ್ಮ ದೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಅನುಭವವಾಗಿದೆ. ಹಾಗಾಗಿ ಅವರು ಈ ಬಗ್ಗೆ ತಮ್ಮ ವಿಚಾರ ಸರಣಿಯನ್ನು ಹೊರಹಾಕಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳ ಬಗ್ಗೆ ಕೂಲಂಕುಶವಾಗಿ ಮಾತನಾಡಿದ್ದಾರೆ. ಪ್ರಿಯಾಮಣಿ ಅವರೇ ಹೇಳುವಂತೆ, ‘ನಿಜವಾಗಿ ಹೇಳಬೇಕೆಂದರೆ ದೇಹದ ತೂಕ 65 ಕೆಜಿ ತನಕ ಏರಿಕೆ ಆಗಿತ್ತು. ಹಾಗಾಗಿ ಸಹಜವಾಗಿ ದಪ್ಪವಾಗಿ ಕಾಣುತ್ತಿದ್ದೆ. ಈಗಿರುವುದಕ್ಕಿಂತಲೂ ದಪ್ಪವಾಗಿ ಕಾಣುತ್ತಿದ್ದೆ. ಅದಕ್ಕೆ ಅನೇಕರು ನೀನು ದಪ್ಪ ಆಗಿದ್ದೀಯಾ ಎಂದು ಹೇಳುತ್ತಿದ್ದರು. ಆದರೆ ಈಗ ಅದೇ ಜನರು ನೀನು ತೆಳ್ಳಗಾಗಿದ್ದೀಯಾ ಎನ್ನುತ್ತಿದ್ದಾರೆ.

 

 

ನೀನು ದಪ್ಪ ಆಗಿದ್ದಾಗಲೇ ಚೆನ್ನಾಗಿ ಕಾಣುತ್ತಿದ್ದೆ. ಹಾಗಾಗಿ ಮೊದಲಿದ್ದ ರೀತಿಯೇ ನಿನ್ನನ್ನು ನಾವು ಇಷ್ಟಪಡುತ್ತಿದ್ವಿ ಅಂತ ಹೇಳಿದ್ದಾರೆ. ಇದಕ್ಕೆ ನಾನು ದಪ್ಪ ಅಥವಾ ತೆಳ್ಳಗೆ, ಯಾವ ರೀತಿ ನನ್ನನ್ನು ನೋಡಲು ಇಷ್ಟಪಡುತ್ತೀರಿ ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಿ ಎಂದು ನಾನು ಹೇಳಿದೆ’ ಎಂದಿದ್ದಾರೆ ಪ್ರಿಯಾಮಣಿ. ಪ್ರಿಯಾಮಣಿ ಅವರು ಸ್ವಲ್ಪ ಕಪ್ಪಗಿದ್ದಾರೆ ಎಂಬ ಕಾರಣಕ್ಕೂ ಅವರನ್ನು ಅವಹೇಳನ ಮಾಡಿದ್ದಾರೆ. ಹಾಗೆ ಮಾತನಾಡಿದವರಿಗೆ, ‘ನನ್ನ ಚರ್ಮದ ಬಣ್ಣ ಕಪ್ಪಾಗಿದ್ದರೆ, ಅದರಲ್ಲಿ ಯಾವುದೇ ತಪ್ಪಿಲ್ಲ.

 

 

ಯಾವುದೇ ವ್ಯಕ್ತಿಯನ್ನು ಕಪ್ಪು ಎಂದು ಜರಿಯಬೇಡಿ. ಕೇವಲ ಬಣ್ಣಕ್ಕೆ ಬೆಲೆ ಕೊಡಬೇಡಿ. ಕಪ್ಪಿನಲ್ಲೂ ಬ್ಯೂಟಿ ಇದೆʼ ಎಂದು ಬಹಳ ಸೂಚ್ಯವಾಗಿ ಉತ್ತರ ನೀಡಿದ್ದಾರೆ ‘ನಾನು ಮೇಕಪ್​ ರಹಿತ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರೆ, ಅರ್ಧಕ್ಕರ್ಧ ಜನರು ಓಹ್​ ಮೇಕಪ್​ ಮಾಡಿಕೊಂಡರೆ ಮಾತ್ರವೇ ಚೆನ್ನಾಗಿ ಕಾಣುತ್ತಿಯಾ ಎನ್ನುತ್ತಾರೆ. ಅಲ್ಲದೇ, ಮೇಕಪ್​ ಇಲ್ಲದಿದ್ದರೆ ಆಂಟಿ ಥರ ಕಾಣ್ತೀಯ ಅಂತಾರೆ. ಮನುಷ್ಯ ಯಾವಾಗಲೂ ಒಂದೇ ರೀತಿ ಹೇಗೆ ಸಾಧ್ಯ? ವಯಸ್ಸಾಗುತ್ತಲೇ ಇರುತ್ತದೆ.

 

 

ವಯಸ್ಸು ನಿಲ್ಲುವುದಿಲ್ಲ. ಎಲ್ಲರೂ ಒಂದಲ್ಲಾ ಒಂದು ದಿನ ಆಂಟಿ ಆಗೇ ಆಗುತ್ತಾರೆ. ಯಾವಾಗಲೂ ಹುಡುಗಿಯ ಹಾಗೆ ಇರಲು ಹೇಗೆ ಸಾಧ್ಯ? ಇಂದಲ್ಲ ನಾಳೆ ನೀವು ಕೂಡ ಆಂಟಿ ಆಗಲೇಬೇಕಲ್ಲವೇ?’ ಎಂದು ಪ್ರಿಯಾಮಣಿ ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button