Entertainment

ಸಿನಿಮಾ ರಂಗ ತೊರೆದ ನಂತರ ನಾನಾ ಕೆಸಗಳಲ್ಲಿ ತೊಡಗಿಕೊಂಡಿರುವ ನಟಿಯರು ಯಾರಾ ಯಾರು ಗೊತ್ತಾ?

ಹಲವು ಪ್ರತಿಭಾನ್ವಿತ ಕಲಾವಿದೆಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಯಶಸ್ಸು, ಹೆಸರು ಎರಡನ್ನೂ ಪಡೆದಿದ್ದಾರೆ. ಸಾಕಷ್ಟು ವರ್ಷ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ, ಬಹು ಬೇಡಿಕೆಯನ್ನು ಗಳಿಸಿಕೊಂಡಿದ್ದರು. ಎಲ್ಲವನ್ನು ಸಂಪಾದಿಸಿ, ಐಷಾರಾಮಿ ಜೀವನ ನಡೆಸಿದ್ದವರೂ ಇದ್ದಾರೆ. ಅವರಲ್ಲಿ ಕೆಲವರು ಸಿನಿರಂಗದಲ್ಲೇ ಇಂದಿಗೂ ಸಕ್ರಿಯವಾಗಿದ್ದಾರೆ. ಇನ್ನು ಕೆಲವರು ಸಿನಿರಂಗದಿಂದ ದೂರ ಉಳಿದುಕೊಂಡಿದ್ದಾರೆ. ಸಿನಿರಂಗದಿಂದ ದೂರ ಉಳಿಯಲು ಅವರದೇ ಹಲವಾರು ವೈಯಕ್ತಿಕ ಕಾರಣಗಳು ಇರಬಹುದು.

 

 

ಈ ರೀತಿ ಸಿನಿಮಾ ರಂಗದಿಂದ ದೂರ ಉಳಿದು ಹೊರರಾಜ್ಯ ಹಾಗೂ ಹೊರದೇಶಗಳಲ್ಲಿ ನೆಲೆಸಿರುವ ಕನ್ನಡ ಮತ್ತು ದಕ್ಷಿಣ ಭಾರತದ ನಟಿಯರು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ರೀತಿ ಚಿತ್ರರಂಗದಿಂದ ದೂರ ಸರಿದು ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿರುವ ನಟಿಯರು ಯಾರು ಗೊತ್ತಾ?

 

 

ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿ ಖ್ಯಾತಿ ಪಡೆದಿದ್ದ ನಟಿ ದೀಪ. ಕನ್ನಡದಲ್ಲಿ ಡಾ. ರಾಜ್ ಕುಮಾರ್ ಅವರ ಜೊತೆ ಧ್ರುವತಾರೆ ಸಿನಿಮಾದಲ್ಲಿ ನಟಿಸಿದ್ದರು. ಈ ನಟಿ ಈಗ ಚಿತ್ರರಂಗ ತೊರೆದು ನೆರೆಯ ಕೇರಳದಲ್ಲಿ ವಾಸ ಮಾಡುತ್ತಿದ್ದಾರೆ. ಅಲ್ಲಿನ ಎನ್.ಜಿ.ಓ. ಒಂದರಲ್ಲಿ ಹಿಂದುಳಿದ ವರ್ಗ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ.

 

 

ನಟಿ ಮೋಹಿನಿ ಅವರು ಕನ್ನಡದಲ್ಲಿ ಲಾಲಿ, ಶ್ರೀರಾಮಚಂದ್ರ, ಗಡಿಬಿಡಿ ಅಳಿಯ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದರು. ಮದುವೆ ಮಾಡಿಕೊಂಡ ನಂತರ ಅಮೆರಿಕದಲ್ಲಿ ನೆಲೆಸಿದ್ದಾರೆ. ಕೆಲವು ಆರೋಗ್ಯ ಸಮಸ್ಯೆಗಳು ಕಾಡಿತ್ತಾದರೂ, ಅದನ್ನೆಲ್ಲಾ ಮೀರಿ ಚರ್ಚ್ ಒಂದಕ್ಕೆ ಸಂಬಂಧಿಸಿದ ಆಫೀಸಿನಲ್ಲಿ ಕೌನ್ಸೆಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಕೌನ್ಸೆಲಿಂಗ್‌ ಕೊಡುತ್ತಾರೆ.

 

 

ಕನ್ನಡ ಕಿರುತೆರೆಯಲ್ಲಿ ಸೆನ್ಸಷನ್‌ ಕ್ರಿಯೇಟ್‌ ಮಾಡಿದ ಪಾತ್ರ ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಾಜೇಶ್ವರಿ ಅವರು ಮದುವೆ ಮಾಡಿಕೊಂಡ ನಂತರ ನಟನೆಗೆ ಬ್ರೇಕ್ ಹಾಕಿ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅಲ್ಲದೇ, ಅವರು ಅಲ್ಲಿನ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅವರಿಗೆ ಮಗು ಆಗಿರುವ ಕಾರಣ ಮಗುವನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.

 

 

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಪವಿತ್ರ ಲೋಕೇಶ್ ಅವರು ತಮ್ಮ ನಟನೆಯ ಆರಂಭದ ದಿನಗಳಲ್ಲಿ ಹೆಚ್ಚಿನ ಅವಕಾಶ ಸಿಗದೆ ಇದ್ದುದರಿಂದ ಅವರು ಕಂಪನಿಯೊಂದರಲ್ಲಿ ಎಚ್.ಆರ್. ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮಾರು ಒಂದು ವರ್ಷ ಬಸ್ ನಲ್ಲೇ ಪ್ರಯಾಣಿಸಿ ಕೆಲಸ ಮಾಡಿದ್ದರು.

 

 

ದಕ್ಷಿಣ ಭಾರತ ಚಿತ್ರರಂಗ ಮರೆಯಲಾಗದ ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಮದುವೆ ಮಾಡಿಕೊಂಡ ನಂತರ ಸಿನಿರಂಗ ತ್ಯಜಿಸಿ ಅಮೆರಿಕದಲ್ಲಿ ನೆಲೆಸಿದರು. ಅವರ ಪತಿಯ ಫಾರ್ಮಾಸಿಟಿಕಲ್ ಕಂಪನಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

 

 

ಶಾಸ್ತ್ರಿ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಮಾನ್ಯ ಅವರು, ಸಿನಿಮಾರಂಗ ತ್ಯಜಿಸಿದ ನಂತರ ಎಂ.ಬಿ.ಎ. ವ್ಯಾಸಂಗ ಮಾಡಿ ಹೊರದೇಶದಲ್ಲಿ ನೆಲೆಸಿದ್ದಾರೆ. ಅಲ್ಲಿನ ಕಂಪನಿಯೊಂದರಲ್ಲಿ ಬ್ಯುಸಿನೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಸಿನಿಮಾರಂಗದಿಂದ ದೂರ ಹೋಗಿ, ಹಲವಾರು ಕಲಾವಿದೆಯರು ತಮ್ಮ ಬದುಕನ್ನು ತಮಗೆ ಬೇಕಾದ ರೀತಿಯಲ್ಲಿ ಕಟ್ಟುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button