Entertainment

ತಾಯಿಯೊಂದಿಗೆ ಪ್ರಪಂಚಸುತ್ತಿದ ಮಗ. ಎಷ್ಟು ಸ್ಥಳಗಳು ಗೊತ್ತಾ? ತಾಯಿಯ ಋಣವನ್ನು ಹೇಗೆ ತೋರಿಸಿದ್ದಾನೆ ಗೊತ್ತಾ?

ತಾಯಿಯೆಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ತಾಯಿ. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ತಾಯಿಯನ್ನು ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು.

 

 

ತಾಯಿಯೂ ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು.ತಾಯಿ ಎಂಬುವ ಪದ ಈ ಜಗತ್ತಿಗೆ ದೊರಕಿರುವ ಅಪೂರ್ವವಾದ ಕೊಡುಗೆ ಎಂದರೆ ತಪ್ಪಾಗಲಾರದು. ಆಕೆಯ ಹೃದಯ ಆಗಸದಷ್ಟು ಎತ್ತರ. ಮನಸ್ಸು ಸಾಗರದಷ್ಟೇ ವಿಶಾಲ.ತಾಯಿಯೂ ನಿಜಕ್ಕೂ ಈ ಸೃಷ್ಟಿಯ ಸೃಷ್ಟಿಗೆ ಕಾರಣಳಾದವಳು. ನಾವು ದೇವರನ್ನು ನೋಡಿಲ್ಲ, ಆದರೆ ದೇವರೇ ನಮ್ಮ ತಾಯಿ ಎಂದರೆ ತಪ್ಪಾಗಲಾರದು. ಯಾಕೆಂದರೆ ನಮಗೆ ಜನ್ಮ ನೀಡಿದವಳು ಈ ತಾಯಿ, ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಜೋಪಾನವಾಗಿ ಈ ಭೂಮಿಗೆ ನಮ್ಮನ್ನು ಪರಿಚಯಿಸಿದ್ದಾಳೆ.

 

 

ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು’. ಅಭ್ಬಾ ಎಷ್ಟು ಅರ್ಥಗರ್ಭಿತವಾದ ಸಾಲು ಅಲ್ಲವೇ? ನವಮಾಸಗಳೂ ನೋವನ್ನು ಅನುಭವಿಸಿ, ನಮ್ಮನ್ನು ಹೆತ್ತು, ಹೊತ್ತು, ಸಲಹುವ ತಾಯಿ, ಹಾಲುಣಿಸಿ, ಕೈತುತ್ತು ನೀಡಿ, ಅಂಬೆಗಾಲಿಡಿಸಿ, ಕೈಹಿಡಿದು ನಡೆಸಿ, ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿಯೇ ಅವಿರತ ಹಾಗೂ ಅನವರತ ಶ್ರಮಿಸುತ್ತಾಳೆ.ಇಂತಹ ಮಹಾನ್‌ ತಾಯಿಯ ಋಣವನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಇಂತಹ ತಾಯಿಯ ಋಣವನ್ನು ಈ ವ್ಯಕ್ತಿ ಹೇಗೆ ತೋರಿಸಿದ್ದಾನೆ ಗೊತ್ತಾ?

 

 

ಈ ವ್ಯಕ್ತಿ ತಾಯಿಯ ಮೇಲಿನ ಪ್ರೀತಿಯ ಸಾರಾಂಶವೂ ಹೌದು. ಕೇರಳ ಜಿಲ್ಲೆಯ ತ್ರಿಶೂರ್ ಮೂಲದ ಶರತ್ ಕೃಷ್ಣನ್ ಎಂಬುವವರು ತನ್ನ ತಾಯಿ ಗೀತಾ ಅವರಿಗೆ ಪ್ರಯಾಣದ ಮೇಲಿರುವ ಉತ್ಸಾಹವನ್ನು ತಿಳಿದು ಆಕೆಯ ಕೈ ಹಿಡಿದು ಪ್ರಪಂಚಾದ್ಯಂತ 22 ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ಬಿಡುವಿಲ್ಲದ ಜೀವನದಲ್ಲಿ ಪೋಷಕರಿಗೆ ಪ್ರೀತಿ ಮತ್ತು ಕಾಳಜಿಯನ್ನು ನೀಡಲು ವಿಫಲರಾದವರು ಈ ಮಗನನ್ನು ನೋಡಿ ಕಲಿಯಬೇಕು. ಶರತ್ ಅವರಿಗೆ ಒಂದು ದಿನ ಮುಂಜಾನೆ ಕನಸಿನಲ್ಲಿ ತನ್ನ ತಾಯಿಯ ಕೈಯನ್ನು ಹಿಡಿದು ಕಾಶಿಯ ಗಂಗಾ ನದಿಯ ದಡದಲ್ಲಿ ನಡೆಯುತ್ತಿರುವುದಾಗಿ ಬಂದಿರುತ್ತಿದೆ. ತಕ್ಷಣ ಎಚ್ಚರವಾದ ಅವರು, ಮರು ಮುಂಜಾನೆ ವಿಮಾನದ ಟಿಕೆಟ್ ಬುಕ್ ಮಾಡಿದ ಮೂರು ದಿವಸಗಳ ಕಾಲ ಪ್ರವಾಸ ಹೋಗಲು ನಿರ್ಧರಿಸುತ್ತಾರೆ.

 

 

ಕಾಶಿಯ ವಾತಾವರಣವನ್ನು ಆನಂದಿಸಿದ ನಂತರ, ಇಬ್ಬರೂ ತಮ್ಮೂರಿಗೆ ಮರಳಲು ಸಿದ್ಧರಾಗುತ್ತಾರೆ. ಕೊಚ್ಚಿಗೆ ಹೊಗುವ ವಿಮಾವನ್ನು ಹಿಡಿಯುವ ಸಲುವಾಗಿರೈಲಿನಲ್ಲಿ ದೆಹಲಿಗೆ ಹೊರಟಿರುತ್ತಾರೆ. ಈ ಸಂದದ ಒರ್ವ ಮಲಯಾಳಿಯನ್ನು ಭೇಟಿಯಾದ ಅವರು ಶಿಮ್ಲಾದಲ್ಲಿ ಇಳಿಯುವುದಾಗಿ ಪ್ರಸ್ತಾಪಿಸಿ ಕೊಳ್ಳುತ್ತಿರುತ್ತಾರೆ. ಇದನ್ನು ಕೇಳಿದ ತಕ್ಷಣ, ತಾಯಿ ಮತ್ತು ಮಗ ಒಬ್ಬರನ್ನೊಬ್ಬರು ನೋಡಿದಕೊಂಡು ತಮ್ಮ ಪ್ರವಾಸವನ್ನು ವಿಸ್ತರಿಸಲು ನಿರ್ಧರಿಸುತ್ತಾರೆ ಮತ್ತು ಕೊಚ್ಚಿಯ ವಿಮಾನವನ್ನು ರದ್ದುಗೊಳಿಸುತ್ತಾರೆ.

 

 

ಹೀಗೆ ಶಿಮ್ಲಾ, ಮನಾಲಿ ಸೇರಿದಂತೆ ಪ್ರಪಂಚದ 22 ಜನಪ್ರಿಯ ತಾಣಗಳಿಗೆ ಹೋಗುತ್ತಾರೆ.ಈ ಪ್ರವಾಸವು ಕೆಲವು ತಿಂಗಳ ಹಿಂದೆಯೇ ನಡೆದಿದ್ದಾರೂ, ಕಳೆದ ವಾರ ಶರತ್ ಅವರು ಸಂಚಾರಿ ಎಂಬ ಫೇಸ್‌ಬುಕ್ ಪೇಜ್ ನಲ್ಲಿ ಈ ಕುರಿತು ಪ್ರವಾಸ ಕಥನವನ್ನು ಬರೆದಿದ್ದಾರೆ ಹಾಗೂ ತನ್ನ ತಾಯಿಯೊಡಗಿನ ಒಡನಾಟ, ಪ್ರವಾಸದಲ್ಲಿ ತನ್ನ ತಾಯಿ ಚಿಕ್ಕ ಹುಡುಗಿಯಂತೆ ಆಡಿದ ಪರಿ ಎಲ್ಲವನ್ನು ಕೂಡ ಶರತ್ ಬರೆದುಕೊಂಡೊದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ತಾಯಿ ಮಗನ ಪೋಟೋಗಳು ವೈರಲ್ ಆಗುತ್ತಿದ್ದು, ಶರತ್ ಅವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button