Entertainment

ವಿಷ್ಣುವರ್ಧನ್ ಅವರ ಆ ಅಪರೂಪದ ವಸ್ತು ಮೇಘನಾ ರಾಜ್ ಬಳಿ ಇದೆ. ಏನು ಗೊತ್ತಾ

ಕನ್ನಡ ಚಿತ್ರರಂಗದ ಯುವ ಸಾಮ್ರಾಟ ಹಾಗೂ ಸರಳ ಜೀವಿ ನಟ ಚಿರಂಜೀವಿ ಸರ್ಜಾ ಅವರು ಅಗಲಿದ ದಿನದಿಂದ ಅಂರ್ತಾಜಲಾದಲ್ಲಿ ಪ್ರತಿನಿತ್ಯ ಕಾಣುತ್ತಿರುವ ಮುಖ ಎಂದರೆ ಅದು ಮೇಘನಾ ರಾಜ್ ಅವರದ್ದು. ಜೀವನಪರಿಯಂತ ಸಂಸಾರದಲ್ಲಿ ಗಂಡ ಮತ್ತು ಮಕ್ಕಳ ಜೊತೆ ಸುಖ ಜೀವನ ನಡೆಸಬೇಕಾಗಿದ್ದ ಮೇಘನಾ ಇದೀಗ ವಿದವೆಯಾಗಿದ್ದಾರೆ. ಇನ್ನು ಅವರ ಕಂದಮ್ಮನಿಗೆ ತನ್ನ ಅಪ್ಪನ ಮುಖ ನೋಡಲು ಸಾಧ್ಯವೇ ಆಗಲಿಲ್ಲ.

 

 

ಜೀವನ ಪರಿಯಂತ ಆ ಮಗು ತನ್ನ ಅಪ್ಪನನ್ನು ಕೇವಲ ಫೋಟೊದಲ್ಲಿ ಅಥವಾ ಸಿನಿಮಾಗಳಲ್ಲಿ ನೋಡ ಬೇಕಿದೆ. ಇನ್ನು ಮೇಘನಾ ಅವರಿಗೆ ೩೫ ವರುಷ ಕೂಡ ದಾಟಿಲ್ಲ. ಗಂಡ ನನ್ನು ಕಳೆದು ಕೊಂಡ ಆ ಹೆಣ್ಣು ಮಗಳು ಹೇಗೆ ಜೀವನ ಸಾಗಿಸುತ್ತಾಳೋ ಎಂಬುವುದನ್ನು ನೆನೆದರೆ ಒಂದು ಕ್ಷಣ ಕರುಳು ಚುರುಕ್ ಏನ್ನುತ್ತದೆ. ಚಂದನವನದಲ್ಲಿ ಈಗತಾನೇ ಕೆಲವು ಸಾಧನೆಗಳನ್ನ ಮಾಡುತ್ತಿದ್ದ ಕನ್ನಡ ಯುವನಟ ಅಕಾಲಿಕ ಮರಣವನ್ನ ಹೊಂದಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ ಎಂದರೆ ತಪ್ಪಾಗಲಾರದು.

 

 

ಪುಟ್ಟ ಕಂದಮ್ಮನ ಆಗಮನದಿಂದ ಸರ್ಜಾ ಕುಟುಂಬ ಕೊಂಚ ಸಂತಸದಲ್ಲಿದೆ. ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಎಂಬುದು ಪ್ರತಿಯೊಬ್ಬರ ಅನಿಸಿಕೆಯಾಗಿದೆ. ಇತ್ತೀಚಿಗೆ ಮೇಘನಾ ರಾಜ್ ಅವರ ಬಗ್ಗೆ ಒಂದಲ್ಲಾ ಒಂದು ಆಶ್ಚರ್ಯಕರ ವಿಚಾರಗಳು ಹೊರ ಬರುತ್ತಿದ್ದು, ಯಾರ ಬಳಿಯೂ ಇರದ ವಿಷ್ಣುವರ್ಧನ್ ಅವರ ಆ ವಸ್ತು ಮೇಘನಾ ರಾಜ್ ಅವರ ಬಳಿ ಇದೆಯಂತೆ ! ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಅವರು ವಿಷ್ಣುವರ್ಧನ್ ಅವರ ಜೊತೆಗೆ ಇರುವ ಫೋಟೋಗಳು ಹರಿದಾಡುತ್ತಿದ್ದವು. ಚಿತ್ರವನ್ನು ನೋಡುತ್ತಿದ್ದರೆ ವಿಷ್ಣು ಅವರು ಮೇಘನಾ ರಾಜ್ ಅವರ ಜೊತೆ ಎಷ್ಟು ಆತ್ಮೀಯವಾಗಿದ್ದರ ಎಂಬುದು ತಿಳಿದು ಬರುತ್ತದೆ.

 

 

ಚಿಕ್ಕ ವಯ್ಯಸ್ಸಿನಕಲ್ಲಿ ಮೇಘನಾ ಅವರನ್ನು ಕಂಡರೆ ವಿಷ್ಣುವರ್ಧನ್ ಅವರಿಗೆ ಬಹಳ ಅಚ್ಚು ಮೆಚ್ಚು ಹಾಗೂ ವಿಶೇಷವಾದ ಪ್ರೀತಿ. ಅಲ್ಲದೇ ವಿಷ್ಣು ಅವರು ತನ್ನ ಸ್ವಂತ ಮಗಳ ಹಾಗೆ ಮೇಘನಾ ಅವರನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಮೇಘನಾ ಅವರಿಗಂತು ವಿಷ್ಣುವರ್ಧನ್ ಎಂದರೆ ವಿಶೇಷವಾದ ಗೌರವ. ಅಲ್ಲದೇ ವಿಷ್ಣುವರ್ಧನ್ ಅವರು ತಮ್ಮ ಜೀವಮದಲ್ಲಿ ಬಳಸದ ಸಾಕಷ್ಟು ಬೆಲೆಬಾಳುವ ವಸ್ತುಗಳನ್ನು ಮೇಘನಾ ಅವರು ಬಹಳ ಇಂದಿಗೂ ಕೂಡ ಜೋಪಾನವಾಗಿ ಇರಿಸಿದ್ದಾರೆ. ಆ ವಸ್ತುಗಳನ್ನ ಸ್ವತಃ ವಿಷ್ಣುವರ್ಧನ್ ಅವರು ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದರು.

 

 

ಮೊದಲಿಂದಲು ವಿಷ್ಣು ಅವರ ಕುಟುಂಬ ಹಾಗೂ ಸುಂದರ್ ರಾಜ್ ಅವರ ಕುಟುಂಬ ಬಹಳ ಆಪ್ತರಾಗಿದ್ದರು. ವಾರಕ್ಕೊಮ್ಮೆಯಾದರು ಸುಂದರ್ ರಾಜ್ ಕುಟುಂಬ ವಿಷ್ಣು ಅವರ ಮನೆಗೆ ತರಳುತ್ತಿದ್ದರು. ಆಗಿನ್ನು ಮೇಘನಾ ಚಿಕ್ಕ ಹುಡುಗಿ. ಬಹಳ ಚೂಟಿಯಾಗಿದ್ದ ಅವರು, ಎರಡು ಜಡೆ ಹಾಕಿಕೊಂಡು ಮನೆ ತುಂಬಾ ಓಡಾದುತ್ತಿದ್ದರು. ಇನ್ನು ವಿಷ್ಣುವರ್ಧನ್ ಹಾಗೂ ಭಾರತಿ ಅವರಿಗೆ ಪುಟ್ಟ ಹುಡುಗಿ ಮೇಘನಾ ಅವರನ್ನ ಕಂಡರೆ ಎಲ್ಲಿಲ್ಲದ ಪ್ರೀತಿ. ಸಣ್ಣ ವಯ್ಯಸ್ಸಿನಿಂದಲೂ ಮೇಘಾನಾ ಅವರನ್ನು ವಿಷ್ಣುವರ್ಧನ್ ಎತ್ತಿ ಆಡಿಸಿ ಬೆಳೆಸಿದ್ದಾರೆ.

 

 

ವಿಷ್ಣುವರ್ಧನ್ ಅವರನ್ನು ಮೇಘನಾ ಬಹಳ ಹಚ್ಚಿಕೊಂಡಿದ್ದು, ಜೊತರಯಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಮಗಳಾದ ಕೀರ್ತಿ ಅವರು ವಿಷ್ಣುವರ್ಧನ್ ಬಳಸುತ್ತಿದ್ದ ಬೆಲೆಬಾಳುವ ವಾಚ್ ಅನ್ನು ತಾವು ಇಟ್ಟುಕೊಳ್ಳದೆ ಮೇಘನಾ ಅವರಿಗೆ ಕೊಟ್ಟಿದ್ದರು.ಯಾರ ಬಳಿನೂ ಇಲ್ಲದ ವಿಷ್ಣುವರ್ಧನ್ ಅವರ ಅಪರೂಪದ ನೆನಪು ಮತ್ತು ವಸ್ತು ಇನ್ನೂ ಕೂಡ ಮೇಘನಾ ಅವರ ಬಳಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮೇಘನಾ ಅವರುವಿಷ್ಣುವರ್ಧನ್ ಅವರ ಜೊತೆಗೆ ಇರುವ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ , ಈ ವಾಚ್ ವಿಚಾರವನ್ನ ಕೂಡ ಸ್ವತಃ ಅವರೇ ಒಮ್ಮೆ ಹಂಚಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button