Viral

ಒಂದು ಗ್ರಾಂ ಚೇಳಿನ ವಿಷಕ್ಕಿರುವ ರೇಟ್ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ತಿಂಗಳಿಗೆ ಕೋಟ್ಯಂತರ ರೂಪಾಯಿ ಸಂಪಾದನೆ

ಜನ ಜೀವನ ನಡೆಸೋದಕ್ಕೆ ಏನೆಲ್ಲಾ ಕೆಲಸ ಮಾಡ್ತಾರೆ ಅಲ್ವಾ? ಇಲ್ಲೊಬ್ಬ ಪುಣ್ಯಾತ್ಮ ಬದುಕೋದಕ್ಕಾಗಿ ಚೇಳು ಸಾಕುತ್ತಿದ್ದಾನೆ. ಅದು ಒಂದೆರಡಲ್ಲ. ಬರೋಬ್ಬರಿ 80 ಸಾವಿರ ಚೇಳುಗಳನ್ನು ಆತ ಸಾಕುತ್ತಿದ್ದಾನೆ, ಚೇಳುಗಳಿಗಾಗಿ ಆತ ಕಂಪನಿಯನ್ನೇ ತೆರೆದಿದ್ದಾನೆ.

 

 

ಅಂದ್ಹಾಗೆ ಹೀಗೆ ಚೇಳು ಸಾಕುತ್ತಿರೋದು ಈಜಿಪ್ಟ್​ನ ಮೊಹಮ್ಮದ್ ಹ್ಯಾಮಿ ಬೋಷ್ತಾ. ಈತ ಪುರಾತತ್ವ ಶಾಸ್ತ್ರದಲ್ಲಿ ಪದವಿ ಪಡೆಯುವಾಗ ಚೇಳು ಸಾಕುವ ಯೋಚನೆ ಬಂದಿತಂತೆ. ಪದವಿಯನ್ನು ಅರ್ಧದಲ್ಲೇ ತ್ಯಜಿಸಿ ಈತ ಚೇಳು ಸಾಕಲು ಆರಂಭಿಸಿದ್ದಾನೆ. ಅದಕ್ಕೆಂದೇ ಕೈರೋ ವೆನಮ್ ಹೆಸರಿನ ಸಂಸ್ಥೆ ಸ್ಥಾಪಿಸಿದ್ದಾನೆ. ಈ ಸಂಸ್ಥೆಯ ಮೂಲಕ ದೇಶದ ವಿವಿಧ ಭಾಗದಲ್ಲಿ ಸುಮಾರು 80 ಸಾವಿರ ಚೇಳನ್ನು ಸಾಕಿದ್ದಾನೆ.

 

 

ಈತ ಚೇಳು ಸಾಕುವುದಕ್ಕೆ ಒಂದು ಪ್ರಮುಖ ಕಾರಣವಿದೆ. ಚೇಳಿನ ಬಾಲದ ತುದಿಯಿಂದ ಬರುವ ವಿಷವನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆಯಂತೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆಯಿದೆ. ಯುವಿ ಕಿರಣಗಳನ್ನು ಬಳಸಿ ಚೇಳನ್ನು ಸೆರೆ ಹಿಡಿಯಲಾಗುತ್ತದೆ. ನಂತರ ಅವುಗಳಿಗೆ ಸಣ್ಣ ಪ್ರಮಾಣದ ವಿದ್ಯುತ್​ ನೀಡಿ, ಅವುಗಳಿಂದ ವಿಷವನ್ನು ಸಂಗ್ರಹಿಸಲಾಗುವುದು.

 

 

ಪ್ರತಿ ಒಂದು ಗ್ರಾಂ ವಿಷಕ್ಕೆ 10 ಸಾವಿರ ಅಮೆರಿಕನ್​ ಡಾಲರ್​ ಅಂದರೆ ಸರಿಸುಮಾರು 7.4 ಲಕ್ಷ ರೂಪಾಯಿ ಬೆಲೆ ಇದೆಯಂತೆ. ಹಾಗಾಗಿ ಈಗ ಆತ ತಿಂಗಳಿಗೆ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ.

Leave a Reply

Your email address will not be published. Required fields are marked *

Back to top button