Viral

ಪ್ರೀತಿಯನ್ನೇ ನಂಬಿ ಮದುವೆ ಮಾಡಿಕೊಂಡದ್ದಕ್ಕೆ ಇಂದು ಶವವಾಗಿ ಬಿಟ್ಟ-ತಂದೆಯೇ ವಿಲನ್‌

ಪ್ರೇಮ ವಿವಾಹ ಮಾಡಿಕೊಂಡಿದ್ದೇ ಈ ಜೋಡಿಗೆ ಮುಳುವಾಯಿತು. ಇಡೀ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಈ ಸುದ್ದಿಯನ್ನು ಕೇಳಿದರೆ ನಿಮಗೂ ಶಾಕ್‌ ಆಗುತ್ತದೆ.‌ ಆ ಹುಡುಗನ ಕೊಲೆ ಮಾಡಿಸಿದ್ದು, ಇದೇ ಹುಡುಗಿಯ ತಂದೆ. ಆ ವೇಳೆಗಾಗಲೇ ಆಕೆ ಗರ್ಭಿಣಿಯಾಗಿದ್ದಳು. ತನ್ನ ಗಂಡನನ್ನು ಕಳೆದುಕೊಂಡ ಈಕೆಯ ಪಾಡೇನಾಯಿತು ಎಂದು ತಿಳಿದರೆ ನಿಜಕ್ಕೂ ನಿಮಗೂ ಕಣ್ಣೀರು ಬರುತ್ತದೆ.

 

 

ಈ ಘಟನೆ ನಡೆದದ್ದು, ನೆರೆಯ ತೆಲಂಗಾಣ ರಾಜ್ಯದ ನೆಲಗೊಂಡ ಜಿಲ್ಲೆಯ ಮಿರಿಯಾಳ ಗುಡ ಎಂಬ ಗ್ರಾಮದಲ್ಲಿ. ಈ ಹುಡುಗನ ಹೆಸರು ಪ್ರಣಯ್‌ ಕುಮಾರ್ ಮತ್ತು ಹುಡುಗಿಯ ಹೆಸರು ಅಮೃತವರ್ಷಿಣಿ. ಇವರಿಬ್ಬರು ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಿಂದಲೇ ಪ್ರೀತಿಸುತ್ತಿದ್ದರು. ನಂತರ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಪೂರೈಸಿದ ನಂತರ ಇಬ್ಬರೂ ಪರಸ್ಪರ ತಮ್ಮ ಕುಟುಂಬದ ಸದಸ್ಯರನ್ನು ಒಪ್ಪಿಸಲು ಪ್ರಯತ್ನಿಸಿದರು. ಆದರೆ ಹುಡುಗ ತಮಗಿಂತಲೂ ಕೆಳ ಜಾತಿವನು ಎಂಬ ಕಾರಣಕ್ಕಾಗಿ ಒಪ್ಪಿಕೊಳ್ಳಲು ಹುಡುಗಿ ಮನೆಯವರು ತಯಾರಿರಲಿಲ್ಲ.

 

 

ಹಾಗಾಗಿ ಇವರಿಬ್ಬರು ಆರ್ಯ ಸಮಾಜ ಮತ್ತು ನೆಲಗೊಂಡ ಪೋಲೀಸರ ಸಹಾಯ ಪಡೆದು ಇಬ್ಬರೂ ಮದುವೆಯಾದರು. ಪ್ರಯಣ್‌ ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾಗಾಗಿ ಅವರಿಗೆ ಹಣಕಾಸಿನ ತೊಂದರೆಯೇನೂ ಕಾಣಿಸಿಕೊಳ್ಳಲಿಲ್ಲ. ಆದರೆ ಹುಡುಗಿಯ ತಂದೆ ಮಾರುತಿ ಕುಮಾರ್‌ ಅವರಿಗೆ ತನ್ನ ಮಗಳು ತನ್ನ ಮಾನ ಮರ್ಯಾದೆಯನ್ನು ಹಾಳು ಮಾಡಿದಳು ಎಂಬ ಜಿದ್ದು ಅವರನ್ನು ನಿರಂತರವಾಗಿ ಕಾಡುತ್ತಲೇ ಇತ್ತು. ಅದನ್ನು ತೀರಿಸಿಕೊಳ್ಳಲು ಸೂಕ್ತವಾದ ಸಮಯಕ್ಕಾಗಿ ಕಾಯುತ್ತಲೇ ಇದ್ದರು.

 

 

ಐದು ತಿಂಗಳ ಗರ್ಭಿಣಿ ಅಮೃತವರ್ಷಿಣಿ ಅವರು ಚೆಕಪ್‌ ಮಾಡಿಸಿಕೊಳ್ಳುವ ಸಲುವಾಗಿ ಆಸ್ಪತ್ರೆಗೆ ತನ್ನ ಗಂಡನ ಜೊತೆಗೆ ತೆರಳಿದ್ದಾಗ, ಆಕೆಯ ಕಣ್ಣು ಮುಂದೆಯೇ ನಾಲ್ಕಾರು ಜನ ರೌಡಿಗಳು ಪ್ರಣಯ್‌ ನನ್ನು ಕೊ’ ಲೆ ಮಾಡಿಬಿಟ್ಟರು. ಇದಾದ ಬಳಿಕ ಆಕೆಯ ತಂದೆ ದೂರವಾಣಿ ಮಾಡಿ ನಿನ್ನ ಗಂಡನಿಗೆ ನಾನು ಈಗಾಗಲೇ ಮೂರು ಕೋಟಿ ಹಣ ಕೊಡುತ್ತೇನೆ. ನನ್ನ ಮಗಳನ್ನು ಬಿಟ್ಟು ಬಿಡು ಎಂದು ಹೇಳಿದೆ.

 

 

ಆದರೆ ಆತ ಮಾತ್ರ ಹಣಕ್ಕಿಂತ ಪ್ರೀತಿಯೇ ಮುಖ್ಯ ಎಂದು ನಿನ್ನನ್ನು ಮದುವೆ ಮಾಡಿಕೊಂಡ. ಹಾಗಾಗಿ ನಿನ್ನ ಮದುವೆಗಿಂತ ಅವನ ಕೊ’ ಲೆಯೇ ಹೆಚ್ಚು ವೈರಲ್‌ ಆಗುತ್ತದೆ ಎಂದು ಹೇಳಿ ಫೋನ್‌ ಇಡುತ್ತಾನೆ. ಇದನ್ನು ಕೇಳಿದ ಅಮೃತಳಿಗೆ ಎದೆ ಒಡೆದಂತಾಗಿ ಬಿಡುತ್ತದೆ. ತನ್ನ ತಂದೆಯೇ ತನ್ನ ಬದುಕಿನಲ್ಲಿ ವಿಲನ್‌ ಆಗಿದ್ದ ಎಂಬ ಸತ್ಯವೂ ಆಕೆಗೆ ಅರಿವಾಗಿತ್ತು. ಅವರು ಮುಂದಿನ ಮೂರು ತಿಂಗಳಲ್ಲಿ ಕೆನಡಾ ದೇಶಕ್ಕೆ ತೆರಳಿ ಅಲ್ಲಿಯೇ ಸೆಟಲ್‌ ಆಗುವ ಯೋಜನೆಯಲ್ಲಿದ್ದರು.

 

 

ಆದರೆ ಅದು ಕನಸಾಗಿಯೇ ಉಳಿದುಬಿಟ್ಟಿತು. ಪ್ರಣಯ್‌ ದಲಿತನಾಗಿ ಹುಟ್ಟಿದ ಎಂಬ ಒಂದೇ ಕಾರಣಕ್ಕೆ ಕೊ’ ಲೆಯಂತಹ ಘೋರವಾದ ಶಿಕ್ಷೆ ನೀಡಿದ್ದು ಅದ್ಯಾವ ನ್ಯಾಯ ಹೇಳಿ? ಅಥವಾ ತನಗಿಂತ ಮೇಲು ಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದದ್ದೇ ಆತನ ಜೀವಕ್ಕೇ ಸಂಚಕಾರವನ್ನು ತಂದುಬಿಟ್ಟಿತ್ತು. ಆತ ಹುಡುಗಿಯ ಮನೆಯಿಂದ ಒಂದೇ ಒಂದು ರೂಪಾಯಿ ಬಯಸದೇ ಪ್ರೀತಿಯನ್ನೇ ನಂಬಿ ಮದುವೆ ಮಾಡಿಕೊಂಡದ್ದಕ್ಕೆ ಇಂದು ಶವವಾಗಿ ಬಿಟ್ಟಿದ್ದಾನೆ.

Leave a Reply

Your email address will not be published. Required fields are marked *

Back to top button