Entertainment

ವಿವಾದಾತ್ಮಕ ಹಾಡುಗಳನ್ನು ಹಾಡಿದ್ದ ಚಂದನ್‌ ಶೆಟ್ಟಿ ಆಸ್ತಿ ಏಷ್ಟು ಕೋಟಿ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ನಾನಾ ರೀತಿಯ ಪ್ರಯೋಗಕರ್ತರು ಬಂದಿದ್ದಾರೆ. ಅವರು ತಮ್ಮ ಪ್ರಯೋಗಗಳ ಮೂಲಕ ಇಡೀ ಚಿತ್ರರಂಗವನ್ನು ವಿಭಿನ್ನ ಹಂತಕ್ಕೆ ತೆಗೆದುಕೊಂಡು ಹೋಗಿದ್ದೇ ಅಲ್ಲದೇ, ಅವರು ತಮ್ಮ ಪ್ರತಿಭೆಯ ಮೂಲಕ ಜನರ ಮನೆ ಮಾತಾದರು. ಆ ಮೂಲಕ ಅವರು ಕನ್ನಡದ ರ್ಯಾಪರ್‌ ಎಂದೇ ಖ್ಯಾತಿ ಪಡೆದಿರುವ ಚಂದನ್‌ ಶೆಟ್ಟಿ ಅವರು ಬಿಗ್‌ ಬಾಸ್‌ ಸೀಸನ್‌ ೫ ವಿನ್ನರ್‌ ಆದ ಬಳಿಕ ಬೇರೆಯದೇ ಹಂತಕ್ಕೆ ಬೆಳೆದರು.

 

 

ಇವರು ತಮ್ಮ ಹಾಡುಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಇದೇ ಬಿಗ್‌ ಬಾಸ್‌ ಸೀಸನ್‌ ೫ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಟಿಕ್‌ ಟಾಕ್‌ ಖ್ಯಾತಿಯ ನಿವೇದಿತಾ ಗೌಡ ಅವರನ್ನು ವಿವಾಹ ಮಾಡಿಕೊಂಡರು. ಇದಾದ ಬಳಿಕ ಅವರು ಸಾಕಷ್ಟು ವಿವಾದಾತ್ಮಕ ಹಾಡುಗಳನ್ನು ಹಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದರು.

 

 

ಚಂದನ್‌ ಅವರು ಮೂಲತಃ ಹಾಸನದವರು. ಇವರು ಸೆಪ್ಟೆಂಬರ್‌ ೧೭, ೧೯೮೯ರಂದು ಜನಿಸಿದರು. ಇವರು ಮೈಸೂರಿನ ವಿದ್ಯಾವರ್ಧಕ ಪದವಿ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರ ತಂದೆ ಪರಮೇಶ್‌ ಶೆಟ್ಟಿ ಹಾಗೂ ತಾಯಿ ಪ್ರೇಮಾ ಶೆಟ್ಟಿ. ಚಂದನ್‌ ಶೆಟ್ಟಿ ಅವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಅವರ ಹೆಸರು ಪುನೀತ್‌ ರಾಜ್‌ ಶೆಟ್ಟಿ ಎಂದು.

 

 

ಇವರ ಹವ್ಯಾಸ ಪ್ರಯಾಣ ಮಾಡುವುದು ಮತ್ತು ಸಂಗೀತ ನಿರ್ದೇಶನ ಮಾಡುವುದು. ಇವರಿಗೆ ಕೆಂಪು ಮತ್ತು ಕಪ್ಪು ಬಣ್ಣ ಎಂದರೆ ಬಹಳ ಇಷ್ಟಪಡುತ್ತಾರೆ. ಅಲ್ಲದೇ, ಅಮೆರಿಕದ ಚಿಕಾಗೋ ನಗರ ಎಂದರೆ ಬಹಳ ಇಷ್ಟವಾಗುತ್ತದೆಯಂತೆ. ಇನ್ನೊವಾ ಮತ್ತು ಬಿಎಂಡಬ್ಯೂ ಕಾರು ಎಂದರೆ ಇವರಿಗೆ ಬಹಳ ಇಷ್ಟವಾಗುತ್ತದೆ.

 

 

ಇವರು ಇದುವರೆಗೂ ೪-೫ ಕೋಟಿ ರೂಪಾಯಿಯಷ್ಟು ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ. ಚಂದನ್‌ ಅವರು ಆರಂಭದಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜನ್‌ ಜನ್ಯ ಅವರ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅಲೆಮಾರಿ, ಆಟೋರಾಜ, ಚಕ್ರವ್ಯೂಹ ಸೇರಿದಂತೆ ನಾನಾ ಚಿತ್ರಗಳ ಸಂಗೀತಕ್ಕೆ ಕೆಲಸ ಮಾಡಿದರು.

 

 

ಇದಾದ ಬಳಿಕ ಅವರು ಹಾಳಾಗಿ ಹೋದೆ, ಮೂರೇ ಮೂರು ಪೆಗ್ಗಿಗೆ ಹಾಗೂ ಟೆಕ್ಕಿಲಾ ಹಾಡಿನ ಮೂಲಕ ತಮ್ಮದೇ ಆದ ಛಾಪನ್ನು ಕನ್ನಡ ಭಾಷೆಯ ಆಧುನಿಕ ಸಂಗೀತ ಕ್ಷೇತ್ರದಲ್ಲಿ ಮೂಡಿಸಿದರು. ಈಗ ಇವರು ಸ್ವತಃ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಸೀಸರ್‌, ಪೊಗರು ಮತ್ತು ದುಬಾರಿ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಇಷ್ಟೇ ಅಲ್ಲದೇ, ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಗಿಲೆ ಹಾಗೂ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದರು.

 

Related Articles

Leave a Reply

Your email address will not be published. Required fields are marked *

Back to top button