Entertainment

ಬಲಗೈಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದೆಂಬ ಮಾತನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದ ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜ್ ಕುಮಾರ್…!!!

ಸ್ನೇಹಿತರೆ ಕನ್ನಡದ ಮುತ್ತು ಕೊಹಿನೂರು ವಜ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಶುಕ್ರವಾರ ಬೆಳಗ್ಗೆನೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು. ಬಳಿಕ ಈ ವಿಷಯ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲ ಸಿನಿಮಾರಂಗಕ್ಕೆ ತುಂಬಲಾರದ ನೋವು ಶಾಕ್ ಎದುರಾಯಿತು. ಎಲ್ಲಾ ಅಭಿಮಾನಿಗಳು ಈ ವಿಷಯ ಕೇಳುತ್ತಿದ್ದಂತೆಯೇ ಇದನ್ನು ಯಾರಿಗೂ ಕೂಡ ನಂಬಲು ಆಗಲಿಲ್ಲ, ಶಾಕ್ ಗೆ ಒಳಗಾದರು. ವಾಸ್ತವ ಕಹಿಸತ್ಯವನ್ನು ಎಲ್ಲರೂ ನಂಬಿ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದೊದಗಿತ್ತು.

 

 

ಜೊತೆಗೆ ದೇವರನ್ನು ಶಪಿಸುವುದು ಬಿಟ್ಟರೆ ಬೇರೆ ಯಾವುದೇ ದಾರಿ ತೋಚಲಿಲ್ಲ. ಪುನೀತ್ ಅವರು ಯಾವಾಗಲೂ ಒಳ್ಳೆಯ ಆದರ್ಶ ವ್ಯಕ್ತಿಗಳಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಯಾವಾಗಲೂ ಸಮಾಜಮುಖಿ ಕೆಲಸ ಮಾಡಿ ಪ್ರೀತಿ-ಪ್ರೇಮ ಹಂಚಿ ಅಪ್ಪು ಅವರು ಈಗ ಕೇವಲ ಅವರ ನೆನಪನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಹಾಗೆ ಒಳ್ಳೆಯ ಕಾರ್ಯಗಳನ್ನು ಸಿನಿಮಾಗಳನ್ನು ಬಿಟ್ಟು ಹೋಗಿದ್ದಾರೆ. ಪುನೀತ್ ಅವರ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಹಾಗೂ ಇವರ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ. ನೋವು ಹೇಳಿಕೊಳ್ಳಲಾಗದಷ್ಟು ಇದೆ.

 

 

ಆದರೆ ಏನು ಮಾಡುವುದು ವಿಧಿ ತುಂಬಾನೇ ಕ್ರೂರಿಯಾದ. ಹೌದು ಇದರ ಜೊತೆ ಪುನೀತ್ ಅವರ ಅಂತಿಮ ಸಂಸ್ಕಾರ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಇದೀಗ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಪುನೀತ್ ಕಾರ್ಯಗಳು ಯಾವ ರೀತಿ ನಡೆಯುತ್ತಿದ್ದವು, ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎಂದು ಅಪ್ಪು ಯಾವ ರೀತಿ ಮಾಡುತ್ತಿದ್ದರು ಎಂದು ಈ ವಿಡಿಯೋ ಮೂಲಕ ಗೊತ್ತಾಗಿದೆ. ಈ ವಿಡಿಯೋ ನೋಡಿ ಹೆಮ್ಮೆಯೆನಿಸುತ್ತದೆ. ಇಂತಹ ನಟನನ್ನು ನಾವು ಬೇಗನೆ ಕಳೆದುಕೊಂಡೆವು. ಆ ದೇವರು ಕೂಡ ಇಂತಹ ವ್ಯಕ್ತಿತ್ವ ವ್ಯಕ್ತಿನ ಮೆಚ್ಚಿಕೊಂಡು ಮೇಲಕ್ಕೆ ಕರೆದುಕೊಂಡು ಎಲ್ಲರಿಗೂ ನೋವು ಕೊಟ್ಟು ಬಿಟ್ಟ ಎಂದೆನಿಸುತ್ತದೆ.

 

Related Articles

Leave a Reply

Your email address will not be published. Required fields are marked *

Back to top button