Entertainment

ಕೊನೆಗೂ ಅಪ್ಪನ ಕೊನೆಯ ಆಸೆ ಇಡೇರಿಸಲು ನಿರ್ಧರಿಸಿದ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಧೃತಿ..ಅಪ್ಪನಂತೆ ದಿಟ್ಟೆ ಅಪ್ಪು ಮಗಳು…!!!

ಪುನೀತ್ ರಾಜ್‌ಕುಮಾರ್‌ಗೆ ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಪುತ್ರಿ ದೃತಿ ನ್ಯೂಯಾರ್ಕ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಪುತ್ರಿ ಬೆಂಗಳೂರಿನಲ್ಲಿರುವ ಶಾಲೆಯಲ್ಲಿ ಓದುತ್ತಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಶುಕ್ರವಾರ ಬೆಳಗ್ಗೆ 11.30 ರ ಸಮಯದಂದು ಎದೆನೋವು ಕಾಣಿಸಿಕೊಂಡು ಅವರು ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಸಾವಿರಾರು ಕೋಟ್ಯಾಂತರ ಅಭಿಮಾನಿಗಳನ್ನು ಮತ್ತು ಕುಟುಂಬವರ್ಗದವರನ್ನು ಬಿಟ್ಟು ಅಗಲಿದ್ದಾರೆ.

 

 

ಈ ವಿಚಾರ ಇಡೀ ಕರ್ನಾಟಕಕ್ಕೆ ಬಹಳ ದೊಡ್ಡ ನೋವನ್ನು ತಂದುಕೊಟ್ಟಿದೆ ಹಾಗೂ ಕನ್ನಡ ಚಿತ್ರರಂಗ ಶಕ್ತಿಹೀನವಾಗಿ ಕುಗ್ಗಿ ಹೋಗಿಬಿಟ್ಟಿದೆ. ಈ ನಡುವೆ ಅಪ್ಪು ಅವರ ಮಗಳು ದೃತಿ ವಿದೇಶದಲ್ಲಿ ಓದುತ್ತಿರುವ ಕಾರಣ ತನ್ನ ತಂದೆಯನ್ನು ಕೊನೆಯಬಾರಿ ನೋಡಲು ಬಹಳ ಕಾತುರದಿಂದ ಬಂದಿದ್ದಾರೆ.  ಅಪ್ಪು ಅವರ ಮಗಳಾದ ಅಮೆರಿಕದ ನ್ಯೂಯಾರ್ಕ್ ನ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸ್ವಂತ ಮಕ್ಕಳಂತೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದರು.

 

 

ಹಣ ಕೊಟ್ಟ ನಾನು ವಿದೇಶಕ್ಕೆ ಕಳುಹಿಸುವುದಿಲ್ಲ, ನೀನು ಶ್ರಮ ಪಟ್ಟು ಓದಿ ಮೆರಿಟ್ ಬಂದರೆ ಮಾತ್ರ ಕಳುಹಿಸುವೆ ಎಂದು ಹಿರಿಯ ಪುತ್ರಿ ದೃತಿಗೂ ಹೇಳಿದ್ದರಂತೆ. ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಲು ಅಗತ್ಯ ಅಂಕಗಳನ್ನು ಪಡೆದ ನಂತರವೇ ಪುನೀತ್ ಮಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಮರಳಿದ್ದರಂತೆ. ಒಬ್ಬ ಸ್ಟಾರ್ ನಟನ ಮಗಳಾಗಿ ತನ್ನ ತಂದೆಯ ಹೆಸರನ್ನು ಬಳಸಿಕೊಂಡು ಯೂನಿವರ್ಸಿಟಿಯಲ್ಲಿ ಸಿಟ್ ಪಡೆದಿಲ್ಲ. ಬದಲಾಗಿ ಕಷ್ಟಪಟ್ಟು ಶ್ರಮವಹಿಸಿ ಓದಿ ತನಗೆ ಬಂದಂತಹ ಅಲ್ಲಿನ ಸ್ಕಾಲರ್ಷಿಪ್ ನಿಂದ ಉಚಿತವಾಗಿ ಹೊರದೇಶಕ್ಕೆ ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

 

 

ಮಗಳು ವಿದೇಶಕ್ಕೆ ಹೋಗುವಾಗ ಸ್ವತಹ ಅಪ್ಪು ಅವರ ಮಗಳನ್ನು ಡ್ರಾಪ್ ಮಾಡಿ ಬಂದಿದ್ದರು.ಈ ಕೆಟ್ಟ ಘಟನೆ ಆಗುವ ಸ್ವಲ್ಪ ದಿನಗಳ ಹಿಂದೆ ಸಹ ಅಪ್ಪು ಅವರಿಗೆ ತಮ್ಮ ಮಗಳಾದ ಶೃತಿ ಅವರನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರಂತೆ ಅಪ್ಪು. ಆಗ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಡಿಸೆಂಬರ್ ತಿಂಗಳಿಗೆ ರಜ ಬಂದಾಗ ಬರುತ್ತಾಳೆ ಆಗ ನೋಡುವಿರಂತೆ ಬಿಡಿ ಎಂದು ಹೇಳಿದರಂತೆ. ತನ್ನ ಮಗಳು ಸ್ಕಾಲರ್ಶಿಪ್ ಪಡೆದು ತನ್ನ ಪ್ರತಿಭೆಯಿಂದ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಸೀಟ್ ಪಡೆದು ಓದುತ್ತಿರುವುದಕ್ಕೆ ಬಹಳ ಹೆಮ್ಮೆ ಪಟ್ಟಿದ್ದರಂತೆ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ.

 

 

ನ್ಯೂಯಾರ್ಕ್‌ನಲ್ಲಿ ಓದುತ್ತಿದ್ದ ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ ಧೃತಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಧೃತಿ ಕಾರಣಕ್ಕಾಗಿ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಮಾಡುವುದು ತಡವಾಗಿತ್ತು.  ಬಿಗಿ ಪೊಲೀಸ್ ಭದ್ರತೆಯೊಂದಿಗೆ, ವಿಶೇಷ ವಿಮಾನದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಪ್ಪನನ್ನು ಕೊನೆಯದಾಗಿ ಕಳಿಸಿಕೊಡಲು ಪುತ್ರಿ ವಿದೇಶದಿಂದ ಈಗ ಅವರೇ ಬರುವಂತಾಗಿದೆ. ಮಗಳು ಧೃತಿ ವಿದೇಶದಿಂದ ಬರೋದು ತಡವಾಗಿದ್ದರಿಂದ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆಯನ್ನು ಭಾನುವಾರ (ಅ 30) ಮಾಡಬೇಕು ಎಂದು ಕುಟುಂಬಸ್ಥರು ನಿರ್ಧಾರ ತೆಗೆದುಕೊಂಡಿದ್ದರು.

 

 

ಸಂಜೆ ಅಂತ್ಯಕ್ರಿಯೆ ಮಾಡಬಾರದು ಎಂಬ ನಿಯಮವನ್ನು ದೊಡ್ಮನೆ ಕುಟುಂಬ ಪಾಲಿಸುತ್ತದೆಯಂತೆ. ಇದೀಗ ತಂದೆಯ ಸಾವಿನ ನೋವಿನಿಂದ ಹೊರ ಬರಲು ಧೃತಿ ಬಹಳ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಮನೆಯಲ್ಲಿದ್ದರೆ ತಂದೆಯವರ ನೆನಪು ಎಲ್ಲೆಲ್ಲಿಯೂ ಕಾಡುವುದೆಂದು ಅಪ್ಪನ ಆಸೆಯಂತೆ ವಿದ್ಯಾಭ್ಯಾಸ ಮಾಡಲು ಮರಳಿ ನ್ಯೂಯಾರ್ಕ್ ಗೆ ತೆರಳಿದ್ದಾರೆ ಧೃತಿ..ಇದು ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಲಿ ಎಂದು ಹಾರೈಸೋಣ..

Related Articles

Leave a Reply

Your email address will not be published. Required fields are marked *

Back to top button