Entertainment

ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸಯ್ಯದ್ ಜೊತೆ ಹೊಸ ಪಲ್ಸರ್ ಬೈಕ್ ಮೇಲೆ ಜಾಲಿ ರೈಡ್ ಹೊರಟ ಕುರಿಗಾಹಿ ಗಾಯಕ ಹನುಮಂತು..!!!

ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅತಿಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರ್ಯಕ್ರಮಗಳಲ್ಲಿ ಪ್ರಮುಖವಾದದ್ದು ಸರಿಗಮಪ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರತಿ ಮನೆಯಲ್ಲೂ ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ. ಸರಿಗಮಪ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಅತಿಮುಖ್ಯವಾದ ಆಕರ್ಷಣೆ. ಇವರ ಜೊತೆಯಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ.

 

 

ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಅದೆಷ್ಟೋ ಜನರಿಗೆ ಈ ಕಾರ್ಯಕ್ರಮ ಬಹಳ ಮುಖ್ಯವಾದ ವೇದಿಕೆ ಆಗಿದೆ. ಇಲ್ಲಿಯರೆಗೂ 15ಕ್ಕು ಹೆಚ್ಚು ಸೀಸನ್ ಗಳನ್ನು ಮುಗಿಸಿದೆ ಸರಿಗಮಪ ಕಾರ್ಯಕ್ರಮ. ಈ 15 ಸೀಸನ್ ಗಳಲ್ಲಿ ಅದೆಷ್ಟೋ ಯುವಪ್ರತಿಭೆಗಳಿಗೆ ಹೊಸ ಅವಕಾಶ ಸಿಕ್ಕಿದೆ. ‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ ಸೀಸನ್ 13’ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು ವೀಕ್ಷಕರಿಗೆ ಬಹಳ ಇಷ್ಟ ಆಗಿದ್ದರು. ಅದರಲ್ಲಿಯೂ ಸುಹಾನಾ ಸೈಯದ್ ಹಾಡು ಅಂದರೆ ಎಲ್ಲರಿಗೂ ಸಖತ್ ಫೇವರಿಟ್ ಆಗಿತ್ತು.

 

 

ಸುಹಾನಾ ಸೈಯದ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ. ಇಷ್ಟು ದಿನ ತಮ್ಮ ಹಾಡಿನ ಮೂಲಕ ಮನೆ ಮಾತಾಗಿದ್ದ ಈ ಹುಡುಗಿ ಈಗ ತಮ್ಮ ಸ್ಟೈಲಿಶ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸರಿಗಮಪ ಕಾರ್ಯಕ್ರಮದ ಮೂಲಕ ಸುಹಾನಾ ದೊಡ್ಡ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರು ಹಾಡಿದ ‘ಮುಕುಂದ ಮುರಾರಿ’ ಹಾಡನ್ನು ಮರೆಯುವುದಕ್ಕೆ ಆಗಲ್ಲ. ಸರಿಗಮಪ ಕಾರ್ಯಕ್ರಮ ಶುರುವಿನಲ್ಲಿ ಸಖತ್ ಸುದ್ದಿ ಮಾಡಿದ್ದ ಸುಹಾನಾ ಸೈಯದ್ ಸೆಮಿ ಫೈನಲ್ ನಲ್ಲಿ ಎಲಿಮಿನೇಟ್ ಆದರು. ಸಣ್ಣ ಹಳ್ಳಿಯಿಂದ ಬಂದಿದ್ದ ಹನುಮಂತ ಕರ್ನಾಟಕದ ಜನತೆಗೆ ಬಹಳ ಹತ್ತಿರವಾಗಿದ್ದರು.

 

 

View this post on Instagram

 

A post shared by Suhaana Syed (@suhaana_syed)

 

ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದ ಹನುಮಂತ, ಇದೀಗ ಸರಿಗಮಪ ಮೂಲಕ ಫೇಮಸ್ ಆಗಿದ್ದ ತನ್ನ ಫ್ರೆಂಡ್ ಸುಹಾನ ಸೈಯದ್ ಅವರ ಜೊತೆ ಹೊಸ ಇನ್ಸ್ಟಾಗ್ರಾಮ್ ರೀಲ್ ನಲ್ಲಿ ಕಾಣಿಸಿಕೊಂಡಿದ್ದಾನೆ. ಇತ್ತೀಚೆಗೆ ಹೊಸ ಪಲ್ಸರ್ ಬೈಕ್ ಖರೀದಿಸಿದ್ದಾನೆ ಸರಿಗಮಪ ಹನುಮಂತ. ತನ್ನ ಹೊಸ ಬೈಕ್ ನಲ್ಲಿ ಫ್ರೆಂಡ್ ಸುಹಾನ ಅವರನ್ನು ಒಂದು ರೌಂಡ್ ಕರೆದುಕೊಂಡು ಹೋಗಿದ್ದಾನೆ. ಕೆಂಪು ಬಣ್ಣದ ಪಲ್ಸರ್ ಬೈಕ್ ನಲ್ಲಿ ಹನುಮಂತ ಕುಳಿತಿರುವಾಗ ಸುಹಾನ ಬಂದು ಹನುಮಂತನ ಹಿಂದೆ ಬೈಕ್ ನಲ್ಲಿ ಕುಳಿತುಕೊಳ್ಳುತ್ತಾರೆ ಈ ವಿಡಿಯೋಗೆ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡನ್ನು ರೀಲ್ಸ್ ಮೂಲಕ ಹಾಕಲಾಗಿದೆ.

Related Articles

Leave a Reply

Your email address will not be published. Required fields are marked *

Back to top button