Entertainment

ಪವರ್ ಸ್ಟಾರ್ ಪುನೀತ್ ಸಮಾಧಿಯನ್ನು ದಿಟ್ಟಿಸಿ ನೋಡುತ್ತಾ ಸೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನು ಹೇಳಿದ್ದಾರೆ ಗೊತ್ತಾ..?

ಕರ್ನಾಟಕಾದ್ಯಂತ ದೊಡ್ಮನೆ ಮಕ್ಕಳು ಎಂದು ಹೆಸರು ಪಡೆದು ದೊಡ್ಮನೆಯ ಘನತೆ ಹಾಗೂ ಗೌರವರನ್ನು ದುಪ್ಪಟ್ಟು ಮಾಡಿದ್ದ ಮೂವರು ರತ್ನಗಳು ಎಂದರೆ ಡಾ.ಶಿವ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ರವರು. ಹೌದು ಇಂದು ಈ ಮೂವರು ರತ್ನಗಳಲ್ಲಿ ಒಂದು ರತ್ನ ಈ ಲೋಕವನ್ನೇ ಬಿಟ್ಟು ಹೋಗಿದ್ದು ಮುದ್ದಿನ ತಮ್ಮನನ್ನು ಕಳೆದುಕೊಂಡಿರುವ ಶಿವಣ್ಣ ಮತ್ತು ರಾಘಣ್ಣ ಇಬ್ಬರಿಗೂ ತಮ್ಮ ಸ್ವಂತ ಮಗನನ್ನೇ ಕಳೆದುಕೊಂಡಷ್ಟು ದುಃಖ ಆವರಿಸಿದೆ.

 

 

ಕನ್ನಡ ನೆಲದ ಯುವರತ್ನ ನಟ ಪುನೀತ್ ರಾಜ್​ಕುಮಾರ್ ರವರು ಇದೀಗ ಮಣ್ಣಲ್ಲಿ ಮಣ್ಣಾಗಿ ಭೂತಾಯಿಯ ಮಡಿಲು ಸೇರಿದ್ದಾರೆ. ಹೌದು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ತಾಯಿ ಪಾರ್ವತಮ್ಮ ರವರ ಸಮಾಧಿ ಪಕ್ಕದಲ್ಲೇ ಕೊನೆಯ ವಿಧಿ ನಡೆಸಲಾಯಿತು. ಹೌದು ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಗಿದ್ದು ರಾಘವೇಂದ್ರ ರಾಜ್​ಕುಮಾರ್ ರವರ ಮಗ ವಿನಯ್​ ರಾಜ್​ಕುಮಾರ್ ರವರು ಕೊನೆಯ ವಿಧಿಯನ್ನು ನೆರವೇರಿಸಿದರು.

 

 

ಡಾ.ರಾಜ್​ಕುಮಾರ್ ಕುಟುಂಬಸ್ಥರು ಹಾಗೂ ಸಿಎಂ ಸೇರಿ ಗಣ್ಯಾತಿಗಣ್ಯರು ಚಿತ್ರರಂಗದ ನಟ-ನಟಿಯರು ದೊಡ್ಮನೆ ಹುಡುಗನಿಗೆ ನಮನ ಸಲ್ಲಿಸಿದ್ದು ಎಲ್ಲರ ಪ್ರೀತಿಯ ಅಪ್ಪು ಕುಟುಂಬಸ್ಥರ ಮೈತ್ರಿ ತೊರೆದು ಪೃಥ್ವಿ ಸೇರಿ ಬಿಟ್ಟಿದ್ದಾರೆ. ಇದೆಲ್ಲದರ ಜೊತೆಗೆ ಕೊರೊನಾ ಸಮಯದಲ್ಲಿ ಕೂಡ ಪುನೀತ್ ಅವರು‌ ಮಾಡಿರುವ ಸಹಾಯ ಲೆಕ್ಕವಿಲ್ಲದಷ್ಟಿದೆ. ಹತ್ತು ರೂಪಾಯಿ ಕೊಟ್ಟು ನೂರು ರೂಪಾಯಿಯ ಫೋಟೋ ಹಾಕಿಸಿಕೊಳ್ಳುವ ಜನರ ಮಧ್ಯೆ ಎಷ್ಟೇ ದಾನ ಧರ್ಮ ಮಾಡಿದರೂ ಕೂಡ ಪುನೀತ್ ಅವರು ಹೊರಗೆಲ್ಲೂ ಕೂಡ ಗೊತ್ತಾಗದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದದ್ದು ನಿಜಕ್ಕೂ ಅವರ ದೊಡ್ಡ ಗುಣವೇ ಸರಿ ಎನ್ನಬಹುದು. ಆದರೆ ಇದೆಲ್ಲದರ ನಡುವೆ ಅಚ್ಚರಿಗೊಳ್ಳುವಂತಹ ವಿಚಾರ ಎಂದರೆ ಮತ್ತೊಂದಿದೆ.

 

 

ಹೌದು ಪುನೀತ್ ಅವರು ಇಷ್ಟೆಲ್ಲಾ ವೃದ್ಧಾಶ್ರಮಗಳಿಗೆ ಗೋಶಾಲೆಗಳಿಗೆ ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ನೆರವಾಗಿದ್ದರು ಎಂಬ ವಿಚಾರ ಸ್ವತಃ ಪುನೀತ್ ರಾಜ್ ಕುಮಾರ್ ಅವರ ಅಣ್ಣ ಶಿವಣ್ಣನಿಗೆ ಕೂಡ ತಿಳಿದಿರಲಿಲ್ಲ. ಹೌದು ಈ ಬಗ್ಗೆ ಇದೀಗ ಮಾದ್ಯಮದವರ ಜೊತೆ ಮಾತನಾಡಿದ ಶಿವಣ್ಣ ಸತ್ಯವಾಗ್ಲೂ ಅವನು ಇಷ್ಟೆಲ್ಲಾ ಸಹಾಯ ಮಾಡಿತ್ತಿದ್ದಾನೆ ಎಂಬ ವಿಚಾರ ಗೊತ್ತಿರಲಿಲ್ಲ. ನಾವೆಲ್ಲಾ ಅವನ ಕನಸು ಆಸೆಗಳನ್ನ ಈಡೇರಿಸಲು ಕೆಲಸ ಮಾಡುತ್ತೇವೆ. ಪ್ರತಿಯೊಬ್ಬರೂ ಅಪ್ಪುವಿನಂತೆ ಸಮಾಜಕ್ಕಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

 

 

ಇತ್ತೀಚೆಗೆ ಶಿವಣ್ಣ ಅವರು ಒಬ್ಬರೇ ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಸ’ಮಾಧಿ ಮುಂದೆ ಇರುವ ತಮ್ಮನ ಫೋಟೋವನ್ನೇ ದೃಷ್ಟಿಸಿ ನೋಡುತ್ತಾ ನಿಂತಿದ್ದರು ಶಿವಣ್ಣ. ಶಿವಣ್ಣ ಅವರು ಸುಮಾರು ಒಂದು ಘಂಟೆಗಳ ಕಾಲ ಅಪ್ಪು ಅವರ ಫೋಟೋ ಮುಂದೆ ಕುಳಿತುಕೊಂಡು, ಧ್ಯಾನ ಮಾಡಿದ್ದಾರೆ. ಈ ಸಮಯದಲ್ಲಿ ಶಿವಣ್ಣ ಅವರು ಬಹಳ ಭಾವುಕರಾಗಿದ್ದರು. ಅಪ್ಪು ಫೋಟೋ ಹತ್ತಿರ ಹೋಗಿ “ಅಪ್ಪು.. ಆರಾಮಾಗಿದ್ದೀಯಾ? ಯಾಕೋ ಹೀಗೆ ಮಾಡಿದೆ” ಎಂದು ಹೇಳಿ ಅಲ್ಲೇ ಕಣ್ಣೀರಿಟ್ಟಿದ್ದಾರೆ ಶಿವಣ್ಣ.

 

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ಮುಗಿಸಿದ್ದ ‘ಜೇಮ್ಸ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ. ಜೊತೆಗೆ ಹಾಡಿನ ಚಿತ್ರೀಕರಣವೂ ಬಾಕಿಯಿತ್ತು ಎನ್ನಲಾಗಿದೆ. ಹಾಗಿದ್ದರೂ ಸಿನಿಮಾ ತಂಡ ಸಿನಿಮಾ ಪೂರ್ತಿ ಮಾಡಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಆದರೆ ಡಬ್ಬಿಂಗ್ ಕೆಲಸಗಳು ಮುಗಿದಿರಲಿಲ್ಲ. ಹೀಗಾಗಿ ಈಗ ಪುನೀತ್ ಗೆ ಧ್ವನಿ ನೀಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಪುನೀತ್ ಗೆ ಶಿವಣ‍್ಣ ಧ್ವನಿ ನೀಡುವ ಸಾಧ‍್ಯತೆಯಿದೆ. ಮುಂದಿನ ವರ್ಷ ಅಪ್ಪು ಜನ್ಮ ದಿನಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

 

Related Articles

Leave a Reply

Your email address will not be published. Required fields are marked *

Back to top button