google.com, pub-4369350038370549, DIRECT, f08c47fec0942fa0

ಬಿಗ್ ಬಾಸ್ ಷೋ ಇಂದ ಹೊರಬಂದ ಕೂಡಲೇ ಮಗನ ಜೊತೆಗೆ ನಟಿ ಮಯೂರಿ ದೀಪಾವಳಿ ಸೆಲೆಬ್ರೇಶನ್

ಕನ್ನಡ ಕಿರುತೆರೆಯಲ್ಲಿ ಹಲವಾರು ನಟಿಯರು ಧಾರಾವಾಹಿಗಳಿಂದ ಸಿನಿಮಾ ರಂಗಕ್ಕೆ ಕೂಡ ಬಂದಿದ್ದಾರೆ. ಇನ್ನು ಹಲವಾರು ನಟ ನಟಿಯರು ಟಿವಿ ಹಾಗೂ ಥಿಯೇಟರ್ ಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದಿದ್ದಾರೆ. ಅಂತಹ ನಟ ನಟಿಯರಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ನಟಿ ಮಯೂರಿ ಅವರು ಕೂಡ ಒಬ್ಬರು.ನಟಿ ಮಯೂರಿಯವರು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಪಡೆದರು ನಂತರ ಅವರು ಕೃಷ್ಣ ಲೀಲಾ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

 

 

ಈ ಚಿತ್ರದ ನಂತರ ಮಯೂರಿಯವರು ಕರಿಯ 2 ಮುಂತಾದ ಚಿತ್ರಗಳಲ್ಲಿ ನಟಿಸಿದರು ಇಷ್ಟೇ ಅಲ್ಲದೆ ಧ್ರುವ ಸರ್ಜಾ ರವರು ನಟಿಸಿರುವ ಪೊಗರು ಚಿತ್ರದಲ್ಲಿ ಕೂಡ ತಂಗಿಯಾಗಿ ಪಾತ್ರ ನಿರ್ವಹಿಸಿದ ನಟಿ ಮಯೂರಿಯವರು ಜನರಿಂದ ಹೆಚ್ಚು ಮನ್ನಣೆಯನ್ನು ಗಳಿಸಿದ್ದಾರೆ.ಕಳೆದ ವರ್ಷ ಜೂನ್ ತಿಂಗಳಲ್ಲಿ ಮಯೂರಿಯವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ತಾಯ್ತನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದ ಮಯೂರಿಯವರು ಮಗುವಿನ ಜನನದ ನಂತರ ಮಗುವಿನ ಫೋಟೋ ಶೂಟ್ ಮಾಡಿಸಿ ಅದರ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.

 

 

ಮಗು ಹುಟ್ಟಿದ ನಂತರ ಬದುಕು ಬದಲಾಗಿದೆ ನನ್ನ ಮಗನೇ ನನಗೀಗ ಹೊಸ ಪ್ರಪಂಚ ಎಂದು ನಟಿ ಮಯೂರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.ಇದಾದ ನಂತರ ನಟಿ ಮಯೂರಿಯವರು ಬಿಗ್ ಬಾಸ್ ಮನೆಗೆ ಕೂಡ ಎಂಟ್ರಿ ಕೊಟ್ಟಿದ್ದರು ಮಯೂರಿ ಅವರ ಬಿಗ್ ಬಾಸ್ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಮಾಡಿತ್ತು.

 

 

“ನನಗೆ ನನ್ನ ಕುಟುಂಬವೇ ಪ್ರಪಂಚ ನನ್ನ ಮಗುವಿಗೆ ಈಗ ಕೇವಲ ಒಂದುವರೆ ವರ್ಷ ಅವನನ್ನು ಬಿಟ್ಟು ನಾನು ಹೇಗೆ ಇರುತ್ತೇನೆ ಗೊತ್ತಿಲ್ಲ ನಾನು ಹೊಸ ಚಾಲೆಂಜ್ ಅನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ಮಯೂರಿಯವರು ಬಿಗ್ ಬಾಸ್ ನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.

 

 

ಮಯೂರಿ ಅವರನ್ನು ಬಿಗ್ ಬಾಸ್ ಗೆ ಕಳಿಸಲು ಇಡೀ ಕುಟುಂಬವೇ ಬಂದಿತ್ತು. ಒಂದುವರೆ ವರ್ಷದ ಮಗು ಕೂಡ ವೇದಿಕೆ ಮೇಲಿತ್ತು.ಬಿಗ್ ಬಾಸ್ ಶೋನಲ್ಲಿ ಕೂಡ ನಟಿ ಮಯೂರಿಯವರು ಕೆಲವು ವಾರಗಳನ್ನು ಕಳೆದು ನಂತರ ಎಲಿಮಿನೇಟ್ ಆಗಿ ಹೊರಗಡೆ ಬಂದಿದ್ದಾರೆ. ನಟಿ ಮಯೂರಿಯವರು ತಮ್ಮ ಮಗನೊಂದಿಗೆ ಖುಷಿ ಖುಷಿಯಿಂದ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

Leave a Comment