ಗೋಲ್ಡನ್ ಕ್ವೀನ್ ನ ಗ್ಲಾಮರಸ್ ಲುಕ್ ಗೆ ಫ್ಯಾನ್ಸ್ ಫಿದಾ…!

ಸ್ಯಾಂಡಲ್ವುಡ್‌ ನ ಗೋಲ್ಡನ್ ಕ್ವೀನ್ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರುವ ಅಮೂಲ್ಯ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿ ಭಡ್ತಿ ಪಡೆದಿದ್ದಾರೆ‌.

 

 

ನಟನೆಯ ಹೊರತಾಗಿ ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ.

 

 

ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

 

 

ಇದೀಗ ನಟಿ ಅಮೂಲ್ಯ ತಮ್ಮ ಹೊಸ ಲುಕ್ ಜೊತೆಗೆ ಒಂದೆರಡು ಹೆಜ್ಜೆಯನ್ನೂ ಹಾಕಿದ್ದಾರೆ. ವಿಷಯ ಏನಪ್ಪಾ ಅಂದ್ರೆ ನಟಿ ಅಮೂಲ್ಯ ತಮ್ಮ ಮೊದಲ ರೀಲ್ಸ್ ನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.