ಡಾ.ರಾಜಕುಮಾರ್ ದಾಖಲೆ ಮುರಿದ ಕನಸಿನ ರಾಣಿ

ಕನ್ನಡದ ಕಣ್ಮಣಿ ವರನಟ ಡಾ.ರಾಜ್ ಕುಮಾರ್ ಅವರು ತಮ್ಮ ವಿಶೇಷ ಪ್ರತಿಭೆ ಮೂಲಕ ಚೆಂದನವನದಲ್ಲಿ ಮೆರು ವ್ಯಕ್ತಿತ್ವವನ್ನು ಗುರುತಿಸಿಕೊಂಡಿದ್ದಾರೆ. ಅವರ ಸ್ವಭಾವ, ವ್ಯಕ್ತಿತ್ವ, ಅಭಿಮಾನಿಗಳನ್ನು ದೇವರೆಂದು ಕಾಣುವ ಗುಣವನ್ನು ಮಾತುಮಾತಿಗೂ ನೆನಪಿಸಿಕೊಳ್ಳುವವರು ಹಲವರು ಇದ್ದಾರೆ. ಅದೇ ಕಾರಣಕ್ಕೆ ಡಾ. ರಾಜಕುಮಾರ್‌ ಅವರು ಅಗಲಿ 16 ವರ್ಷಗಳಾದರೂ, ಅವರು ಇನ್ನೂ ನಮ್ಮೊಡನೆಯೇ ಇದ್ದಾರೆ ಎಂಬ ಭಾವನೆ ಕನ್ನಡಿಗರದ್ದು.

 

 

ಇವರು ನಟನೆ ಮಾತ್ರವಲ್ಲದೆ ಗಾಯನದಲ್ಲಿ ಸುಶ್ರಾವ್ಯ ಕಂಠಕ್ಕೂ ಹೆಸರುವಾಸಿಯಾಗಿದ್ದಾರೆ. ನಾದಮಯ ಈ ಲೋಕವೆಲ್ಲ ಎನ್ನುತ್ತಲೇ ಕನ್ನಡಿಗರಿಗೆ ಕನ್ನಡದ ಸುಮಧುರ ಗೀತೆಗಳ ರಸದೌತಣ ತಿಳಿಸಿ ಪ್ರಖ್ಯಾತ ನಟ ಹಾಗೂ ಗಾಯಕರೆನಿಸಿದ್ದಾರೆ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ, ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.

 

 

ಬಾಲಿವುಡ್ ನಲ್ಲಿ ಅಮಿತಾ ಬಚ್ಚನ್, ತಮಿಳಿನಲ್ಲಿ ರಜನಿಕಾಂತ್, ಹಾಗೇ ಕನ್ನಡದಲ್ಲಿ ನಮ್ನ ಅಣ್ಣವ್ರು ವರನಟ ಡಾ.ರಾಜ್ ಹಿರಿಯ ನಟರಾಗಿ ಗುರುತಿಸಿಕೊಂಡಿದ್ದರು‌. ರಾಜಕುಮಾರ್‌ ಅವರ ನಿಧನದ ನಂತರ ಅವರ ಎರಡು ಸೂಪರ್‌ ಹಿಟ್‌ ಚಿತ್ರಗಳು ಕಲರ್‌ನಲ್ಲಿ ಮರುಬಿಡುಗಡೆಯಾಯಿತು. ಸತ್ಯ ಹರಿಶ್ಚಂದ್ರ ಮತ್ತು ಕಸ್ತೂರಿ ನಿವಾಸ ಎರಡೂ ಚಿತ್ರಗಳನ್ನು ಕೆ.ಸಿ.ಎನ್‌ ಎಂಟರ್‌ಪ್ರೈಸಸ್‌ ಸಂಸ್ಥೆಯು ಬ್ಲ್ಯಾಕ್ ಆ್ಯಂಡ್ ವೈಟ್ ಸಿನೆಮಾವನ್ನು ಕಲರ್ ನಲ್ಲಿ ಬಿಡುಗಡೆ ಮಾಡಿತು.

 

 

ಸಿನಿಮಾದ ಇತಿಹಾಸದಲ್ಲೇ ಡಾ ರಾಜಕುಮಾರ್‌ ಅವರಷ್ಟು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಯಾವೊಬ್ಬ ನಟರೂ ನಟಿಸಿಲ್ಲ. ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ ಕರುಣೆಯೇ ಕುಟುಂಬದ ಕಣ್ಣು ನಿಂದ ತಮ್ಮ ಕೊನೆಯ ಚಿತ್ರ ಶಬ್ಧವೇಧಿ ವರೆಗೂ ಡಾ. ರಾಜಕುಮಾರ್‌ ಅವರು 29 ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದಾರೆ.

 

 

ಇದು ಸಾರ್ವಕಾಲಿಕ ದಾಖಲೆ.ಮೊದಲ ದಾದಾ ಸಾಹೇಬ ಪ್ರಶಸ್ತಿ ಪಡೆದಂತಹ ಅತ್ಯದ್ಭುತ ನಾಯಕ ಕೂಡ ನಮ್ಮ ಅಣ್ಣಾವ್ರೇ. ಹೀಗೆ 1960 ರಿಂದ 70ರವರೆಗೂ ತಮ್ಮ ಶ್ರಮಕ್ಕೂ ಮೀರಿದಂತಹ ಸೇವೆಯನ್ನು ನಮ್ಮ ಕನ್ನಡ ಸಿನಿಮಾರಂಗಕ್ಕೆ ಕೊಡುಗೆಯಾಗಿ ನೀಡಿದವರು ಡಾಕ್ಟರ್ ರಾಜಕುಮಾರ್. ಅದ್ಭುತ ನಟ ಸಾಕಷ್ಟು ದಾಖಲೆಗಳನ್ನು ನಮ್ಮ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಇಡೀ ಸಿನಿ ಕ್ಷೇತ್ರದಲ್ಲಿ ಸೃಷ್ಟಿಸಿ ಹೋಗಿದ್ದಾರೆ.

 

 

ಅದರಂತೆ ಯಾವ ಸ್ಟಾರ್ ನಟರು ಕೂಡ ಡಾಕ್ಟರ್ ರಾಜಕುಮಾರ್ ಮಾಡಿರುವಂತಹ ದಾಖಲೆಯನ್ನು ಇಲ್ಲಿಯವರೆಗೂ ಮುರಿದೆ ಇಲ್ಲ. ಆದರೆ, ನಂಜುಂಡಿ ಕಲ್ಯಾಣಿ ಬೆಡಗಿ ಕನಸಿನ ರಾಣಿ ಮಾಲಾಶ್ರೀ ಅವರು ಡಾಕ್ಟರ್ ರಾಜಕುಮಾರ್ ಮಾಡಿರುವಂತಹ ಅದೊಂದು ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಷ್ಟಕ್ಕೂ ಅದು ದಾಖಲೆಯಾದರು ಯಾವುದು? ಎಂಬ ಮಾಹಿತಿಯನ್ನು ಇನ್ನೂ ಮುಂದೆ ಓದಿರಿ..

 

 

ರಾಜಕುಮಾರ್‌ ಅವರು ರೀಮೇಕ್‌ ಚಿತ್ರಗಳಲ್ಲಿ ಅಭಿನಯಿಸಿದ್ದು ಬಹಳ ಕಡಿಮೆ. ವಾತ್ಸಲ್ಯ, ಅಪೂರ್ವ ಸಂಗಮ ಮುಂತಾದ ಬೆರಳಣಿಕೆಯ ರೀಮೇಕ್‌ ಚಿತ್ರಗಳಲ್ಲಷ್ಟೇ ಅವರು ನಟಿಸಿದ್ದರು. ಆದರೆ, ಅವರ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರೀಮೇಕ್‌ ಆಗಿವೆ. ಪ್ರಮುಖವಾಗಿ ಕಸ್ತೂರಿ ನಿವಾಸ ಚಿತ್ರವು ಶಿವಾಜಿ ಗಣೇಶನ್‌ ಅಭಿನಯದಲ್ಲಿ ಅವನ್‌ದಾನ್‌ ಮನಿದನ್‌ ಹೆಸರಿನಲ್ಲಿ ರೀಮೇಕ್‌ ಆಗಿತ್ತು.

 

 

ಪ್ರೇಮದ ಕಾಣಿಕೆ, ಅನುರಾಗ ಅರಳಿತು ಇನ್ನು ಅನೇಕ ಡಾ.ರಾಜ್ ಅಭಿನಯದ ಸಿನೆಮಾ ಬೇರೆ ಭಾಷೆಯಲ್ಲಿ ರಿಮೇಕ್ ಆಗಿದೆ. ಆದರೆ ಇವೆಲ್ಲದರ ಹೊರತಾಗಿ ಕನ್ನಡದಲ್ಲಿ ಇದುವರೆಗೂ ರಾಜ್ ದಾಖಲೆಯೊಂದನ್ನು ನಾಯಕನಟರು ಮುರಿಯದೇ ಮಾಲಾಶ್ರೀ ಮುರಿದಿದ್ದಾರೆ ಎನ್ನಬಹುದು. ಡಾಕ್ಟರ್ ರಾಜಕುಮಾರ್ ಅವರು 1963ರ ಒಂದೇ ವರ್ಷದಲ್ಲಿ ಬರೋಬ್ಬರಿ 15 ಸಿನಿಮಾಗಳನ್ನು ಮಾಡಿ ಬಹುದೊಡ್ಡ ಸಾಧನೆಯನ್ನು ಮಾಡಿದ್ದರು.

 

 

ಆದರೆ, ಯಾವ ಸ್ಟಾರ್ ನಟರು ಕೂಡ ಈ ಒಂದು ಸಾಧನೆಯನ್ನು ಮುರಿದೇ ಇಲ್ಲ. ಕನ್ನಡ ಸಿನಿಮಾರಂಗದಲ್ಲಿ ಕನಸಿನ ರಾಣಿಯಾಗಿ ಮೆರೆದ ಮಾಲಾಶ್ರೀ ಅವರು ಒಂದೇ ಒಂದು ವರ್ಷದಲ್ಲಿ 19 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಡಾ.ರಾಜಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಸಿನೆಮಾ ರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಕೀರ್ತಿ ಮಾಲಾಶ್ರೀ ಅವರಿಗೆ ಸಲ್ಲುತ್ತದೆ.