ಲಕ್ಷ-ಲಕ್ಷ ಕೊಡುವ ಸಂಬಳ ಬಿಟ್ಟು ಈ ಶಿವಮೊಗ್ಗ ಹುಡುಗಿಯರು ಹೇಗೆ ಕೃಷಿ ಮಾಡ್ತಿದ್ದಾರೆ ಗೊತ್ತಾ..?

ಬೆಳಗ್ಗೆ ಎದ್ದು ಬಿದ್ದು ಕೆಲಸಕ್ಕೆ ಹೋಗಬೇಕು, ಬೆಟ್ಟದಷ್ಟು ಟಾರ್ಗೆಟ್, ಸಂಜೆ ಮನೆಗೆ ಬಂದು ತಲುಪುವುದೇ ದೊಡ್ಡ ಸಾಧನೆ. ಅವನ ಬಗ್ಗೆ ಅವನಿಗೆ ಆಲೋಚನೆ ಮಾಡಲು ಟೈಮ್ ಇಲ್ಲ. ಹೀಗಿರುವಾಗ ನೆಮ್ಮದಿ ಎಲ್ಲಿಂದ ಬರುತ್ತೆ ಹೇಳಿ.

 

 

ಆದರೆ ಈ ಹುಡುಗಿಯರು ಮಾತ್ರ ಲಕ್ಷ-ಲಕ್ಷ ಕೊಟ್ಟರು ಇಂತಹ ಜೀವನ ಬೇಡ ಎಂದು ಬಸ್ ಹತ್ತಿ ಸುಂದರವಾದ ಆಕಾಶದಷ್ಟು ನೆಮ್ಮದಿ ಕೊಡುವ ಊರಿಗೆ ಹೊರಟರು. ಇವರ ಹೆಸರು ಗಗನ ಮತ್ತು ಮೇಘ. ಇಬ್ಬರು ಅವಳಿ ಮಕ್ಕಳು. ಒಟ್ಟಿಗೆ ಇಂಜಿನಿಯರಿಂಗ್ ಮಾಡಿದ ಇವರು ರಾಂಕ್ ಗಳನ್ನು ಸಹ ಪಡೆದರು. ಇವರ ಪ್ರಯತ್ನಿಸಿದರೆ ಲಕ್ಷ-ಲಕ್ಷಗಟ್ಟಲೆ ಸಂಬಳ ಕೊಡುವ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿತ್ತು. ಆದರ ಜೊತೆಗೆ ಫಾರಿನ್ ಹೋಗಬಹುದಾಗಿತ್ತು. ಆದರೆ ಇವರು ಆಯ್ಕೆ ಮಾಡಿಕೊಂಡಿರುವುದು ಏನು ಗೊತ್ತಾ..?ವ್ಯವಸಾಯ.

 

 

ಹೌದು, ಲ್ಯಾಪ್ ಟಾಪ್ ಜೊತೆ ಜೀವನ ಕಳೆಯುವ ಯಾಂತ್ರಿಕ ಜೀವನ ಇವರಿಗೆ ಹಿಡಿಸಲಿಲ್ಲ. ಹಾಗಾಗಿ ಆರೋಗ್ಯ ಮತ್ತು ನೆಮ್ಮದಿ ಕೊಡುವ ವ್ಯವಸಾಯ ಮಾಡಲು ಹೊರಟರು ಗಗನ ಮತ್ತು ಮೇಘ. ಇವರದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಳ್ಳಿ ಗ್ರಾಮ. ತಂದೆ ರಾಜೇಂದ್ರ ಅವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಔಷಧಿ ಗಿಡಗಳನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದಾರೆ. ತಂದೆಯ ಕೆಲಸವನ್ನೇ ಆದರ್ಶವಾಗಿ ತೆಗೆದುಕೊಂಡ ಗಗನ ಮತ್ತು ಮೇಘ ತಮ್ಮ ಜ್ಞಾನವನ್ನು ಕೃಷಿಯಲ್ಲಿ ತೊಡಗಿಸಿ ಇಸ್ರೇಲ್ ಮಾದರಿಯ ಕೃಷಿಯನ್ನು ಮಾಡಿ ಔಷಧಿ ಗಿಡಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಅದರಲ್ಲಿ ಯಶಸ್ಸು ಸಹ ಕಂಡಿದ್ದಾರೆ.

 

 

ಔಷಧಿ ಗಿಡಗಳನ್ನು ಬೆಳೆಯುವ ವಿಧಾನವನ್ನು ಚೆನ್ನಾಗಿ ಅರಿತಿರುವ ಗಗನ ಮತ್ತು ಮೇಘ ವ್ಯವಸಾಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ. ಅದರ ಜೊತೆಗೆ ತಂದೆ-ತಾಯಿಯ ಜೊತೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಆಫೀಸಿನಲ್ಲಿ ನಾವು ಬಳಸುವ ಅರ್ಧ ಬುದ್ಧಿಯನ್ನು ಕೃಷಿಯಲ್ಲಿ ಬಳಸಿದರೆ ಸಾಕು ಹತ್ತು ಜನಕ್ಕೆ ಕೆಲಸ ಕೊಡಬಹುದು. ಅದು ಯಾಕೋ ಕೃಷಿ ಅಂದರೆ ತುಂಬಾ ಜನಕ್ಕೆ ಅಸಡ್ಡೆ ಮನೋಭಾವ. ಆದರೆ ತುಂಬಾ ಬೇಗ ಕೃಷಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡು ಅದರಲ್ಲಿ ಸಾಧನೆ ಮಾಡಲು ಹೊರಟಿರುವ ಗಗನ ಮತ್ತು ಮೇಘ ಅವರ ದೃಢ ನಿರ್ಧಾರ ಮೆಚ್ಚುವಂತಹದ್ದು.