ಈ ನಟಿಯ ಮಗ ಇಂದಿಗೂ ತನ್ನ ತಾಯಿ ನಟಿಸಿರುವ ಸಿನಿಮಾವನ್ನು ನೋಡುವುದಿಲ್ಲವಂತೆ. ಯಾಕೆ ಗೊತ್ತಾ..?

ತೆರೆಯ ಮೇಲೆ ಸಿನಿ ಪ್ರಿಯರನ್ನು ರಂಜಿಸುವ ನಟಿಯರು ಅವರ ಜೀವನದಲ್ಲಿ ನಾವು ಅಂದು ಕೊಂಡಷ್ಟು ಸಂತೋಷವಾಗಿ ಇರುತ್ತಾರೆ ಅನ್ನುವುದು ಮಾತ್ರ ಕಹಿ ಸತ್ಯ. ಅದರಲ್ಲೂ ಕ್ಯಾ’ಬರೆ, ಐಟಂ ಸಾಂಗ್ ಮಾಡುವ ನಟಿಯರ ಜೀವನದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಆ ನಟಿಯರ ರಿಯಲ್ ಲೈಫ್ ನ ಜೀವನ ತುಂಬಾ ಕಷ್ಟದಿಂದ ಕೂಡಿರುತ್ತದೆ. ಅವರು ಆಚೆಗೆ ಬಂದರೆ ಸಾಕು ಅವರನ್ನು ಜನ ನೋಡುವ ದೃಷ್ಟಿಯೇ ಬೇರೆ ಆಗಿರುತ್ತದೆ. ನಟಿಯರಲ್ಲಿ 80 ರ ದಶಕದ ಅದ್ಭುತ ಡ್ಯಾನ್ಸರ್ ಆಗಿದ್ದ ನಟಿ ಜಯಮಾಲಿನಿ ಕೂಡ ಒಬ್ಬರು.

 

 

ನಟಿ ಜಯಮಾಲಿನಿ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ ಕೇಳಿದರೆ ನಿಜಕ್ಕೂ ಮನಸ್ಸಿಗೆ ತುಂಬಾ ನೋವಾಗುತ್ತದೆ. ನಟಿ ಜಯಮಾಲಿನಿ ಅವರ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿದೆ..! ನಟಿ ಜಯಮಾಲಿನಿ 80 ರ ದಶಕದ ಸೂಪರ್ ಡ್ಯಾನ್ಸರ್. ಜೀವನದ ನಿರ್ವಹಣೆಗಾಗಿ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ. ಇವರು ಎಲ್ಲಾ ಭಾಷೆಗಳಲ್ಲೂ ದೊಡ್ಡ ಸೆನ್ಸೇಷನ್ ಕ್ರಿಯೆಟ್ ಮಾಡಿದರು. ಜಯಮಾಲಿನಿ ಅವರು ಅನೇಕ ಭಾಷೆಗಳಲ್ಲಿ ನಟಿಸಿದರೂ ಕೂಡ ತುಂಬಾ ಹೆಸರು ಗಳಿಸಿದ್ದು ಮಾತ್ರ ಕನ್ನಡದಲ್ಲಿ. ಕನ್ನಡದ ಸುಮಾರು ಮೂವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ನಟಿ ಜಯಮಾಲಿನಿ ಅವರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಧುಮುಕಿದರು.

 

 

ಆ ಸಮಯದಲ್ಲಿ ನಟಿ ಜಯಮಾಲಿನಿ ಅವರಿಗೆ ಏನು ಗೊತ್ತಿರಲಿಲ್ಲ. ಹಣಕ್ಕಾಗಿ ಜಯಮಾಲಿನಿಯವರು ತನ್ನ ತಾಯಿ ಹೇಳಿದಂತೆ ಚಿಕ್ಕ-ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು ಈಗಿನ ನಟಿಯರು ಮಾಡದಂತಹ ಎ’ಕ್ಸ್ಪೋಸಿಂಗ್ ಮಾಡುತ್ತಿದ್ದರು. ಆದರೆ ಆಚೆ ಅವರು ಯಾವಾಗಲೂ ತುಂಬು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗ ಮಾಡಿದ ತಪ್ಪುಗಳು ಮತ್ತು ಮಾದಕ ಡ್ಯಾನ್ಸ್ ಈಗ ನಟಿ ಜಯಮಾಲಿನಿ ಅವರಿಗೆ ಈಗ ತುಂಬಾ ನೋವನ್ನು ತರಿಸುತ್ತಿದೆಯಂತೆ. ಮಕ್ಕಳು ಬೆಳೆದ ಮೇಲೆ ತಮ್ಮ ಪೋಷಕರ ಸಾಧನೆಯನ್ನು ಅವರು ಇತರರಿಗೆ ಹೇಳುತ್ತಾರೆ. ಆದರೆ ನಟಿ ಜಯಮಾಲಿನಿ ತಮ್ಮ ಮಕ್ಕಳಿಗೆ ತಾನು ಮಾಡಿದ ಸಾಧನೆ ಇದೆ ನೋಡಿ ಅಂತ ತೋರಿಸಲು ಮುಜುಗರ ಪಡುತ್ತಾರಂತೆ.

 

 

ಅವರ ಮಕ್ಕಳು ಕೂಡ ತನ್ನ ತಾಯಿ ಈ ರೀತಿಯಲ್ಲಾ ಮಾಡಿದ್ದಾರೆ ಅಂತ ಅವರ ಬಗ್ಗೆ ಬೇರೆ ರೀತಿಯ ಭಾವನೆ ಮೂಡುವ ಜೊತೆಗೆ ಮಕ್ಕಳ ಭವಿಷ್ಯದ ಬಗ್ಗೆ ಇದು ತುಂಬಾ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಆಕೆ ಮಾಡಿರುವ ಒಂದು ಹಾಡನ್ನು ಕೂಡ ನಟಿ ಜಯಮಾಲಿನಿ ಅವರ ಮಗ ಇಂದಿಗೂ ನೋಡುವುದಿಲ್ಲವಂತೆ. ಈಗ ನಟಿ ಜಯಮಾಲಿನಿ ಅವರ ಬಳಿ ಹಣ, ಆಸ್ತಿ ಎಲ್ಲವೂ ಇದೆ. ಆದರೆ ತಮ್ಮ ಮಗನೇ ಹೀಗೆ ಅಂದಾಗ ಯಾವ ತಾಯಿಗಾದರೂ ನೋವಾಗುತ್ತದೆ ತಾನೇ. ತನ್ನ ಸಿನಿಮಾಗಳನ್ನು ನೋಡಿದಾಗ ನನಗೆ ಅಸಹ್ಯ ಅನಿಸುತ್ತದೆ. ನಾನು ಹೇಗೆ ಮಾಡಿದೆ ಅನಿಸುತ್ತದೆ ಎಂದು ಹೇಳುತ್ತಾರೆ ನಟಿ ಜಯಮಾಲಿನಿ. ಹೊರಗಿನ ಜಗತ್ತಿನಲ್ಲಿ ಟಾಪ್ ನಟಿಯರಾಗಿರುತ್ತಾರೆ. ಆದರೆ ಅವರ ಜೀವನ ಮಾತ್ರ ನೋ’ವು, ದುಃ’ಖದಿಂದ ತುಂಬಿರುತ್ತದೆ ಎನ್ನುವುದಕ್ಕೆ ನಟಿ ಜಯಮಾಲಿನಿ ಅವರೆ ಜೀವಂತ ಸಾಕ್ಷಿ.