ಹೊಸ ಉದ್ಯಮಕ್ಕೆ ಕೈ ಹಾಕಿದ ರಾಗಿಣಿ ಪ್ರಜ್ವಲ್, ಆ ಉದ್ಯಮ ಯಾವುದು ಗೊತ್ತಾ?

ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಕೇವಲ ನಟನೆಯಷ್ಟೇ ಅಲ್ಲದೇ ಅತ್ಯದ್ಭುತ ಡ್ಯಾನ್ಸರ್ ಕೂಡ. ಅಷ್ಟೇ ಅಲ್ಲದೆ ಫಿಟ್ನೆಸ್ ಕುರಿತು ಸಾಕಷ್ಟು ತಿಳಿದು ಕೊಂಡಿರುವ ರಾಗಿಣಿ ರವರು ತಮ್ಮದೇ ಆದ ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುತ್ತಾ ಜನರನ್ನು ಫಿಟ್ ಮಾಡುವ ಉದ್ಯಮವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ.

 

 

ಈ ವಿಷಯ ಎಲ್ಲರಿಗೂ ಗೊತ್ತೆ ಇದೆ. ಇನ್ನು ನಟನೆ, ಜಾಹೀರಾತು ಸೇರಿದಂತೆ ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ರಾಗಿಣಿ ಪ್ರಜ್ವಲ್ ರವರು ಇದೀಗ ಮತ್ತೊಂದು ಉದ್ಯಮಕ್ಕೆ ಕೈಹಾಕಿದ್ದಾರೆ.ರಾಗಿಣಿ ಪ್ರಜ್ವಲ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ತಂದೆ ಚಂದ್ರನ್ ಬಾಲು, ತಾಯಿ ರಮಾ. ರಾಗಿಣಿ ಚಂದ್ರನ್ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ನೃತ್ಯ ಅಂದ್ರೆ ರಾಗಿಣಿ ಚಂದ್ರನ್ ಗೆ ಅಚ್ಚುಮೆಚ್ಚು. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಚಂದ್ರನ್ ಆರಂಭಿಸಿದರು.

 

 

ಖ್ಯಾತ ನೃತ್ಯಗಾರ್ತಿ ಶ್ರೀಮತಿ.ನಿರುಪಮ ರಾಜೇಂದ್ರ ಮತ್ತು ಶ್ರೀ.ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಹಾಗೂ ವಿಶ್ವಾದ್ಯಂತ ಕಥಕ್ ನೃತ್ಯ ಪ್ರದರ್ಶನ ನೀಡಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರನ್ನು ವಿವಾಹವಾಗಿದ್ದು ಎಲ್ಲರಿಗೂ ತಿಳಿದೇ ಇದೆ.ರಚಿತಾ ರಾಮ್ ನಿರ್ಮಾಣದ `ರಿ‍ಷಭಪ್ರಿಯ’ ಚಿತ್ರದಲ್ಲಿ ನಟಿಸಿದ್ದರು. ಪುನೀತ್ ರಾಜಕುಮಾರ್ ನಿರ್ಮಾಣದ `ಲಾ’ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. ಇನ್ನು ರಾಗಿಣಿ ಪ್ರಜ್ವಲ್ ನಟನೆ, ಜಾಹೀರಾತು ಸೇರಿದಂತೆ ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಇದೀಗ ರಾಗಿಣಿ ಪ್ರಜ್ವಲ್ ರವರು ಮತ್ತೊಂದು ಉದ್ಯಮಕ್ಕೆ ಕೈಹಾಕಿದ್ದಾರೆ.

 

 

ಸ್ಯಾಂಡಲ್ ವುಡ್ ನ ಬಹುತೇಕ ಸಿನಿಮಾದ ನಿರ್ಮಾಣದತ್ತ ಮುಖ ಮಾಡುತ್ತಿದ್ದಾರೆ.ರಾಗಿಣಿ ಪ್ರಜ್ವಲ್ ಕೂಡ ಸಿನಿಮಾದ ನಿರ್ಮಾಣದತ್ತ ಮುಖ ಮಾಡಿದ್ದಾರಾ? ಅವರು ಕೈ ಹಾಕಿರುವ ಆ ಉದ್ಯಮ ಯಾವುದು ಗೊತ್ತಾ? ಹೌದು ಇದೀಗ ಬೆಂಗಳೂರಿನ ಪ್ರತಿಷ್ಠಿತ ನಗರವಾದ ಜೆಪಿ ನಗರದಲ್ಲಿ ಆಹಾರ ವಿಭಾಗಕ್ಕೆ ಕೈ ಹಾಕಿರುವ ರಾಗಿಣಿ ಪ್ರಜ್ವಲ್ ರವರು ಬಿಸಿ ಬೆಲ್ಲಿ ಕಿಚನ್ ಎಂಬ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ, ಇಲ್ಲಿ ರಾಗಿ ಮುಂದೆ ಇಂದ ಹಿಡಿದು ಎಳನೀರು ಮನೆ ಊಟ ಸೇರಿದಂತೆ ಐಷಾರಾಮಿ ಪದಾರ್ಥಗಳು ಕೂಡ ಸಿಗಲಿದ್ದು ಹೋಟೆಲ್ ಉದ್ಯಮಕ್ಕೆ ಕೂಡ ಈ ಮೂಲಕ ರಾಗಿಣಿ ರವರು ಎಂಟ್ರಿ ಕೊಟ್ಟಿದ್ದಾರೆ. ಇವರು ಆರಂಭಿಸಿ ಈ ಉದ್ಯಮ ಕಂಡ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.ನಾವು ಕೂಡ ಬಂದು ಟ್ರೈ ಮಾಡುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸಿನಿಮಾ, ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಅಪ್ಲಿಕೇಶನ್ ಮೂಲಕ ಸಲಹೆ ನೀಡುವ ರಾಗಿಣಿ ಇದೀಗ ಆಹಾರ ಉದ್ಯಮ ಪ್ರಾರಂಭಿಸಿದ್ದು, ಈ ಉದ್ಯಮ ಇವರ ಕೈ ಹಿಡಿಯುತ್ತಾ ಕಾದು ನೋಡಬೇಕು. ಇನ್ನು ಇವರ ಈ ಉದ್ಯಮಕ್ಕೆ ಯಶಸ್ಸು ಲಭಿಸಲಿ ಎಂದು ಆಶೀಸೋಣ.