ಹಿರಿಯ ನಟಿ ಲಕ್ಷ್ಮೀದೇವಿಯವರ ಮೊಮ್ಮಗಳು ಯಾರು ಗೊತ್ತಾ?

ಯಾರು ಕೂಡ ಈ ನಟನಾ ಕ್ಷೇತ್ರಕ್ಕೆ ಬರಬಹುದು. ಕೆಲವರೂ ಹಿರಿಯ ತಲೆಮಾರಿನವರನ್ನು ಅನುಸರಿಸುತ್ತಾ ನಟನೆಗೆ ಬಂದರೆ, ಇನ್ನು ಕೆಲವರಿಗೆ ನಟನೆಯ ಗಂಧ ಗಾಳಿ ಗೊತ್ತಿರದೇ ಅದೃಷ್ಟದಿಂದ ನಟನೆಗೆ ಎಂಟ್ರಿ ಕೊಟ್ಟಿರಬಹುದು. ಅಂದಹಾಗೆ, ಕನ್ನಡ ಚಿತ್ರರಂಗದಲ್ಲಿ ಹಲವಾರು ಕಲಾವಿದರನ್ನು ಮರೆಯಲು ಸಾಧ್ಯವಿಲ್ಲ, ಹೆಚ್ಚಿನ ಸಿನಿಮಾಗಳಲ್ಲಿ ಹೆಚ್ಚಿನ ಸದ್ದು ಮಾಡದೇ, ನಾಯಕ ನಟಿಯಾಗಿ ಹೆಚ್ಚಿನ ಚಿತ್ರಗಳಲ್ಲಿ ನಟನೆ ಮಾಡದೇ ಇದ್ದರೂ ಕೂಡ ಚಿಕ್ಕ ಪಾತ್ರಗಳಾದರೂ ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿರುವ ಕಲಾವಿದರು ಇದ್ದಾರೆ.ಇಂತಹವರ ಪಟ್ಟಿಗೆ ಸೇರುವವರೇ ಕನ್ನಡದ ಹಿರಿಯ ನಟಿ ಎಂಎನ್ ಲಕ್ಷ್ಮೀ ದೇವಿ. ಹೀಗೆ ಸರಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಪ್ರತ್ಯೇಕ ಕೊಡುಗೆ ನೀಡುವ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

 

 

ಇನ್ನು ಮಂಡ್ಯ ಮೂಲದವರಾದ ಲಕ್ಷ್ಮೀದೇವಿ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ನೃತ್ಯ ಕಲಿತು ಹಲವು ಸಿನಿಮಾಗಳಲ್ಲಿ ರಾಧೆಯಾಗಿ ಗಮನಸೆಳೆದಿದ್ದಾರೆ. ಗುಬ್ಬಿ ಕಂಪನಿ ಸೇರಿ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. 1962 ರಲ್ಲಿ ತೆರೆಕಂಡ `ರತ್ನಮಂಜರಿ’ ಚಿತ್ರದ `ಯಾರು ಯಾರು ನೀ ಯಾರು’ ಗೀತೆ, ಹುಣಸೂರು ಕೃಷ್ಣಮುರ್ತಿಯವರ ಎಲ್ಲಾ ಚಿತ್ರಗಳಲ್ಲಿಯೂ ಇವರಿಗೆ ಒಂದು ಪಾತ್ರ ಇರುತ್ತಿತ್ತು. ನಂತರ ಮದ್ರಾಸಿನ `ಮಾಡರ್ನ್ ಥಿಯೇಟರ್ಸ್’ನ ಚಿತ್ರಗಳಲ್ಲಿ ನಟಿಸತೊಡಗಿದರು. ಬಾಲಕೃಷ್ಣ, ನರಸಿಂಹರಾಜು, ಡಾ.ರಾಜಕುಮಾರ್, ಪಂಡರಿ ಬಾಯಿ ಮುಂತಾದ ಕಲಾವಿದರ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

 

 

ಇದೀಗ ನಟಿ ಲಕ್ಷ್ಮೀದೇವಿ ರವರ ಮೊಮ್ಮಗಳು ಕೂಡ ಇದೀಗ ಕನ್ನಡ ಕಿರುತೆರೆಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ವಿವಿಧ ಧಾರವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಟನೆ ಮಾಡುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅವರು ಬೇರೆ ಯಾರು ಅಲ್ಲ ದೀಪಿಕಾ ಶರಣ್. ಇವರು ಲಕ್ಷ್ಮೀದೇವಿ ರವರ ಮೊಮ್ಮಗಳು. ದೀಪಿಕಾ ಶರಣ್ ರವರು ಇತ್ತೀಚೆಗೆ ಯಾರೇ ನೀ ಮೋಹಿನಿ ಧಾರವಾಹಿ ಯಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ, ಇನ್ನು ಪದ್ಮಾವತಿ ಧಾರವಾಹಿಯಲ್ಲಿ ಕೂಡ ನಟನೆ ಮಾಡಿದ್ದರು, ಮೇರಿ ಎಂಬ ಸಿನಿಮಾದಲ್ಲಿ ಕೂಡ ಇವರು ನಟನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಜ್ಜಿಯಂತೆ ಮೊಮ್ಮಗಳು ನಟನೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸೈ ಎನಿಸಿಕೊಂಡಿದ್ದಾರೆ.

 

 

ಈ ಹಿಂದೆ ಅಂದರೆ ಕಳೆದ ವರ್ಷ ಹಿರಿಯ ಕನ್ನಡ ನಟಿ ಎಂ.ಎನ್.‌ಲಕ್ಷ್ಮೀದೇವಿ ಮೊಮ್ಮಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಕಿರುತೆರೆ ನಟಿ ದೀಪಿಕಾ‌ ಶರಣ್ ತಮ್ಮ ‌ಅಜ್ಜಿಯ ಹುಟ್ಟುಹಬ್ಬ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಡೀ ಕುಟುಂಬ ಸದಸ್ಯರು ಹಾಗೂ ಕಿರುತೆರೆಯ ಹಲವು ನಟಿಯರು ಒಟ್ಟಿಗೆ ಸೇರಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು. ಇದೀಗ ಅಜ್ಜಿಯಂತೆ ಮೊಮ್ಮಗಳು ಕೂಡ ನಟನೆ ಮಿಂಚುತ್ತಿದ್ದೂ, ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.