ವೈಷ್ಣವಿ ಗೌಡ ಯಾರ ಜೊತೆ ರಿಲೇಷನ್ಶಿಪ್ ನಲ್ಲಿ ಇದ್ದಾರೆ. ಅವರು ಯಾರು? ಎಲ್ಲಿದ್ದಾರೆ?

ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ನಟಿಸಿದ್ದ ಈ ಧಾರಾವಾಹಿ ಪ್ರಾರಂಭವಾದಾಗ ಜನರ ಮನಸ್ಸಿಗೆ ಹತ್ತಿರವಾಗಿ ಅದು ಮುಕ್ತಾಯಗೊಂಡಿದ್ದರೂ ಕೂಡ ಜನರಿಗೆ ಇಂದಿಗೂ ಧಾರಾವಾಹಿ ಹೆಸರು ಹೇಳಿದರೆ ಅದರ ನಟ-ನಟಿಯರ ಮುಖ ನೆನಪಿಗೆ ಬರುತ್ತದೆ. ಇನ್ನೂ ಧಾರವಾಹಿಯ ಮೂಲಕ ಜನರ ಮನಸ್ಸನ್ನು ಗೆದ್ದ ನಟಿ ವೈಷ್ಣವಿ ಅವರ ನಿಜ ಜೀವನದಲ್ಲಿ ರಿಲೇಶನ್ ಬಗ್ಗೆ ಮಾತನಾಡಿದಾಗ ಅವರು ಸರಿಯಾಗಿ ಉತ್ತರ ನೀಡಿಲ್ಲ. ಇನ್ನು ಅವರ ಅಭಿಮಾನಿಗಳು ಅವರು ಯಾರೊಂದಿಗೆ ಪ್ರೀತಿಯಲ್ಲಿ ಇದ್ದಾರೆ? ಯಾರೊಂದಿಗೆ ರಿಲೇಷನ್ಶಿಪ್ ನಲ್ಲಿದ್ದಾರೆ? ಎಂಬ ಕುತೂಹಲ ಭರಿತವಾದ ಪ್ರಶ್ನೆಗಳು ಕೇಳುತ್ತಿದ್ದಾರೆ. ಆದರೆ ಇದುವರೆಗೂ ಕೂಡ ವೈಷ್ಣವಿ ಪ್ರಶ್ನೆಗಳಿಗೆ ಯಾವುದೇ ರೀತಿಯ ಸರಿಯಾದ ಉತ್ತರವನ್ನು ನೀಡಿಲ್ಲ.

 

 

 

ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. `ಅಗ್ನಿ ಸಾಕ್ಷಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಜೀ ಕನ್ನಡದ `ದೇವಿ’ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ’ದಲ್ಲಿ ನಟಿಸಿ `ಅಗ್ನಸಾಕ್ಷಿ’ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದರು.

 

 

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಿರತ ನಟನೆಯಿಂದ ಪದವಿ ಅರ್ಧಕ್ಕೆ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು.ಭರತನಾಟ್ಯಂ,ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಇವರು `ಗಿರಿಗಿಟ್ಲೆ’ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. `ಭರ್ಜರಿ ಕಾಮಿಡಿ’ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಇದೀಗ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

 

 

ಅದು ಅಲ್ಲದೇ ಇದುವರೆಗೂ ತಮ್ಮ ರಿಲೇಶನ್ಶಿಪ್ ಬಗ್ಗೆ ಉತ್ತರ ನೀಡದ ವೈಷ್ಣವಿ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಚಾಟ್ ಕಾರ್ನರ್ ನಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈಷ್ಣವಿ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವೈಷ್ಣವಿ ಅವರು ಈ ಕಾರ್ಯಕ್ರಮದಲ್ಲಿ ‘ಹೌದು ನಾನು ರಿಲೇಶನ್ ಶಿಪ್ ನಲ್ಲಿ ಇದ್ದೇನೆ. ನಮ್ಮಿಬ್ಬರ ರಿಲೇಷನ್ಶಿಪ್ ಸ್ಟ್ರಾಂಗ್ ಆಗಿದೆ. ಹಾಗೆಯೇ ಮುಂದುವರೆಯುತ್ತಿದೆ’ ಎಂದು ಉತ್ತರಿಸಿದ್ದಾರೆ.ಆದರೆ ತದನಂತರದಲ್ಲಿ ಅವರು ಯಾರು? ಎಲ್ಲಿದ್ದಾರೆ? ಎಂದು ಕೇಳಿದಾಗ ವೈಷ್ಣವಿ ಅವರು ಅವರು ಬೇರೆ ಯಾರು ಅಲ್ಲ ಅದು ನನ್ನ ಕೆಲಸ ಎಂದು ಹೇಳಿದ್ದಾರೆ. ಇದು ಹಳೇ ಟೆಕ್ನಿಕ್ ಆದರೂ ಕೂಡ ಇಂದು ಇದು ಹೊಸತನವನ್ನು ಉಂಟುಮಾಡಿತ್ತು. ಅಷ್ಟರಮಟ್ಟಿಗೆ ಅಗ್ನಿಸಾಕ್ಷಿ ನಟಿ ವೈಷ್ಣವಿ ಅವರು ಉತ್ತರಿಸಿದ್ದಾರೆ.ಇದೀಗ ಪ್ರೇಕ್ಷಕರಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಉತ್ತರಿಸಿದ್ದಾರೆ.