ಹೀರೋಗಳೇ ಕಂಗಾಲು ಹಾಸ್ಯ ನಟ ಬ್ರಹ್ಮಾನಂದಂ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

 

ತೆಲುಗು ಚಿತ್ರರಂಗದಲ್ಲಿ ಹಾಸ್ಯ ಬ್ರಹ್ಮ ಎಂದೇ ಖ್ಯಾತಿ ಪಡಿದಿರುವ ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರು ಭಾರತ ಚಿತ್ರರಂಗದಲ್ಲಿ ಯಾವ ಹಾಸ್ಯ ನಟ ಕೂಡ ನಟಿಸಿಲ್ಲದ್ದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ರಹ್ಮಾನಂದಂ ಅವರು ಗಿನ್ನಿಸ್ ದಾಖಲೆ ಕೂಡ ಬರೆದಿದ್ದು, ದಕ್ಷಿಣ ಭಾರತ ಚಿತ್ರಕ್ಕೆ ಹೆಮ್ಮೆ ತಂದಿದ್ದಾರೆ. ಟಾಲಿವುಡ್ ಚಿತ್ರರಂಗದ ದಿಗ್ಗಜ ನಟರಾಗಿರುವ ಇವರು ಕೆಲವೊಂದು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕನ್ನಡದಲ್ಲಿ ಒಂದೆರೆಡು ಸಿನಿಮಾಗಳಲ್ಲೂ ಕೂಡ ಬಣ್ಣ ಹಚ್ಚಿದ್ದಾರೆ.

 

 

ಸಿನಿಮಾರಂದಗದಲ್ಲಿ ತನ್ನದೇಯಾದ ಛಾಪು ಮೂಡಿಸಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಬ್ರಹ್ಮಾನಂದಂ ಅವರು ಇಡೀ ದೇಶದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರಾಗಿದ್ದಾರೆ. ಇದರ ಜೊತೆಗೆ ಕೆಲವು ನಾಯಕ ನಾಯಕಿಯರು ತೆಗೆದುಕೊಳ್ಳುವ ಸಂಭಾವನೆಗಿಂತ ಬ್ರಹ್ಮಾನಂದಂ ಅವರ ಸಂಭಾವನೆಯೇ ಅಧಿಕವಾಗಿರುವುದು ವಿಶೇಷ. ಹೀಗೆ ದೊಡ್ಡ ಸಂಭಾವನೆಯನ್ನು ಪಡೆದುಕೊಳ್ಳುವ ಈ ಹಾಸ್ಯಬ್ರಹ್ಮನದಂ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟಿದೆ ಎಂದು ತಿಳಿದರೆ ಆಶ್ಚರ್ಯ ಪಡುವುದಂತು ನಿಶ್ಚಿತವಾಗಿದೆ.

 

 

ಬ್ರಹ್ಮಾನಂದಂ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ತಮ್ಮ ಪಾತ್ರ ಏನೂ? ಹಾಗೂ ಎಷ್ಟು ದಿನಗಳ ಕಾಲ ಚಿತ್ರೀಕರಣ ನಡೆಯುತ್ತದೆ ಎಂಬುದನ್ನು ಪರಿಗಣಿಸಿ ಸಂಭಾವನೆ ಪಡೆಯುತ್ತಿದ್ದು, ಧೀರ್ಘ ಕಾಲದ ಸಿನಿಮಾಗೆ ಸುಮಾರು 1 ರಿಂದ 2 ಕೋಟಿ ಸಂಭಾವನೆ ಪಡೆಯುತ್ತಾರೆ. ಕಳೆದ ಹತ್ತು ವರುಷದಿಂದ ಸಿನಿಮಾದಲ್ಲಿ ನಟಿಸುವುದನ್ನು ಕಡಿಮೆ ಮಾಡಿರುವ ಬ್ರಹ್ಮಾನಂದಂ ಮಾಡಿದ್ದಾರೆ. ಆದರೆ ಇದಕ್ಕೂ ಮೊದಲು ನಾಯಕ ಹಾಗೂ ನಾಯಕಿಯ ಕಾಲ್ಶೀಟ್ ಪಡೆಯುವ ಮೊದಲು ಬ್ರಹ್ಮಾನಂದಂ ಅವರ ಕಾಲ್ಶೀಟ್ ಪಡೆಸುಕೊಳ್ಳುವ ಸಂಪ್ರುದಾಯವಿತ್ತು.

 

 

ಹೀಗೆ ಸಿನಿಮಾದಲ್ಲಿ ನಟಿಸುತ್ತಾ ಈ ಹಾಸ್ಯ ಬ್ರಹ್ಮ ಗಳಿಸುರುವ ಆಸ್ತಿಯ ಮೌಲ್ಯ 2017 ರಲ್ಲಿ 320 ಕೋಟಿಯಾಗಿದ್ದು, ಇದೀಗ ಇವರ ಆಸ್ತಿಯ ಮೊತ್ತ ಬರೋಬ್ಬರಿ 500 ಕೋಟೊ ದಾಟಿ ಬಿಟ್ಟಿದೆ. ಸಿನಿಮಾ ಜೊತೆ ರಿಯಲ್ ಎಸ್ಟೇಟ್, ಕ್ರುಶಿ ಭೂಮಿಯನ್ನು ಹೊಂದಿರುವ ಇವರು ಐಶಾರಾಮಿ ಬಂಗಲೆಗಳು ಹಾಗೂ ಮೂರ್ನಾಲ್ಕು ದುಬಾರಿ ಕಾರುಗಳ ಒಡೆಯರಾಗಿದ್ದಾರೆ ಈ ಹಾಸ್ಯ ಚಕ್ರವರ್ತಿ.