ಕೆಜಿಎಫ್ ಗರುಡ ರಾಮ್ ಮುದ್ದು ಕುಟುಂಬದ ಕ್ಯೂಟ್ ವಿಡಿಯೋ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ. ಈ ಚಿತ್ರ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿ ಇಡೀ ಭಾರತ ಚಿತ್ರರಂಗವೇ ತನ್ನ ಕಡೆ ತಿರುಗಿ ನೋಡುವ ಹಾಗೆ ಮಾಡುವುದರ ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಿದೆ. ಈಗಲೂ ಕೂಡ ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿರುವ ಪ್ರತಿಯೊಂದು ಪಾತ್ರವೂ ಕೂಡ ಸಿನಿರಸಿಕರ ಮನಸಿಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ.

 

 

ಆದರೆ ಈ ಎಲ್ಲಾ ಹೊಸ ಪಾತ್ರಗಳಲ್ಲಿ ಹೆಚ್ಚು ಕಾಡಿದ್ದು ಖಳನಟ ಗರುಡ ನ ಪಾತ್ರ. ಅಂಹಗಾಗೆ ಅವರ ನಿಜವಾದ ಹೆಸರು ರಾಮಚಂದ್ರ ಬಾಬು ಎಂದು. ಸಿನಿಪ್ರೇಕ್ಷರಿಗೆ ನಟ ರಾಮಚಂದ್ರ ರಾಜು ಎಂದರೆ ಬಹುಶಃ ಅವರು ಯಾರು ಎಂಬುದು ತಕ್ಷಣಕ್ಕೆ ತಿಳಿಯುವುದಿಲ್ಲ. ಅದೇ ಅವರ ಹೆಸರಿನ ಜೊತೆ ‘ಗರುಡ’ ರಾಮ್‌ ಎಂದು ಸೇರಿದರೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸ್ರುಷ್ಟಿಸಿದ ಸಿನಿಮಾ ‘ಕೆಜಿಎಫ್’ ಚಿತ್ರ ಕಣ್ಣಮುಂದೆ ಬರುತ್ತದೆ.

 

 

ಆ ಚಿತ್ರದಲ್ಲಿನ ರಾಮ್ ಅವರ ಪಾತ್ರ ನೋಡುಗರ ಎದೆ ಝಲ್ ಎನಿಸುವಂತೆ ಮಾಡುದಂತು ಸತ್ಯ. ಈ ಸಿನಿಮಾದಿಂದ ದೇಶಾದ್ಯಂತ ಖ್ಯಾತಿ ಗಳಿಸಿರುವ ರಾಮ್‌ ಅವರಿಗೆ ಪರಭಾಷೆಯಿಂದಲೂ ಸಿಕ್ಕಾಪಟ್ಟೆ ಅವಕಾಶಗಳು ಸಿಗುತ್ತಿವೆ.ಈಗಾಗಲೇ ಕನ್ನಡ ಸೇರಿದಂತೆ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಕೆಜಿಎಫ್‌’ ಚಿತ್ರದ ಮೂಲಕ ಹೆಸರು ಮಾಡಿದ ಗರುಡ ರಾಮ್‌ ಕನ್ನಡಕ್ಕಿಂತಲೂ ಈಗ ಪರಭಾಷೆಯಲ್ಲಿಯೇ ಹೆಚ್ಚಿನ ಖ್ಯಾತಿ ಗಳಿಸುತ್ತಿರುವುದು ವಿಶೇಷ.

 

 

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುವ ರಾಮ್ ಅವರು ತಮ್ಮ ಸಿನಿಮಾ ಜೀವನದ ಜೊತೆ ವಯಕ್ತಿಕ ಜೀವನವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಗರುಡ ಅವರು ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳ ಮುದ್ದಿನ ತಂದೆ ಯಾಗಿದ್ದಾರೆ.