ಸೈನಿಕ ಚಿತ್ರದಲ್ಲಿ ಮಿಂಚಿದ ನಟಿ ಸಾಕ್ಷಿ ಶಿವಾನಂದ್ ರವರು ಈಗ ಏನು ಮಾಡುತ್ತಿದ್ದಾರೆ

ನಟಿಯರಲ್ಲಿ ಒಬ್ಬರು ನಮ್ಮ ಸಾಕ್ಷಿ ಶಿವಾನಂದ್ ರವರು ಹೌದು ನೋಡಲು ತುಂಬಾ ಕ್ಯೂಟ್ ಆಗಿ,ಸ್ಲಿಮ್ ಆಗಿ ಒಳ್ಳೆ ಪ್ರಸ್ನಾಲಟಿ ಹೊಂದಿದ್ದ ಸಾಕ್ಷಿ ಶಿವಾನಂದ್ ರವರು ಸುಮಾರು ೫೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.ಕನ್ನಡದಲ್ಲಿ ಗಲಾಟೆ ಅಳಿಯಂದ್ರು, ನಾನು ನಾನೇ,ಕೋದಂಡರಾಮ,ಪರಮಶಿವ,ಸೌಂದರ್ಯ ಹೀಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಸಾಕ್ಷಿ ಶಿವಾನಂದ್ ರವರು ತುಂಬಾ ಅದ್ಭುತವಾಗಿ ಪಾತ್ರ ನಿರ್ವಹಿಸಿ ಜನಪ್ರಿಯ ನಟಿ ಎಂದು ಹೆಸರು ಮಾಡಿದ್ದಾರೆ.

 

 

ಸಾಕ್ಷಿ ಶಿವಾನಂದ್ ರವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳಲ್ಲೂ ಮಿಂಚಿದ್ದಾರೆ.ಸಾಕ್ಷಿ ಶಿವಾನಂದ್ ರವರಿಗೆ ಈಗ ೪೩ ವರ್ಷ. ಕನ್ನಡದಲ್ಲಿ ಸಾಕ್ಷಿ ಶಿವಾನಂದ್ ರವರು ನಟಿಸಿದ ಕೊನೆಯ ಚಿತ್ರ ಪರಮಶಿವ.ಸಾಕ್ಷಿ ಶಿವಾನಂದ್ ರವರು ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ಮಾಸ್ಟರ್‌.

 

 

ಚಿರಂಜೀವಿಯವರ ಜೊತೆ ಅದ್ಭುತವಾಗಿ ನಟಿಸಿದ ಸಾಕ್ಷಿ ಯವರು ಈ ಚಿತ್ರದಿಂದ ತೆಲುಗಿನಲ್ಲಿ ತುಂಬಾ ಫೇಮಸ್ ಆದರು ನಂತರ ನಾಗಾರ್ಜುನ ರವರ ಜೊತೆ ಸೀತಾರಾಮರಾಜು,ಮಹೇಶ್ ಬಾಬುರವರ ಜೊತೆ ಯುವರಾಜು,ಬಾಲಕೃಷ್ಣ ರವರ ಜೊತೆ ವಂಶೊದ್ಧಾರಕುಡು,ರಾಜಶೇಖರ ರವರ ಜೊತೆ ಸಿಂಹರಾಶಿ,ಮೋಹನ ಬಾಬು ರವರ ಜೊತೆ ಯಮಜಾತಕುಡು ಹೀಗೆ ತೆಲುಗಿನ ಹಲವಾರು ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಹೀರೋಯಿನ್ ಆಗಿ ನಟಿಸಿದ ಸಾಕ್ಷಿ ಶಿವಾನಂದ್ ರವರು ಸ್ವಲ್ಪ ದಿನಗಳ ಕಾಲ ಸಿನಿಮಾಗಳಿಂದ ದೂರ ಉಳಿದ್ದು ನಂತರ ಮತ್ತೆ ತೆಲುಗಿನ ಹೋಮಮ್ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುವ ಮೂಲಕ ತೆಲುಗು ಸಿನಿಮಾರಂಗಕ್ಕೆ ವಾಪಸ್ ಆಗಿದ್ದರು. ದೊಂಗಾದಿದೊಂಗ ಎಂಬ ಸಿನಿಮಾದಲ್ಲಿ ನಟಿಸಿ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅಲ್ಲೂ ೨,೩ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ.

 

 

ಸಾಕ್ಷಿ ಶಿವಾನಂದ್ ರವರು ಸಾಗರ್ ಎಂಬ ಬಿಸಿನೆಸ್ ಮ್ಯಾನ್ ನನ್ನು ವಿವಾಹವಾಗಿದ್ದಾರೆ. ಇವರು ತಮ್ಮಗೆ ಮದುವೆಯಾಗಿರುವ ಫೋಟೋಗಳನ್ನು ಎಲ್ಲೂ ಶೇರ್ ಮಾಡಿಲ್ಲವಾದರಿಂದ ಸುಮಾರು ಜ‌ನರಿಗೆ ಇದು ಗೊತ್ತೆ ಇರಲಿಲ್ಲ. ಸದ್ಯಕ್ಕೆ ಸಾಕ್ಷಿ ಶಿವಾನಂದ್ ರವರು ತಮ್ಮ ಪತಿಯ ಜೊತೆ ಬಿಸಿನೆಸ್ ನಲ್ಲಿ ಸಹಾಯ ಮಾಡಿಕೊಂಡು ಸಿನಿಮಾ ಆಫರ್ ಗಳಿಗಾಗಿ ಕಾಯುತ್ತಿದ್ದಾರಂತೆ ಯಾವುದಾದರೂ ಚೆನ್ನಾಗಿರುವ ಸಿನಿಮಾ ಆಫರ್ ಬಂದರೆ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತೇನೆ ಎಂದು ಸಾಕ್ಷಿ ಶಿವಾನಂದ್ ರವರು ಹೇಳಿದ್ದಾರೆ.