ಅದಿತಿ ಪ್ರಭುದೇವ ರವರು ಒಂದು ಸಿನಿಮಾಗೆ ತೆಗೆದು ಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

ಅದಿತಿಯವರು ತುಂಬಾ ಮುಗ್ದ ಸ್ವಭಾವದವರು ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ ಅದಿತಿಯವರಿಗೆ ಸ್ವಲ್ಪವೂ ಅಹಂಕಾರವಿಲ್ಲ.ಜನವರಿ ೧೩,೧೯೯೪ ರಲ್ಲಿ ದಾವಣಗೆರೆಯಲ್ಲಿ ಅದಿತಿಯವರು ಜನಿಸಿದರು. ಇವರ ನಿಜವಾದ ಹೆಸರು ಸುದೀಪನ ಪ್ರಭುದೇವ. ಬಿ.ಇ ಹಾಗೂ ಎಮ್.ಬಿ.ಎ ಪದವಿಯನ್ನು ಮುಗಿಸಿ ದಾವಣಗೆರೆಯ ಟಿವಿ ಮಾಧ್ಯಮದಲ್ಲಿ ನಿರೂಪಣೆ ಮಾಡುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ ರವರು ಮೊಟ್ಟಮೊದಲ ಬಾರಿಗೆ ನಟಿಸಿದ ಧಾರವಾಹಿ ‘ಗುಂಡ್ಯಾನ ಹೆಂಡ್ತಿ’ .

 

 

ನಂತರ ನಾಗಿಣಿ ಹೀಗೆ ಹಲವಾರು ಧಾರವಾಹಿಗಳಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ ಅದಿತಿಯವರು ಧೈರ್ಯ, ಬಜಾರ್, ಆಪರೇಷನ್ ನಕ್ಷತ್ರ, ಸಿಂಗ,ರಂಗನಾಯಕಿ, ಬ್ರಹ್ಮಚಾರಿ ಸಿನಿಮಾಗಳಲ್ಲಿ ನಟಿಸಿದ ಅದಿತಿಯವರು ೨೦೨೦ ರಲ್ಲಿ ಲಾಕ್ ಡೌನ್ ಆದರಿಂದ ಸಿನಿಮಾದಿಂದ ದೂರ ಉಳಿದಿದ್ದರು. ಈಗ ೨೦೨೧ ರಲ್ಲಿ ಮತ್ತೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದಿದ್ದು ಸುಮಾರು ೧೨ ಸಿನಿಮಾಗಳಲ್ಲಿ ಆಕ್ಟ್ ಮಾಡಲಿದ್ದಾರೆ.ಗಾಳಿಪಟ ೨,ತೊತಾಪುರಿ,ಆನ,ಓಲ್ಡ್ ಮಾಂಕ್,ದಿಲ್ ಮಾರ್ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲ್ಲಿದ್ದಾರೆ.ಅದಿತಿ ಪ್ರಭುದೇವ ರವರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ಬರೋಬ್ಬರಿ ೨೦ ಲಕ್ಷ.

 

 

ಇಷ್ಟೆಲ್ಲಾ ಸಿನಿಮಾಗಳಲ್ಲಿ ಬಿಜಿ ಇರುವ ಅದಿತಿಯವರು ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಅದೇನು ಗೊತ್ತಾ? ಅದಿತಿ ಪ್ರಭುದೇವ ರವರು ಒಬ್ಬ ಬಿಜಿನೆಸ್ ಮ್ಯಾನ್ ನ್ನು ಹೊಳೆನರಸೀಪುರದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.ಅದಿತಿಯವರು ಮದುವೆಯಾಗುತ್ತಿರುವ ಹುಡುಗ ದಾವಣಗೆರೆಯವರೇ ಆಗಿದ್ದು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ಮುಂದಿನ ವರ್ಷ ಮದುವೆಯಾಗಲಿರುವ ಅದಿತಿಯವರು ಸೋಶಿಯಲ್ ಮಿಡಿಯಾದಲ್ಲಿ ಮದುವೆಯಾಗುತ್ತಿರುವ ಹುಡುಗನ ಫೋಟೋವನ್ನು ಶೇರ್ ಮಾಡಿ ನನ್ನ ಕನಸು ನನಸಾಗಿದೆ ಎಂದು ಇನ್ ಸ್ಟ್ರಾಗ್ರಾಮ್ ನಲ್ಲಿ ಬರೆದು ಕೊಂಡಿದ್ದಾರೆ.ಇದನ್ನು ನೋಡಿದ ಅಭಿಮಾನಿಗಳು ವಿಶ್ ಮಾಡಿದ್ದಾರೆ.