ಅಣ್ಣಾವ್ರ ಜೊತೆ ಅಭಿನಯಿಸಿದ ಈ ನಟಿ ವಿಮಾನ ಹಾರಿಸುತ್ತಾರೆ

ಹೌದು ಇವತ್ತಿಗೂ ಕೂಡ ಇವರ ಸೌಂದರ್ಯಕ್ಕೆ ಇವರೇ ಸಾಟಿ ಅನ್ನುವಷ್ಟು ಅಂಗವಾಗಿರುವ ನಟಿ ಮಾಧವಿ ಅವರ ಬಗ್ಗೆ ನೀವು ತಿಳಿಯದೆ ಇರುವ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿಗಳನ್ನು ತಿಳಿಸುತ್ತೇನೆ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ನಿಮಗೂ ಕೂಡ ನಟಿ ಮಾಧವಿ ಅವರ ಅಭಿನಯ ಇಷ್ಟ ಅನ್ನೋದಾದರೆ ಮಾಹಿತಿಗೆ ಲೈಕ್ ಮಾಡಿ ಮತ್ತು ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ.

 

 

ಹೌದು ನಟಿ ಮಾಧವಿ ಅವರು ಕನ್ನಡ ಚಿತ್ರರಂಗ ಕಂಡಂತಹ ಒಬ್ಬ ಅಂದವಾದ ಸೌಂದರ್ಯಕ್ಕೆ ಹೆಸರುವಾಸಿಯಾದ ನಟಿಯಾಗಿದ್ದರೂ ಇವರು ರಾಜ್ಕುಮಾರ್ ವಿಷ್ಣುವರ್ಧನ್ ಅಂತಹ ಮೇರು ನಟರೊಂದಿಗೆ ಅಭಿನಯ ಮಾಡಿದ್ದು ರಜನೀಕಾಂತ್ ಅಮಿತಾಬ್ ಬಚ್ಚನ್ ಜೊತೆಯಲ್ಲಿ ಕೂಡ ಸಿನಿಮಾಗಳನ್ನು ಮಾಡಿದ್ದಾರೆ.ನಟಿ ಮಾಧವಿ ಅವರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಾಗಲೇ ಅಮೆರಿಕ ಗಂಡನ್ನು ವರಿಸುತ್ತಾರೆ ಇವರ ಪತಿ ಅಮೆರಿಕಾದಲ್ಲಿ ಒಂದು ದೊಡ್ಡ ಫಾರ್ಮಸಿಟಿಕಲ್ ಇಂಡಸ್ಟ್ರೀಯ ಮಾಲೀಕರಾಗಿದ್ದು ಸಂಪತ್ತಿಗೆ ಏನೂ ಕಡಿಮೆ ಇಲ್ಲ ಹಾಗೆಯೇ ನಟಿ ಮಾಧವಿ ಅವರಿಗೆ ಐಶ್ವರ್ಯ ಸಂಪತ್ತು ಎಲ್ಲವೂ ಕೂಡ ಒಲಿದು ಬಂದಿರುವ ಇವರು ಭಾರತದ ಸಂಸ್ಕೃತಿಯನ್ನು ಬಿಡದೇ ಇಂದಿಗೂ ಕೂಡ ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಪಾಲಿಸಿಕೊಂಡು ಇದನ್ನು ಬಿಡುವಿನ ಸಮಯದಲ್ಲಿ ತಮ್ಮ ಮೂವರು ಮಕ್ಕಳಿಗೂ ಕೂಡ ತಿಳಿಸಿ ಕೊಡುತ್ತಾರಂತೆ.

 

 

ಟಿ ಮಾಧವಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇವರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಅಡುಗೆ ಮಾಡುವುದು ಮತ್ತು ಭರತನಾಟ್ಯ ಹೇಳಿಕೊಡುವುದು ಹಾಗೆ ನಮ್ಮ ದೇಶದ ಸಂಸ್ಕೃತಿಯನ್ನು ಕೂಡ ತಿಳಿಸಿಕೊಡುತ್ತಾರೆ ಜೊತೆಗೆ ನಟಿ ಮಾಧವಿ ಅವರು ತಮ್ಮ ಪತಿಯ ಫಾರ್ಮಸಿಟಿಕಲ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದು ಇವರಿಗೆ ಸ್ವಂತ ವಿಮಾನವೂ ಕೂಡ ಇದೆ ಹಾಗೆ ಇವರ ವೈಯಕ್ತಿಕ ವಿಮಾನವನ್ನು ಇವರೇ ಓಡಿಸುತ್ತಾರಂತೆ.

 

 

ಸಕಲ ಕಲಾವಲ್ಲಭೆ ಎಂದು ಕರೆಯಬಹುದು ಈ ಒಬ್ಬ ನಟಿಯನ್ನು ಯಾಕೆ ಎಂದರೆ ಇವರು ಅಭಿನಯದಲ್ಲಿ ಬಿಸಿನೆಸ್ ಕ್ಷೇತ್ರದಲ್ಲಿ ಹಾಗೆ ಇನ್ನು ಅನೇಕ ಕ್ಷೇತ್ರಗಳ ಬಗ್ಗೆ ತಿಳಿದುಕೊಂಡಿದ್ದು ನಟಿ ಮಾಧವಿ ಅವರು ಮಾರ್ಷಲ್ ಆರ್ಟ್ ಕರಾಟೆ ಇವುಗಳನ್ನು ಕೂಡ ಕಲಿತಿದ್ದರಂತೆ. ಅಷ್ಟೇ ಅಲ್ಲದೇ ನಟಿ ಮಾಧವಿ ಅವರಿಗೆ ಇಂಡಿಯಾ ದೇಶದ ಮೇಲೆ ಅದೆಷ್ಟು ಅಭಿಮಾನವಿದೆ ಅಂದರೆ ಅಮೇರಿಕಾ ದೇಶದಲ್ಲಿಯೂ ನಾನೊಬ್ಬ ಭಾರತೀಯ ಮಹಿಳೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಾಧವಿ ಅವರು, ಹಾಗೆ ಪದ್ಮಭೂಷಣ ವಿಜೇತ ರಾಜ್ಕುಮಾರ್ ಅವರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅಪರೂಪದ ಕೆಲವೊಂದು ವಿಚಾರಗಳನ್ನು ಕೂಡ ಬರೆದಿಟ್ಟುಕೊಂಡಿದ್ದಾರೆ.

 

 

ನಟಿ ಮಾಧವಿ ಅವರಿಗೆ ಟ್ರಾವೆಲಿಂಗ್ ಮಾಡುವುದು ಮತ್ತು ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯುವುದು ಇವೆಲ್ಲವೂ ಕೂಡ ಬಹಳ ಇಷ್ಟವಾದಂತಹ ಹವ್ಯಾಸಗಳಾಗಿದ್ದು ಇವರು ಅತ್ಯಂತ ಸುಖಕರವಾದ ನೆಮ್ಮದಿಯ ಜೀವನವನ್ನು ನಾವು ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಏನೇ ಆಗಿರಲಿ ಈ ಒಬ್ಬ ನಟಿ ನಮ್ಮ ದೇಶದವರು ಅಂತ ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ.