90ರ ದಶಕದ ನಟಿ ಸುಧಾರಾಣಿ ಅವರ ಮಗಳು ನಿಧಿ ಅವರು ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ?
ಬ್ಯೂಟಿ ಕ್ವೀನ್ ಆಗಿರುವ ಸುಧಾರಣೆ ರವರು 1970 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. 12 ವರ್ಷ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಸುಧಾರಣೆಯವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ರವರು ಸುಧಾರಾಣಿ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು. ಸುಧಾರಾಣಿ ಅವರ ಮೊದಲ ಸಿನಿಮಾ ‘ಆನಂದ್’ ಶಿವರಾಜಕುಮಾರ್ ಜೊತೆ ಹೀರೋಯಿನ್ ಆಗಿ ನಟಿಸಿದ್ದು,ಆನಂತರ ಸುಧಾರಾಣಿಯವರು ರವಿಚಂದ್ರನ್, ಅಂಬರೀಶ್, ರಮೇಶ್ ಅರವಿಂದ್, ಕುಮಾರ್ ಗೋವಿಂದ್ ಇವರೆಲ್ಲರ ಜೊತೆ ಸಿನಿಮಾದಲ್ಲಿ ನಟಿಯಾಗಿ ನಟಿಸಿದ್ದಾರೆ.
ನಂತರ ಇವರು ವಿವಾಹವಾಗಿ ಅಮೆರಿಕಾಗೆ ಹೋಗಿ ಅಲ್ಲಿ ತಮ್ಮ ಮೊದಲ ಪತಿಯಿಂದ ತುಂಬಾ ನೊಂದು ಡೈವರ್ಸ್ ಕೊಟ್ಟು ಇಂಡಿಯಾಗೆ ವಾಪಸ್ ಆಗಿ ಗೋವರ್ಧನ್ ಎಂಬುವವರನ್ನು ವಿವಾಹವಾದ ಸುಧಾರಾಣಿ ಅವರಿಗೆ ಈಗ ನೀಧಿ ಎಂಬ ಸುಂದರವಾದ ಮಗಳಿದ್ದಾಳೆ.ಇವರು ನೋಡುವುದಕ್ಕೆ ಅಮ್ಮನ ಹಾಗೆ ಕಾಣುತ್ತಾರೆ.ಇವರೂ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದು ‘ಚಕ್ರವ್ಯೂಹ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನೊಂದು ಖುಷಿ ವಿಷಯವೇನೆಂದರೆ ಈ ಚಿತ್ರದಲ್ಲಿ ಸುಧಾರಾಣಿ ಅವರು ನಟಿಸುತ್ತಿದ್ದಾರೆ. ನಿಧಿ ಮತ್ತು ಸುಧಾರಾಣಿ ಅವರು ತಾಯಿ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಧಿ ಅವರಿಗೆ ಈಗ 19 ವರ್ಷ ವಯಸ್ಸು. ಸುಧಾರಾಣಿಯವರು 12ನೇ ವರ್ಷ ವಯಸ್ಸಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರೆ, ತಮ್ಮ ಮಗಳು ನಿಧಿ ಯವರು 19 ವರ್ಷಕ್ಕೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
View this post on Instagram
ಇನ್ನು ಸುಧಾರಾಣಿ ಯವರಿಗೆ ಆರ್ಟ್ಸ್ ವಿಭಾಗದಲ್ಲಿ ಗೌರವಾನ್ವಿತ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಇದರಿಂದ ತುಂಬಾ ಖುಷಿ ಪಟ್ಟ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ವಿಶ್ ಕೂಡ ಮಾಡಿದ್ದಾರೆ.