ರಮ್ಯಾರವರಿಗೆ ಈಗ ವಯಸ್ಸು ಎಷ್ಟು ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಹೆಸರು ಮಾಡಿರುವ ರಮ್ಯಾರವರು ನವೆಂಬರ್ 29 ,1982 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರಮ್ಯಾರವರ ನಿಜವಾದ ಹೆಸರು ದಿವ್ಯ ಸ್ಪಂದನ. ಊಟಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮಾಡಿದ ರಮ್ಯಾರವರು ಬೆಂಗಳೂರಿನ ಸೆಂಜೋಸೆಫ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ನಂತರ ರಮ್ಯಾರವರು ಮಾಡಲಿಂಗ್ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಪುನೀತ್ ರಾಜಕುಮಾರ್ ಅವರ ಜೊತೆ ‘ಅಭಿ’ ಎಂಬ ಸಿನಿಮಾದಲ್ಲಿ ಪ್ರಪ್ರಥಮಬಾರಿಗೆ ನಟಿಸುವ ಮೂಲಕ ತಮ್ಮ ಹೆಸರನ್ನು ದಿವ್ಯಸ್ಪಂದನ ಎಂಬ ಹೆಸರಿನಿಂದ ರಮ್ಯಾ ಎಂದು ಬದಲಾಯಿಸಿಕೊಂಡರು.

 

 

ನಂತರ ಎಕ್ಸ್ ಕ್ಯೂಸ್ ಮಿ, ರಂಗ ಎಸೆಸೆಲ್ಸಿ ,ಆಕಾಶ್, ಅಮೃತದಾರೆ, ಅರಸು, ಆದಿ, ಗೌರಮ್ಮ, ಜೊತೆಜೊತೆಯಲಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ ರಮ್ಯಾರವರು ಸೂಪರ್ ಹಿಟ್ ಆದರು. ಇವರು ನಟಿಸಿದ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ನಂತರ 2012ರಲ್ಲಿ ರಾಜಕೀಯಕ್ಕೆ ಕಾಲಿಟ್ಟ ರಮ್ಯಾರವರು 2013ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಮ್ಯಾರವರು 2014ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ನಂತರ ಕಾಂಗ್ರೆಸ್ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾ ಗಿದ್ದ ರಮ್ಯಾರವರು ಈಗ ಆ ಕೆಲಸವನ್ನು ಬಿಟ್ಟಿದ್ದಾರೆ.

 

 

ಸದ್ಯಕ್ಕೆ ಸಿನಿಮಾರಂಗ ಹಾಗೂ ರಾಜಕೀಯದಿಂದ ದೂರ ಉಳಿದಿರುವ ರಮ್ಯಾರವರು ಈಗ ಅಟ್ಲಾಂಟಿಕ್ ಸಾಗರದ ಹತ್ತಿರ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ರಮ್ಯಾರವರು 40ನೇ ವರ್ಷದ ಹುಟ್ಟುಹಬ್ಬವನ್ನು ಸಿಂಪಲ್ಲಾಗಿ ತಮ್ಮ ಸ್ನೇಹಿತರ ಜೊತೆ ಆಚರಿಸಿಕೊಂಡು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದು ಮೆಸೇಜ್ ಮಾಡಿದ್ದಾರೆ.

 

 

ಇನ್ನೂ ರಮ್ಯಾರವರು ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗುತ್ತಾರೆ ಎಂದು ಸಾಕಷ್ಟು ಉಹಾ ಪೊಹಗಳು ಹರಿದಾಡುತ್ತಿದ್ದು ಇದಕ್ಕೆ ರಮ್ಯಾರವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ರಮ್ಯಾರವರು ಮತ್ತೆ ಸಿನಿಮಾ ರಂಗಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆ. ಇದಕ್ಕೆ ರಮ್ಯಾರವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ.