ತನ್ನ ಮದುವೆ ಆಗುತ್ತಿರುವ ಪೋರಿ ಇವರೇ ಎಂದ ಶೈನ್ ಶೆಟ್ಟಿ

ಸ್ನೇಹಿತರೆ, ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಕಾರ್ಯಕ್ರಮ ನಡೆಯುತ್ತಿದೆ. ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಲರ್ಸ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿನ ಕೆಲ ಕಲಾವಿದರು ಹಾಗೆ ಇನ್ನಿತರು ಸಹ ಭಾಗಿಯಾಗಿದ್ದಾರೆ. ಹಾಗೆ ಕಿರುತೆರೆಯಲಿ ಪ್ರಸಾರವಾಗುವಾಗ ಕೆಲವು ರಿಯಾಲಿಟಿ ಶೋಗಳ ಕೆಲ ಕಂಟೆಸ್ಟೆಂಟ್ಗಳು ಸಹ ಈ ಅನುಬಂಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೌದು ಬಿಗ್ಬಾಸ್ ಶೈನ್ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟ ಶೈನ್ ಶೆಟ್ಟಿ ಎಂದ ತಕ್ಷಣ ಹೆಚ್ಚು ಹುಡುಗಿಯರು ಬಿದ್ದು ಬಿದ್ದು ಸಾ’ಯುತ್ತಾರೆ. ಶೈನ್ ಶೆಟ್ಟಿಯವರಿಗೆ ತುಂಬಾನೇ ದೊಡ್ಡದಾದ ಗರ್ಲ್ಸ್ ಫ್ಯಾನ್ಸ್ ಫಾಲೋಯಿಂಗ್ ಇದೆ.

 

 

ಶೈನ್ ಶೆಟ್ಟಿಯವರು ಬಿಗ್ ಬಾಸ್ ನಲ್ಲಿ ಭಾಗವಹಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಇಡೀ ರಾಜ್ಯಕ್ಕೆ ತುಂಬಾ ಚಿರಪರಿಚಿತರಾದವರು. ನಟ ಶೈನ್ ಶೆಟ್ಟಿ ಮೊದಲಿಗೆ ಲಕ್ಷ್ಮಿ ಬಾರಮ್ಮ ಎಂಬ ಸೀರಿಯಲ್ ನಲ್ಲಿ ಅಭಿನಯಿಸಸಿದ್ದು ಅವರದೇ ಅಭಿನಯದ ಮೂಲಕ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದರು. ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ತುಂಬಾನೇ ಆಕ್ಟಿವ್ ಆದರು. ಜೊತೆಗೆ ಅವರ ರೋಡ್ ಸೈಡ್ ಫುಡ್ ಟ್ರಕ್ ವಿಚಾರವಾಗಿಯೂ ಕೂಡ ಆಗಾಗ ಸದ್ದು ಮಾಡುತ್ತಿದ್ದರು. ಹಾಗೆ ಶೈನ್ ಶೆಟ್ಟಿ ದೀಪಿಕಾ ದಾಸ್ ಮದುವೆಯಾಗುತ್ತಾರೆ ಎನ್ನಲಾಗಿ ಸಾಕಷ್ಟು ಊಹಾಪೋಹಗಳು ಸಹ ಹರಿದು ಬಂದಿದ್ದವು. ಆದರೆ ಇದೀಗ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ಮೂಲಕ ಶೈನ್ ಶೆಟ್ಟಿ ಅವರು, ತಾವು ಮದುವೆ ಆಗ್ತಿರುವ ಆ ಹುಡುಗಿ ಯಾರೆಂದು ರಿವೀಲ್ ಮಾಡಿದ್ದಾರೆ.

 

 

ಶೈನ್ ಶೆಟ್ಟಿ ಅವರ ಮೇಲೆ ಪ್ರೊಮೋದಲ್ಲಿ ಒಂದು ಹುಡುಗಿ ಬಂದು ಬೀಳುತ್ತಾಳೆ. ಆಗ ಶೈನ್ ಶೆಟ್ಟಿ ಸುಕೃತ ಅವರನ್ನು ನಾನು ಮದುವೆಯಾಗುತ್ತಿದ್ದೇನೆ ಎಂದು ಹೇಳುತ್ತಾರೆ. ಈ ವಿಚಾರ ಇದೀಗ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಆ ಸುಕೃತ ನಿಜಕ್ಕೂ ಯಾರೆಂದು ಹುಡುಕಾಟ ನಡೆಯುತ್ತಿದೆ. ಇನ್ನು ಕೆಲವರು ಶೆಟ್ಟಿಯವರಿಗೆ ಈಗಾಗಲೇ ಶುಭಕೋರಿ, ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಹೇಳುತ್ತಿದ್ದಾರೆ.