ನನ್ನನ್ನ ಮದುವೆ ಆಗೋಕೆ ಒಳ್ಳೆ ಹುಡುಗನ್ನ ನೋಡ್ತಿದ್ದೀವಿ – ನಟಿ ಸಿರಿ ಮದುವೆ ಆಗದೆ ಇರುವುದಕ್ಕೆ ಕಾರಣ

ನಮಸ್ತೆ ಸ್ನೇಹಿತರೆ, ಕನ್ನಡದ ಮೊದಲು ಬಹಳಷ್ಟು ಜನಪ್ರಿಯ ಆಗಿದಂತಹ ಧಾರಾವಾಹಿಗಳಲ್ಲಿ ಒಂದೆರಡು “ರಂಗೋಲಿ ಮತ್ತು ಬದುಕು” ಧಾರಾವಾಹಿ.. ಈ ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನ ವಹಿಸಿದ್ದ ನಟಿ ಅಂದ್ರೆ ಅದು ಸಿರಿ.. ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ಅದ್ಬುತವಾಗಿ ನಟನೆಯನ್ನ ಮಾಡಿ ಬಹಳಷ್ಟು ಜನಪ್ರೀಯ ಪಡೆದವರು ನಟಿ ಸಿರಿ.. ಮೊದಲು ನಟಿ ಸಿರಿಗೆ ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ.. ಆಗ ಸಿರಿಯ ತಂದೆಯ ಸ್ನೇಹಿತರು ಧಾರಾವಾಹಿಯಿಗಳಲ್ಲಿ ಸಿರಿ ನಟನೆ ಮಾಡ್ಬೇಕು ಅಂತ ಸಲಹೆ ನೀಡಿ ತಾವೇ ಅವಕಾಶವನ್ನ ಕೂಡ ಕೊಡಿಸಿದ್ರಂತೆ.. ಆಗ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದ ಅಂಬಿಕಾ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟನೆ ಮಾಡುವ ಅವಕಾಶ ಸಿರಿ ಅವರಿಗೆ ಸಿಕ್ಕಿತು..

 

 

ಆಗ ಸಿರಿ ಇನ್ನು ಒಂಬತ್ತನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತುದ್ದರು.. ಆಗಾಗಿ ಮುಖ್ಯ ಪಾತ್ರದಲ್ಲಿ ನಟನೆಯನ್ನ ಮಾಡದೇ ಪೋಷಕ ಪಾತ್ರದಲ್ಲಿ ನಟನೆ ಮಾಡಬೇಕಾಯಿತು.. ನಂತರ ಮೊದಲ ಬಾರಿಗೆ ರಂಗೋಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಅಂದ್ರೆ ನಾಯಕಿಯ ಪಾತ್ರದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತ್ತು.. ರಂಗೋಲಿ ಧಾರಾವಾಹಿ ಪ್ರಾರಂಭ ಆದಾಗ ಸಿರಿ ಅವರು PUC ವಿದ್ಯಾಭ್ಯಾಸ ಮಾಡ್ತೀದ್ರಂತೆ.. ಬಹಳ ಚಿಕ್ಕ ವಯಸ್ಸಿಗೆ ಧಾರಾವಾಹಿಯಲ್ಲಿ ಪ್ರಬುದ್ಧವಾದ ಪಾತ್ರ ಸಿರಿ ಅವರಿಗೆ ಸಿಕ್ಕಿತ್ತು.. ಇನ್ನು ಸಿರಿ ಅವರು ತಮ್ಮ ಬಣ್ಣದ ಲೋಕಕ್ಕೆ ಪ್ರಯಾಣದಲ್ಲಿ ಇಲ್ಲಿಯವರೆಗೂ 30 ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಮತ್ತು ಕೆಲವು ಕನ್ನಡ ತೆಲುಗು ಸಿನಿಮಾಗಳಲ್ಲಿ ಸಹಾ ನಟನೆಯನ್ನ ಮಾಡಿದ್ದಾರೆ..

 

 

ಸಿರಿ ಅವರು ನಟನ ಮಾಡಿರುವಂತಹ ಧಾರಾವಾಹಿಯಿಗಳ‌ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಕರ್ನಾಟಕದ ಜನತೆ ಇವರನ್ನ ತಮ್ಮ ಮನೆಯ ಮಗಳು ಅಂತ ಅಂದುಕೊಂಡಿದ್ರು.. ಇವರು ನಟನೆ ಮಾಡಿದ ಹಲವಾರು ಧಾರಾವಾಹಿಯಾಗಳು ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದೆ.. ಕಿರುತೆರೆಯ ಟಾಪ್ ಮೋಸ್ಟ್ ಫೇಮಸ್ ನಟಿ ಸಿರಿ ಅವರಿಗೆ ಇಂದಿಗೂ ಕೂಡ ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ಮತ್ತು ತಮಿಳು ಕಿರುತೆಯಲ್ಲಿ ಬಹಳಷ್ಟು ಬೇಡಿಕೆ ಇದೇ.. ಪ್ರಸ್ತುತ ಕಲಸ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ನಟನೆಯನ್ನ ಮಾಡ್ತೀದ್ದಾರೆ.. ಇಲ್ಲಿಯವರೆಗೂ ಸಿರಿ ಅವರು ನಟನೆ ಮಾಡುತ್ತಿರುವ ಪಾತ್ರಗಳು ಎಲ್ಲವೂ ಬಹಳ ಸೌಮ್ಯವಾದ ಪಾತ್ರಗಳು ಆಗಿವೆ..

 

 

ಈಗ ಸಿರಿ ಅವರು ಒಂದು ಚೇಂಜ್‌ ಗಾಗಿ ಘಟವಾಣಿ ಅತ್ತೆಯ ಪಾತ್ರ ಮಾಡಲಿದ್ದು ಮಧುಮಗಳು ಎನ್ನುವ ಧಾರಾವಾಹಿಯಲ್ಲಿ ಈ ಪಾತ್ರವನ್ನ ಮಾಡಲಿದ್ದಾರೆ ಸಿರಿ ಅವರು.. ಇನ್ನು ತಮ್ಮ ಆರ್ಥಿಕ ಜೀವನದ ಬಗ್ಗೆ ಹೇಳುವುದಾದರ ಈ ನಟಿ ಇಂದಿಗೂ ಕೂಡ ಮದುವೆ ಆಗದೆ ಸಿಂಗಲ್ ಆಗಿಯೆ ಇದ್ದಾರೆ.. ಈಗ ಸಿರಿ ಅವರು ಮದುವೆಯಾಗಲು ತಯಾರಾಗಿದ್ದು ತಕ್ಕ ವರ ಸಿಗಲಿ ಅಂತ ಕಾಯುತ್ತಿದ್ದಾರೆ.. ತಮ್ಮ ಪ್ರೊಫೆಶನ್ ಅನ್ನ ಅರ್ಥ ಮಾಡಿಕೊಳ್ಳುವಂತಹ ಹುಡುಗ ಆಗಿರಬೇಕು ಹಾಗು ಸರಳವಾಗಿ ಮದುವೆ ಆಗಬೇಕು ಎನ್ನುವ ಅಪೇಕ್ಷೆಯನ್ನ ಹೊಂದಿದ್ದಾರೆ ನಟಿ ಸಿರಿ.