ಚಿರು ಹುಟ್ಟುಹಬ್ಬ ಮುಗಿಸಿ ಎರಡೇ ದಿನಕ್ಕೆ ರಾಯನ್ ಜೊತೆ ಬೆಂಗಳೂರು ಬಿಟ್ಟು ಹೊರಟ ನಟಿ ಮೇಘನಾ ರಾಜ್

ಚಂದನವನದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರಿಲ್ಲವಾಗಿ ಎರಡು ವರ್ಷಗಳೇ ಆಗಿದೆ. ಆದರೆ ಚಿರುವನ್ನು ನೆನಪಿಸಿಕೊಳ್ಳದ ಜನರಿಲ್ಲ. ದೈಹಿಕವಾಗಿ ಚಿರು ಇಲ್ಲವಾದರೂ ಕೂಡ ಸಿನಿಮಾಗಳ ಮೂಲಕ ನಮ್ಮ ಜೊತೆಗೆ ಸದಾ ಇದ್ದಾರೆ ಎನ್ನುವುದು ಮಾತ್ರ ಸತ್ಯ. ಮೊನ್ನೆ ತಾನೇ ಚಿರು ಹುಟ್ಟುಹಬ್ಬವಿತ್ತು. ಮೇಘನ ರಾಜ್ ಹಾಗು ಮಗ ರಾಯನ್ ರಾಜ್ ಚಿರುವಿನ ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಪ್ಪನ ಫೋಟೋ ನೋಡಿ.ನೋಡುತ್ತಿದ್ದಂತೆ ರಾಯನ್ ತೊದಲು ನುಡಿಯಲ್ಲಿ ಅಪ್ಪ ಎಂದಿದ್ದಾನೆ.

 

 

ಕೈಯಲ್ಲಿರುವ ಗುಲಾಬಿ ಹೂವನ್ನು ಅಪ್ಪನ ಫೋಟೋಗೆ ಹಾಕಿದ್ದಾನೆ. ಇನ್ನು ಮೇಘನಾ ರಾಜ್ ಅವರು ಪತಿಯ ಸಮಾಧಿ ಹೂವಿನ ಹಾರ ಹಾಕಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಯನ್ ರಾಜ್ ತೊದಲು ನುಡಿಯಲ್ಲಿ ಅಪ್ಪ ಎಂದು ಕರೆಯುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಚಿರು ಬರ್ತ್ಡೆ ಮುಗಿದ ಎರಡೇ ದಿನಕ್ಕೆ ಮಗ ರಾಯನ್ ರಾಜ್ ಜೊತೆ ಮೇಘನಾ ರಾಜ್ ಅವರು ವಿದೇಶಕ್ಕೆ ಹಾರಿದ್ದಾರೆ.ಹಾಗಾದ್ರೆ ಮೇಘನಾ ಮಗನ ಜೊತೆ ವಿದೇಶಕ್ಕೆ ಹೋಗಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

 

 

ಹೌದು. ನಟಿ ಮೇಘನಾ ರಾಜ್ ಅವರು ಮಗ ಆರೈಕೆಯ ಜೊತೆ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ಮೇಘನಾ ಅವರ ಹೊಸ ಸಿನಿಮಾ ಒಂದು ಶೂಟ್ ನಡೆಯುತ್ತಿದ್ದು, ಆ ಸಿನಿಮಾದ ಚಿತ್ರೀಕರಣ ವಿದೇಶದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ. ಹಾಗಾಗಿ ಮೇಘನ ಅವರು ರಾಯನ್ ನ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾರೆ.ಯಾಕಂದ್ರೆ ರಾಯನ್ ಇನ್ನು ಚಿಕ್ಕವನು ತಂದೆ ಕೂಡ ಇಲ್ಲ, ಆದರೆ ತಾಯಿಯು ಜೊತೆಯಲ್ಲಿಲ್ಲ ಅಂದ್ರೆ ತುಂಬಾನೇ ನೊಂದುಕೊಂಡು ಅಳಲು ಶುರು ಮಾಡುತ್ತಾನೆ. ಆದ್ದರಿಂದ ಮೇಘನ ರಾಜ್ ಹಾಗು ಅವರ ತಾಯಿ ಸಹ ರಾಯನ್ ರಾಜ್ ಕರೆದುಕೊಂಡು ವಿದೇಶಕ್ಕೆ ತೆರಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪ ದೇ ತಿಳಿಸಿ.