ಅಪ್ಪು ಅವರ ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ ಎಂದ ರವಿಚಂದ್ರನ್

ಪುನೀತ್ ಪರ್ವ ಕಾರ್ಯಕ್ರಮವನ್ನು ಪುನೀತ್ ರವರ ಅಭಿಮಾನಿಗಳಿಗೋಸ್ಕರ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ನಟ ನಟಿಯರು ಭಾಗವಹಿಸಿದ್ದರು. ಎಲ್ಲಾ ನಟ ನಟಿಯರು ಬಿಳಿ ಬಣ್ಣದ ಬಟ್ಟೆಯನ್ನು ತೊಟ್ಟು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಕೂಡ ಹಾಜರಿದ್ದರು.

 

 

ರವಿಚಂದ್ರನ್ ಸ್ಟೇಜಿನ ಮೇಲೆ ಹೋಗಿ ಪುನೀತ್ ಬಗ್ಗೆ ಮಾತನಾಡಿದರು ಮೊದಲನೆಯದಾಗಿ ಎಲ್ಲಾ ಹಿರಿಯರಿಗೂ ಗೆಳೆಯ ಗೆಳತಿಯರಿಗೂ ನಮಸ್ಕಾರವನ್ನು ತಿಳಿಸಿದರು. ಇದು ಒಂದು ಸಂಭ್ರಮ ಅಲ್ಲ ಇದು ಒಂದು ಮಹಾಸಂಗಮ, ಮನುಷ್ಯ ಸಂಪಾದನೆ ಮಾಡಬೇಕಿರುವುದು ಇದೆ ಇದಕ್ಕಿಂತ ಇನ್ನೇನು ಸಂಪಾದನೆ ಮಾಡೋಕಾಗುತ್ತೆ ಎಲ್ಲಾರು ಇವತ್ತು ಇಲ್ಲಿ ಸೇರಿದೀವಿ ಅಂದ್ರೆ ಅದು ಅಪ್ಪು ಗೋಸ್ಕರ ಆ ಪ್ರೀತಿ ಸುಮ್ನೆ ಅಲ್ಲ ಆ ಪ್ರೀತಿ ಎಲ್ಲರಲ್ಲೂ ಕಾಣಿಸುತ್ತೆ ಬಂದಿರುವ ಅಷ್ಟು ಜನರಲ್ಲು ಅಪ್ಪು ಮೇಲಿರುವ ಪ್ರೀತಿ ಕಾಣಿಸುತ್ತದೆ. ಡಾಕ್ಟರ್ ರಾಜಕುಮಾರ್ ಅವರ ಅಪ್ಪುಗೆಯಿಂದ ನಾನು ಒಬ್ಬ ಕಲಾವಿದ ಆದೆ ವೀರ ಸ್ವಾಮಿಯವರ ಅಪ್ಪುಗೆಯಿಂದ ನಾನು ಒಬ್ಬ ನಿರ್ದೇಶಕನಾದೆ ಅಪ್ಪು ಅವರ ಅಪ್ಪುಗೆಯಿಂದ ನಾನು ಒಬ್ಬ ಅದೃಷ್ಟವಂತನಾದೆ.

 

 

ಗಂಧದ ಗುಡಿ ಅಂದ್ರೆ ಅದು ನಮ್ಮ ಕರ್ನಾಟಕ, ಗಂಧದ ಗುಡಿ ಅಂದ್ರೆ ಅದು ಡಾಕ್ಟರ್ ರಾಜಕುಮಾರ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಗಂಧದಗುಡಿ ಅಂದ್ರೆ ಇದೆ ನಮ್ಮ ಗರ್ವ, ನಮ್ಮ ಸಂಪತ್ತು, ನಮ್ಮ ಖುಷಿ, ನಮ್ಮ ಸುವಾಸನೆ ಯಾರು ಮರೆಯೋಕಾಗುತ್ತೆ ಇವತ್ತು ಗಂಧದಗುಡಿ ಎಂದರೆ ಇಡೀ ಪ್ರಪಂಚದ ನಮ್ಮ ಕಡೆ ತಿರುಗಿ ನೋಡುತ್ತದೆ. ಯಾರು ಬೇಕಿದ್ರೂ ಹೀರೋ ಆಗಬಹುದು ಆದರೆ ಒಬ್ಬ ಮನುಷ್ಯ ಆಗುವುದು ಮುಖ್ಯ ಅದನ್ನು ನಾವು ಪುನೀತ್ ರನ್ನು ನೋಡಬಹುದು .

 

 

ಪುನೀತ್ ರಾಜಕುಮಾರ್ ಇಂದ ಕಲಿಬೇಕಾಗಿರುವುದು ಏನು ಅಂದ್ರೆ ಯಾರ್ ತಂಟೆಗ್ ಹೋಗಬಾರದು ನಗುನಗುತ್ತ ಸಾಧಿಸಬೇಕು ಎಂಬುದನ್ನು ಅವರು ಕಲಿಸಿಕೊಟ್ಟಿದ್ದಾರೆ. ಪುನೀತ್ ರಾಜಕುಮಾರ್ ನನಗೆ ಯಾವಾಗ ಸಿಕ್ಕರು ಅಷ್ಟೇ ಹೆಚ್ಚಿಗೆ ಮಾತಾಡ್ತಿರಲಿಲ್ಲ ನಾನುಂಟು ನನ್ನ ಕೆಲಸ ಉಂಟು ಹೀಗೆ ಇರುತ್ತಿದ್ದರು. ಈ ಗಂಧದ ಗುಡಿಯ ಯಾಕೆ ಸ್ಪೆಷಲ್ ಆಗುತ್ತೆ ಅಂದ್ರೆ ಪುನೀತ್ ಹೀರೋ ಆಗಿದ್ದಾರೆ ಅಂತ ಅಲ್ಲ ಒಂದು ಜವಾಬ್ದಾರಿಯಿಂದ ಕೆಲಸ ಮಾಡಿದ್ದಕ್ಕೆ ಗಂಧದಗುಡಿಯನ್ನು ನೀವು ನೋಡ್ತೀರಾ ಅದನ್ನ ಗೆಲ್ಲುಸ್ತೀರಾ ಎಂದು ಮಾತನಾಡಿದ್ದಾರೆ.