ಹಠಾತ್ ೧೧:೩೦ ಕ್ಕೆ ಅಪ್ಪು ಸಮಾಧಿಗೆ ಬಂದ ಪ್ರೀತಿಯ ನಾಯಿ.!!! ಈಗ ಏನು ಮಾಡುತ್ತಿದೆ ನೋಡಿ

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಆಗಲಿ ೭ ತಿಂಗಳು ಕಳೆದು ಹೋಯ್ತು ಆದರೆ ಅಪ್ಪು ಅವರು ಇಲ್ಲೇ ಎಲ್ಲೋ ಇದ್ದಾರೆ ಎಂಬ ನಂಬಿಕೆ ಈಗಲೂ ಅಭಿಮಾನಿಗಳಲ್ಲಿ ಇದೆ. ಇಂದಿಗೂ ಕೂಡ ಅವರ ಅಗಲಿಕೆಯನ್ನ ಮರೆಯಲು ಸಾಧ್ಯವಾಗಿಲ್ಲ ಕನ್ನಡಿಗರಿಗೆ. ಇದಕ್ಕೆ ನಿದರ್ಶನ ಎಂಬಂತೆ ಮದುವೆ, ಜಾತ್ರೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಅಪ್ಪು ಫೋಟೋ ಪ್ರದರ್ಶನ ಮಾಡಿ ಅಭಿಮಾನ ಮೆರೆಯುವುದನ್ನ ನಾವೆಲ್ಲಾ ನೋಡ್ತಿದ್ದೇವೆ. ಮಕ್ಕಳಿಂದ ಮುದುಕರವರೆಗೂ ಎಲ್ಲಾ ವರ್ಗದ, ಜಾತಿ, ಧರ್ಮ ಭೇದ ಇಲ್ಲ ಎನ್ನುವಂತೆ ಇಷ್ಟಪಡುತ್ತಿರುವ ನಟ ಎಂದರೆ ಅದು ನಮ್ಮ ಪುನೀತ್ ಮಾತ್ರ. ಇದಕ್ಕೆ ಅವರು ಮಾಡಿದ ಸಾಮಾಜಿಕ ಸೇವೆ ಹಾಗೂ ದಾನ ಧರ್ಮಗಳೇ ಕಾರಣ.

 

 

ಇನ್ನು ೭ ತಿಂಗಳ ಕಳೆದ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಗೆ ಇಡೀ ಕುಟುಂಬವೇ ಹೋಗಿ ಪೂಜೆ ಸಲ್ಲಿಸಿದೆ..ಹೌದು, ಅಷವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಸಮೇತರಾಗಿ ಸಮಾಧಿ ಸ್ಥಳಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಇನ್ನು ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಕೂಡ ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು ಸಮಾಧಿಗೆ ಹೂಗುಚ್ಛಗಳನ್ನ ಇಟ್ಟು, ಪೂಜೆ ಮಾಡಿ ಅಪ್ಪು ಅವರ ನೆನೆದಿದ್ದಾರೆ ದೊಡ್ಡ ಮನೆ ಕುಟುಂಬ.

 

 

ಇನ್ನು ರಾಘಣ್ಣ ಅವರ ಜೊತೆಗೆ ಅಪ್ಪು ಅವರು ಸಾಕಿದ್ದ ಮುದ್ದಿನ ನಾಯಿ ಕೂಡ ಸಮಾಧಿ ಸ್ಥಳಕ್ಕೆ ಬಂದಿದ್ದು, ಅಪರೂಪದ ಅಚ್ಚರಿ ಘಟನೆಗೆ ಸಾಕ್ಷಿಯಾಗಿದೆ. ಹೌದು, ಅಪ್ಪು ಅವರು ತುಂಬಾ ಪ್ರೀತಿಯಿಂದ ಸಾಕುತ್ತಿದ್ದ ನಾಯಿಯನ್ನ ರಾಘಣ್ಣ ತಮ್ಮ ಜೊತೆಯಾಗಿ ಸಮಾಧಿ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಇನ್ನು ರಾಘಣ್ಣ ಅಪ್ಪು ಅವರ ಸಮಾಧಿಗೆ ಹೂಗುಚ್ಛಗಳನ್ನ ಇತ್ತು ಪೂಜೆ ಮಾಡುತ್ತಿರುವ ವೇಳೆ, ಆ ನಾಯಿ ಅಪ್ಪು ಅವಳ ಸಮಾಧಿಯನ್ನ ಸುತ್ತುತ್ತಾ ಮುತು ರೌಂಡ್ ಗಳನ್ನ ಹಾಕಿದೆ. ಬಳಿಕ ಅಪ್ಪು ಸಮಾಧಿ ಮುಂದೆ ಕುಳಿತು ಭಾವುಕವಾಗಿರುವಂತೆ ಕಾಣಿಸಿಕೊಂಡಿದೆ. ಇನ್ನು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾಯಿಯ ಪ್ರೀತಿ ಕಂಡು ಅಪ್ಪು ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.