ವೈರಲ್ ಆಆಯಿತು ರಶ್ಮಿಕಾ ಕಾಲೇಜಿನಲ್ಲಿ ತನ್ನ ಹುಡುಗಿಯರ ಜೊತೆ ಮಾಡಿರುವ ಡ್ಯಾನ್ಸ್

ಕಿರಿಕ್ ಪಾರ್ಟಿ 2016 ರಲ್ಲಿ ತೆರೆ ಕಂಡ ಚಿತ್ರ. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಅಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಈ ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡ ಈ ಹುಡುಗಿ ಸಾನ್ವಿ ಪಾತ್ರದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಕದ್ದಿದ್ದರು, ಕರ್ನಾಟಕದ ಮನಸ್ಸನ್ನು ಗೆದ್ದಿದ್ದರು. ಹುಟ್ಟಿದ್ದು ಕೊಡಗಿನಲ್ಲಿ, ಪಿ ಯು ಓದಿದ್ದು ಮೈಸೂರಿನಲ್ಲಿ, ಕೊನೆಗೆ ಬೆಂಗಳೂರಿನಲ್ಲಿ ಎಮ್.ಎಸ್ ರಾಮಯ್ಯ ಕಾಲೇಜು ಆಫ್ ಆರ್ಟ್ಸ್,ಕಾಮರ್ಸ್ ಅಂಡ್ ಸೈನ್ಸ್ ಕಾಲೇಜಿನಿಂದ ಜರ್ನಲಿಸಂ, ಇಂಗ್ಲಿಷ್ ಲಿಟರೇಚರ್ ಹಾಗೂ ಸೈಕಾಲಜಿ ವಿಷಯಗಳಲ್ಲಿ ಪದವಿ ಪಡೆದುಕೊಂಡರು.

 

 

2018 ರಲ್ಲಿ ಮಾಡೆಲ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು ಕ್ಲೀನ್ ಅಂಡ್ ಕ್ಲಿಯರ್ ಫೇಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. ಅದೇ ಬ್ರಾಂಡ್ ನ ಬ್ರಾಂಡ್ ಅಂಬಾಸೆಡರ್ ಆದರು. ಕಿರಿಕ್ ಪಾರ್ಟಿ ಅಲ್ಲಿ ಚಾನ್ಸ್ ಪಡೆದಿದ್ದು ಕೂಡ ಈ ಕ್ಲೀನ್ ಅಂಡ್ ಕ್ಲಿಯರ್ ಫೇಸ್ ನ ಫೋಟೋ ಗಳ್ಳನ್ನು ನೋಡಿಯೇ. ೨೦೧೫ ರಲ್ಲಿ ಟಿವಿಸಿ ಇನ್ ಲ್ಯಾಮೊ ಬೆಂಗಳೂರು ಟಾಪ್ ಮಾಡೆಲ್ ಪ್ರಶಸ್ತಿಯನ್ನು ಗೆದ್ದರು.

 

 

ಕಿರಿಕ್ ಪಾರ್ಟಿ ಚಿತ್ರದಲ್ಲಿ ಚಾನ್ಸ್ ಸಿಕ್ಕಿದ್ದೇ ತಡ, ಹಿಂತಿರುಗಿ ನೋಡಲೇ ಇಲ್ಲ. ಫಿಲ್ಮ್ ರಿಲೀಸ್ ನಂತರ ಕನ್ನಡದ ಟಾಪ್ ಹೀರೋ ಗಳ ಜೊತೆ ನಟಿಸಲು ಅವಕಾಶಗಳ ಮೇಲೆ ಅವಕಾಶಗಳು ಸಿಕ್ಕಿದ್ದವು ಕೆಲವೊಂದನ್ನು ಡೇಟ್ ಸಮಸ್ಯೆಯಿಂದಾಗಿ ದೂರ ಮಾಡಿದ್ದು ಇದೆ. ತೆಲುಗಿನ ಚಲೋ ಫಿಲಂ ನಲ್ಲಿ ಅವಕಾಶ ಪಡೆದ ಈ ಚೆಲುವೆಗೆ ತೆಲುಗಿನಲ್ಲಿ ಬಹಳ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೇವಲ ಕೆಲವು ಚಿತ್ರ ಗಳಲ್ಲಿಯೇ ಬಹು ದೊಡ್ಡ ಹೆಸರು ಮಾಡಿದ್ದಾರೆ ಈ ಚೆಂದುಳ್ಳಿ ಚೆಲುವೆ.

 

 

ಕೊಡಗಿನ ರಶ್ಮಿಕಾ ಮಂದಣ್ಣ, ಮೋಸ್ಟ್​​​ ಗಾರ್ಜಿಯಸ್​​ ನಟಿ. ಕಿರಿಕ್​​ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟು ಈಗ ಟಾಲಿವುಡ್​, ಕಾಲಿವುಡ್​ನಲ್ಲಿ​ ಸಖತ್​ ಸೌಂಡ್​ ಮಾಡ್ತಿದ್ದಾರೆ. ಸ್ಟೈಲಿಶ್​​ ಲುಕ್​​ , ಡಿಫ್ರೆಂಟ್​ ಆ್ಯಕ್ಟಿಂಗ್​ ನಿಂದ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.

 

 

ರಶ್ಮಿಕಾ ಮಂದಣ್ಣ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಪುಷ್ಪ ಸಿನಮಾದ ಮೂಲಕ ಪಾನ್ ಇಂಡಿಯಾ ಮಟ್ಟಕ್ಕೆ ಬೆಳೆದ ರಶ್ಮಿಕಾ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ, ಚಾಕ್ಲೆಟ್ ಬಾಯ್ ರಣಬೀರ್ ಜೊತೆಯಾಗಿ ನಟಿಸಿದ್ದಾರೆ.

 

 

ನಟಿ ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ವೈಯಕ್ತಿಕ ಜೀವನ ಮತ್ತು ಸಿನಿಮಾ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ತನ್ನ ಹೊಸ ಚಿತ್ರದ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ರು. ಶೀಘ್ರದಲ್ಲೇ ಅಮಿತಾಬ್ ಬಚ್ಚನ್ ಜೊತೆಗಿನ ಗುಡ್ ಬೈ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.ಇನ್ನು‌ ಸೋಷಿಯಲ್ ಮೀಡಿಯಾದಲ್ಲಿ ರಶ್ಮೀಕಾ ಆಗಾಗ ಡ್ಯಾನ್ಸ್ ಮಾಡಿ ಆಪ್ ಲೋಡ್ ಮಾಡುತ್ತಾರೆ.ಇವರ‌ ಡ್ಯಾನ್ಸ್ ಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ.ಇದೀಗ ರಶ್ಮೀಕಾ ಕಾಲೇಜಿ ನಲ್ಲಿ ಮಾಡಿರುವ ಡ್ಯಾನ್ಸ್ ಸಖತ್ ವೈರಲ್ ಆಗಿದೆ. ಇವರ ಡ್ಯಾನ್ಸ್ ಗೆ ಅಭಿಮಾನಿಗಳು ತುಂಬಾ ಖುಷಿ ಪಡುತ್ತಿದ್ದಾರೆ.