ಅನುಶ್ರೀ ಊಟ ಮಾಡಿರಲಿಲ್ಲ, ಈ ವೇಳೆ ಪುನೀತ್ ಅಲ್ಲಿ ಬಂದರು – ದೋಸೆ ಸವಿದ ಅಶ್ವಿನಿ ಪುನೀತ್ ರಾಜಕುಮಾರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡದ ರಾಜಕುಮಾರ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ. ಇದೇ ದುಃಖದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವರ್ಷವನ್ನು ಕಳೆಯುತ್ತಾ ಬಂದಿದ್ದಾರೆ. ಅವರ ನಗು ಮುಖದ ವಿಡಿಯೋಗಳು ಅವರ ಸಿನಿಮಾಗಳನ್ನು ನೋಡಿದಾಗೆಲ್ಲ ಅಶ್ವಿನಿ ಪುನೀತ್ ರವರು ಬಿಕ್ಕಿ ಬಿಕ್ಕಿ ಅಳುತ್ತಾರೆ ಪುನೀತ್ ಪರ್ವ ಕಾರ್ಯಕ್ರಮದಲ್ಲೂ ಕೂಡ ಅಶ್ವಿನಿ ಅವರು ಪುನೀತ ರನ್ನು ನೆನೆದು ಬೇಸರ ಮಾಡಿಕೊಂಡು ಸ್ಟೇಜ್ನಿಂದ ಕೆಳಗಿಳಿದು ಹೋದರು.
ಆಂಕರ್ ಅನುಶ್ರೀ ಅವರು ಪುನೀತ್ ಅವರ ಬಗ್ಗೆ ಹೆಚ್ಚು ಅಭಿಮಾನವನ್ನು ಹೊಂದಿದ್ದಾರೆ ಎಲ್ಲಾ ಕಾರ್ಯಕ್ರಮಗಳಲ್ಲೂ ಕೂಡ ಅನುಶ್ರೀ ಅವರು ಪುನೀತ್ ರಾಜಕುಮಾರ್ ರನ್ನು ನೆನೆಯುತ್ತಾರೆ. ತಮ್ಮ ಯೌಟ್ಯೂಬ್ ದಿನ ಲೋಗೋದಲ್ಲಿ ಕೂಡ ಪುನೀತ್ ರಾಜಕುಮಾರ್ ಫೋಟೋವನ್ನು ಹಾಕಿಕೊಂಡಿದ್ದಾರೆ. ಪುನೀತ ಪರ್ವ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ ಅವರು ಪುನೀತ್ ರಾಜಕುಮಾರ್ ಕುರಿತು ಹಲವಾರು ಮಾತನಾಡಿದ್ದಾರೆ ಅವರ ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.ಅನುಶ್ರೀರವರು ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ರಿಂದ ಬೆಸ್ಟ್ ನಿರೂಪಕಿ ಅವಾರ್ಡ್ ಪಡೆದರು ನಂತರ ಅಪ್ಪುವನ್ನು ನೆನೆದು ಭಾವುಕರಾಗಿ ಜೀವನದಲ್ಲಿ ಮರೆಯಲಾಗದ ಕ್ಷಣವೊಂದನ್ನು ಹಂಚಿಕೊಂಡರು.
ಜೀ ಕನ್ನಡ ವಾಹಿನಿ ಅಪ್ಪು ಅಜರಾಮರ ಪ್ರಶಸ್ತಿ ಗೌರವವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಕೊಟ್ಟಿದ್ದಾರೆ. ಧಾರಾವಾಹಿಗಳ ಲೀಡ್ ಆರ್ಟಿಸ್ಟ್ಗಳು ಸೇರಿ ನೀಡಿದ್ದಾರೆ.’ಪ್ರತಿ ವರ್ಷವೂ ಅವಾರ್ಡ್ ಕೊಡ್ತೀವಿ ಆದರೆ ಈ ಅವಾರ್ಡ್ ಅವರಿಗೆಂದು ವಿಶೇಷವಾಗಿ ಮಾಡಿಸಿರುವುದು ಪ್ರಶಸ್ತಿಯಲ್ಲಿ ಅಪ್ಪು ಸರ್ ಅವರ ಭಾವ ಚಿತ್ರದ ಜೊತೆ ಅಪ್ಪು ಅಜರಾಮರ ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಜೀ ಕುಟುಂಬ ಅವಾರ್ಡ್ ಅಂತ ಹಾಕ್ತೀವಿ ಅಂದ್ರೆ ಅಪ್ಪು ಸರ್ನ ಸೆಲೆಬ್ರೇಟ್ ಮಾಡಬೇಕು ಎಂದು ಈ ರೀತಿ ಮಾಡಿಸಿರುವುದು’ ಎಂದು ಅನುಶ್ರೀ ಹೇಳಿದ್ದಾರೆ. ‘ಜೀ ಕುಟುಂಬ ಟೀಂಗೆ ನನ್ನ ಧನ್ಯವಾದಗಳು’ ಎಂದು ಅಶ್ವಿನಿ ಪುನೀತ್ ಮಾತನಾಡಿದ್ದಾರೆ.ಇದೇ ಸಮಯದಲ್ಲಿ ವಾಹಿನಿಯ ಬೆಸ್ಟ್ ನಿರೂಪಕಿ ಅವಾರ್ಡ್ ಅನೌನ್ಸ್ ಮಾಡಿದ್ದಾರೆ ಅದನ್ನು ಅನುಶ್ರೀ ಪಡೆದುಕೊಂಡಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಂದ ಅನುಶ್ರೀ ಅವಾರ್ಡ್ ಪಡೆದುಕೊಂಡು ಭಾವುಕರಾಗಿದ್ದಾರೆ. ‘ಇದು ಫೇವರೆಟ್ ಆ್ಯಂಕರ ಅವಾರ್ಡ್ ಎಲ್ಲಾ ಅಭಿಮಾನಿಗಳು ವೋಟ್ ಮಾಡಿ ಗೆಲ್ಲಿಸಿರುವ ಅವಾರ್ಡ್. ಪ್ರತಿ ವರ್ಷ ಗೆಲ್ಲುವಂತ ಅವಾರ್ಡ್ ಈ ವರ್ಷ ಕೂಡ ಗೆದ್ದಿದ್ದೇನೆ ಒಂದು ಕಡೆ ಈ ವರ್ಷ ನಿಜಕ್ಕೂ ವಿಶೇಷ ಎಂದರು ಅಭಿಮಾನಿಗಳ ಅನುಮತಿ ಪಡೆದುಕೊಂಡು ಈ ಅವಾರ್ಡ್ನ ಎಲ್ಲರ ಪರವಾಗಿ ನನ್ನ ನೆಚ್ಚಿನ ಪರಮಾತ್ಮ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಅರ್ಪಣೆ ಮಾಡುತ್ತೇನೆ ಎಂದು ಅನುಶ್ರೀ ಹೇಳಿದ್ದಾರೆ.ಈ ಸಂದರ್ಭದಲ್ಲಿ ಅಪ್ಪುವನ್ನು ನೆನೆದ ಅನುಶ್ರೀ ಒಂದು ಘಟನೆಯ ಬಗ್ಗೆ ವಿವರಿಸಿದ್ದರು.ಸಿನಿಮಾ ಅವಾರ್ಡ್ ಫಂಕ್ಷನ್ ಒಂದನ್ನು ಅನುಶ್ರೀ ಹೋಸ್ಟ್ ಮಾಡಿದ್ದರು. ದುಬೈನಲ್ಲಿ ಕಾರ್ಯಕ್ರಮ ನಡೆದಿತ್ತು. ಹಲವಾರು ನಟ ನಟಿಯರು ಪ್ರಶಸ್ತಿ ಸ್ವೀಕರಿಸಿದ್ದರು.
ಈ ಬಗ್ಗೆ ನೆನಪಿರಲಿ ಪ್ರೇಮ್ ನೆನಪಿಸಿಕೊಂಡರು. “ಎಲ್ಲರೂ ಅವರವರ ಅವಾರ್ಡ್ ಪಡೆದು ಊಟಕ್ಕೆ ಹೋಗುತ್ತಿದ್ದರು. ಆದರೆ ಅನುಶ್ರೀ ಕಾರ್ಯಕ್ರಮ ಮುಗಿದ ನಂತರವೂ ಊಟ ಮಾಡಿರಲಿಲ್ಲ.ಒಬ್ಬರೇ ಒಂದು ಜಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುನೀತ್ ರಾಜ್ಕುಮಾರ್ ಅಲ್ಲಿ ಬಂದರು.ಬಂದು ಅನುಶ್ರೀ ಅವರನ್ನು ಮಾತನಾಡಿಸಿದ್ದರು. ಊಟ ಆಯ್ತಾ ಎಂದು ಕೇಳಿದಾಗ ಅನುಶ್ರೀ ಇನ್ನೂ ಇಲ್ಲ ಎಂದರು. ನಂತರ ಅನುಶ್ರೀಯನ್ನು ಕರೆದುಕೊಂಡು ಹೋಗಿ ಜೊತೆಯಲ್ಲೇ ಕುಳಿತು ಊಟ ಮಾಡಿದ್ದರು. ಇದು ಎಲ್ಲರಿಗೂ ಬರುವಂತದ್ದಲ್ಲ. ಅವರವರ ಪಾಡಿಗೆ ಊಟ ಮಾಡಿ ಹೋಗುತ್ತಾರೆ.ಆದರೆ ನಮ್ಮೂರಿನ ಹುಡುಗಿ ವಿದೇಶಿ ನೆಲದಲ್ಲಿ ಇದ್ದಾಳೆ.
ಆಕೆ ಊಟ ಆಯಿತಾ ಇಲ್ಲವಾ ಎಂದು ಕೇಳುವ ಗುಣ ಕೇವಲ ಪುನೀತ್ ರಾಜ್ಕುಮಾರ್ ಅವರಿಗೆ ಮಾತ್ರ ಇರಲು ಸಾಧ್ಯ,” ಎಂದು ಪ್ರೇಮ್ ಹೇಳಿದರು. ಅವಾರ್ಡ್ ಸ್ವೀಕರಿಸಿ ಹೀಗೆ ಮಾತನಾಡುತ್ತಾ ಅನುಶ್ರೀ, ಅಪ್ಪು ಸರ್ ಯಾವಾಗಲ್ಲೂ ನನ್ನ ಬಿಗ್ ಸಪೋರ್ಟ್ ಎಲ್ಲಾ ಸಮಯದಲ್ಲೂ ನನ್ನ ಬೆನ್ನಲ್ಲಿ ನಿಂತಿದ್ದ ನಿಮ್ಮ ಪವರ್ಗೆ ಧನ್ಯವಾದಗಳು. ಸಂಜೆ ಆಗ್ತಾ ಆಗ್ತಾ ಅಯ್ಯೋ ಇಷ್ಟೊಂದು ಜನ ಸೇರ್ತಾ ಇದ್ದಾರೆ.ಇಷ್ಟು ಜನದ ಜೊತೆನಾಡುತ್ತ ಇದ್ದೇವೆ. ಇಷ್ಟು ಜನರಲ್ಲಿ ನಾವು ಕೆಲಸ ಮಾಡ್ತಾ ಇದ್ದೇವೆ.
ಯಾರಿಗೆ ಇಷ್ಟೆಲ್ಲಾ ಮಾಡ್ತಾ ಇದ್ದೀವಿ. ಅದನ್ನು ಅವರು ನೋಡ್ತಾರಾ ಅನ್ನೋ ಸಂಕಟ ತುಂಬಾ ಕಾಡ್ತಾ ಇರುತ್ತೆ.ಎಮೋಷನಲ್ ತುಂಬಾ ಸ್ಟ್ರೆಸ್ ಆಗುತ್ತೆ. ಪ್ರತಿಯೊಂದು ಹೆಜ್ಜೆಯಲ್ಲೂ ಅಶ್ವಿನಿ ಮೇಡಂ ನಮಗೆ ತುಂಬಾ ಶಕ್ತಿ ನೀಡಿದ್ದಾರೆ. ಇವತ್ತುಈ ಕ್ಷಣ ನನ್ನ ಜೀವನದ ಬೆಸ್ಟ್ ಮೊಮೆಂಟ್ ಮಾಡಿದಕ್ಕೆ ಥ್ಯಾಂಕ್ಸ್’ ಎಂದಿದ್ದಾರೆ ಅನುಶ್ರೀ.ಇಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರವರ ಕೈಯಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಭಾಗ್ಯ ಎಂದು ಕೂಡ ಮಾತನಾಡಿದರು.
View this post on Instagram
ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿರುವಾಗ ವಿ ವಿ ಪುರಂ ಸ್ಟ್ರೀಟ್ ಫುಡ್ ಅನ್ನು ಕೂಡ ಅನುಶ್ರೀ ಅವರ ಜೊತೆ ಅಶ್ವಿನಿ ಪುನೀತ್ ರವರು ಸವಿದಿದ್ದಾರೆ. ಈ ಸರಳತೆಗೆ ಜನರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಶ್ವಿನಿ ಪುನೀತ್ ರವರು ಕೂಡ ಅಪ್ಪುವಿನಂತೆ ತುಂಬಾ ಸರಳವಿದೆ ಸರಳತನ ಇದೆ ಎಂದು ಕಮೆಂಟ್ ಮೂಲಕ ತಿಳಿಸಿದ್ದಾರೆ.