ನಟಿ ಸುಹಾಸಿನಿ ಮಣಿರತ್ನಂ ರಾಧಿಕಾ ಮತ್ತು ಪೂರ್ಣಿಮಾ ಜೊತೆ ದೀಪಾವಳಿ ಆಚರಣೆ

ನಟಿ ಸುಹಾಸಿನಿ ದಕ್ಷಿಣ ಭಾರತದಲ್ಲಿ ಒಂದು ಸೆನ್ಸೇಷನನ್ನು ಹುಟ್ಟುಹಾಕಿದ ನಟಿ.ಸುಹಾಸಿನಿಯವರು ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಮೇರು ನಟಿಯಾಗಿದ್ದು ನೂರಾರು ಚಿತ್ರಗಳಲ್ಲಿ ಟಾಪ್ ನಟರ ಜೊತೆ ನಟಿಸಿದ್ದಾರೆ ಹಲವು ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಕಮಲ್ ಹಾಸನ್ ರವರ ಅಣ್ಣ ಚಾರು ಹಾಸನ್ ಅವರ ಮಗಳಾಗಿ 1961 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು ಸುಹಾಸಿನಿಯವರು ತಮಿಳಿನ ಖ್ಯಾತ ನಿರ್ದೇಶಕ ಆರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ಮಾಪಕ ಹಾಗೂ ಖ್ಯಾತ ನಿರ್ದೇಶಕ ಮಣಿ ರತ್ನಮ್ ಅವರ ನೆಚ್ಚಿನ ಮಡದಿ.

 

 

ಮೊದಲು ತಮಿಳ್ ಚಿತ್ರದ ಮೂಲಕ ಸಿನಿ ರಂಗಕೆ ಹೆಜ್ಜೆ ಇಟ್ಟ ಸುಹಾಸಿನಿ ಯವರು ನಂತರ ಅನೇಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ.ಕನ್ನಡದಲ್ಲಿ ಬಾಲಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ಹುಷಾರಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಬಾಲಚಂದ್ರ ರವರ ನಿರ್ಮಾಣದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

 

 

ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಕೂಡ ಇವರು ನಟಿಸಿದ್ದಾರೆ ಸಾಹಸ ಸಿಂಹ ವಿಷ್ಣುವರ್ಧನ್ ರವರ ಜೊತೆ ನಟಿಸಿದ ಬಂಧನ ಸಿನಿಮಾ ಇವರಿಗೆ ಆ ಕಾಲದಲ್ಲಿ ತುಂಬಾ ಹೆಸರನ್ನು ತಂದುಕೊಟ್ಟಿದೆ. ಮತ್ತೊಮ್ಮೆ ಮುತ್ತಿನ ಹಾರ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸುಹಾಸಿನಿ ಅವರ ನಟನೆ ತುಂಬಾನೇ ಗಮನ ಸೆಳೆಯುತ್ತದೆ

 

 

ಇದಾದ ನಂತರ ಹಿಮಪಾತ, ಅಮೃತವರ್ಷಿಣಿ ಯಾರಿಗೆ ಸಾಲುತ್ತೆ ಸಂಬಳ ಮಾತಾಡು ಮಾತಾಡು ಮಲ್ಲಿಗೆ ಹೀಗೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಶರತ್ ಬಾಬು, ರಮೇಶ್ ಅರವಿಂದ ಹಾಗೂ ಸುಹಾಸಿನಿ ನಟಿಸಿರುವ ಅಮೃತವರ್ಷಿಣಿ ಚಿತ್ರ ಎಂದಿಗೂ ಒಂದು ಅವಿಸ್ವರಣೆಯ ದೃಶ್ಯ ಕಾವ್ಯ ದಕ್ಷಿಣ ಭಾರತದ ಹಲವಾರು ಪ್ರಸಿದ್ಧ ನಟರ ಜೊತೆ ಸುಹಾಸಿನಿ ಅವರು ನಟಿಸಿದ್ದಾರೆ.

 

 

ಇವರು ಇಂದಿರಾ ಎಂಬ ಚಿತ್ರವನ್ನು ಪೆನ್ನಿ ಎಂಬ ದೂರದರ್ಶನದ ಧಾರವಾಹಿಯನ್ನು ಕೂಡ ನಿರ್ದೇಶಿಸಿದ್ದಾರೆ. ಇವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ದೊರೆತಿವೆ. ಈ ವರ್ಷ ನಟಿ ಸುಹಾಸಿನಿ ಯವರು ತನ್ನ ಪತಿ ಮಣಿರತ್ನಂ ಹಾಗೂ ಕುಟುಂಬದವರೊಡನೆ ದೀಪಾವಳಿ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸಿದ್ದಾರೆ. ಕಳೆದ ವರ್ಷ ಕರೋನ ಕಾರಣದಿಂದ ಯಾರು ಕೂಡ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ವರ್ಷ ಸ್ಯಾಂಡಲ್ ವುಡ್ ನ ಎಲ್ಲ ನಟ ನಟಿಯರು ಕೂಡ ದೀಪಾವಳಿ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.