ಪುನೀತ್ ಪರ್ವ ಕಾರ್ಯಕ್ರಮಕ್ಕೆ ಹಿರಿಯ ಮಗಳು ಧೃತಿ ಬಂದಿಲ್ಲ ಅಸಲಿ ಕಾರಣ ಹೇಳಿ ಕಣ್ಣೀರಿಟ್ಟ ವಂದಿತಾ

ನೆನ್ನೆ ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ನಡೆಯಿತು ಹಾಗೂ ಪುನೀತ್ ಗಾಗಿಯೇ ಪುನೀತ ಪರ್ವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು ಆದ್ರೆ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ಧೃತಿ ಮಾತ್ರ ಬಂದಿರಲಿಲ್ಲ.

 

 

ಸಹೋದರಿ ವಂದಿತಾ ಈ ಕುರಿತು ಮಾತನಾಡಿದರು ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಯಶ್ ರವರು ದೀರ್ಘವಾಗಿ ಮಾತನಾಡುತ್ತಿದ್ದಾಗ ಅಪ್ಪು ಮಗಳು ವಂದಿತಾ ಕಣ್ಣಲ್ಲಿ ನೀರು ಹರಿಯುತ್ತಿತ್ತು ಇಷ್ಟು ಮಾತ್ರವಲ್ಲದೇ ವೇದಿಕೆಯ ಮೇಲಿದ್ದ ಅಶ್ವಿನಿ ಪುನೀತ್ ರವರು ಕೂಡ ಕಣ್ಣೀರು ಹಾಕಿದರು.

 

 

ಪುನೀತ್ ಇಡೀ ಕರ್ನಾಟಕದ ಮಗ ಅವರು ನಮಗೆಲ್ಲರಿಗೂ ಸ್ಪೂರ್ತಿ ಅವರ ಹೆಸರನ್ನು ಉಳಿಸಿಕೊಂಡು ಹೋಗಲು ನಮಗೆ ಶಕ್ತಿ ಕೊಡಲಿ ಜೊತೆಗೆ ನಾವು ಇದ್ದೀವಿ ಎಂದು ಯಶ್ ಅಶ್ವಿನಿ ಪುನೀತ್ ಗೆ ಭರವಸೆ ಕೊಟ್ಟಿದ್ದಾರೆ. ಹಾಗೆ ಗಂಧದ ಗುಡಿ ಸಿನಿಮಾ ಕೆಜಿಎಫ್ ರೆಕಾರ್ಡನ್ನು ಧೂಳಿಪಟ ಮಾಡಲಿ ಎಂದು ಯಶ್ ಹಾರೈಸಿದ್ದಾರೆ.

 

 

ಹಾಗೆ ನಟ ಪ್ರಕಾಶ್ ರಾಜ್ ಅಪ್ಪು ಹೆಸರಿನಲ್ಲಿ ಆಂಬುಲೆನ್ಸ್ ಸೇವೆಯನ್ನು ನೀಡುವುದಾಗಿ ಯೋಜನೆ ಹಾಕಿಕೊಂಡಿದ್ದಾರೆ ಈ ಕಾರ್ಯಕ್ರಮಕ್ಕೆ ತಮಿಳು ನಟ ಸೂರ್ಯ, ಚಿರಂಜೀವಿ ಮುಂತಾದವರು ಕೈಜೋಡಿಸಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಅಪ್ಪು ಎಕ್ಸ್ಪ್ರೆಸ್ ಹೆಸರಿನ ಆಂಬುಲೆನ್ಸ್ ಸೇವೆಯನ್ನು ಒದಗಿಸಲು ಎಷ್ಟು ಆಂಬುಲೆನ್ಸ್ ಬೇಕು ಅಷ್ಟು ಆಂಬುಲೆನ್ಸ್ ಅನ್ನು ನನ್ನ ಯಶೋಮಾರ್ಗ ಮತ್ತು ಕೆವಿಎನ್ ಪ್ರೊಡಕ್ಷನ್ ಮಾಲೀಕ ಕೆವಿಎನ್ ಫೌಂಡೇಶನ್ ವತಿಯಿಂದ ಮಾಡಿಕೊಡುತ್ತೇವೆ ಎಂದು ಯಶ್ ಘೋಷಿಸಿದ್ದಾರೆ. ಈ ಮಾತು ಕೇಳಿ ಅಪ್ಪು ಕಿರಿಯ ಮಗಳಾದ ವಂದಿತಾ ಕಣ್ಣೀರು ಹಾಕಿದರು ಇನ್ನು ಹಿರಿಯ ಮಗಳಾದರೂ ಟಿ ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಧೃತಿಗೆ ಪರೀಕ್ಷೆ ಇದ್ದ ಕಾರಣ ಬರಲು ಸಾಧ್ಯವಾಗಿಲ್ಲ ಎನ್ನುವ ಮಾತನ್ನ ವಂದಿತಾ ಹೇಳಿದ್ದಾರೆ.