ಕಣ್ಣ್ ಚೆನ್ನಾಗಿಲ್ಲ ಮೂಗ ದೊಡ್ದು, ಚಿಕ್ಕದು ಅಂತಾರೆ, ಸೌಂದರ್ಯಕ್ಕಾಗಿ ಈ ಸರ್ಜರಿ ಬೇಡ – ಕಿರುತೆರೆ ನಟಿ ನಿಧನ

ಕಾಸ್ಮೆಟಿಕ್ ಸರ್ಜರಿ ಬಗ್ಗೆ ಖ್ಯಾತ ನಟಿ ನೀತು ಶೆಟ್ಟಿ ಮಾತನಾಡಿದರು. ಕಾಸ್ಮೆಟಿಕ್ ಸರ್ಜರಿ ಸರಿಯೋ ತಪ್ಪು ಎಂಬುದರ ಕುರಿತು ಮಾತನಾಡಿದ ನಟಿ ನೀತು ಶೆಟ್ಟಿ ಇದರ ಕುರಿತು ಮಾತನಾಡಿ ಹೀಗೆಂದರು, ಇವತ್ತು ಒಂದು ಮೆಡಿಕಲ್ ನೆಗ್ಲಿಜಿಯನ್ಸ್ ಕೇಸ್ ಇಂದ ಒಬ್ಬರು ಆಕ್ಟ್ರೆಸ್ ತೀರ್ಕೊಂಡಿದ್ದಾರೆ. ಇದನ್ನು ಕೇಳಿ ತುಂಬಾ ದುಃಖ ಆಯ್ತು ಇದು ಕಾಸ್ಮೆಟಿಕ್ ಸರ್ಜರಿ ವಿಷಯ ಆಗಿರೋದ್ರಿಂದ, ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ನಾನು ಕೂಡ ಕಾಸ್ಮೆಟಿಕ್ ಸರ್ಜರಿ ಮಾಡಿಸಿದ್ದೆ ಅದು ನನಗೆ ವರ್ಕ್ ಆಗಿರ್ಲಿಲ್ಲ, ತುಂಬಾ ಜನ ನಟ ನಟಿಯರು ಹಾಗೆ ನಟ-ನಟಿ ಅಲ್ದೇ ಇರೋರು ಕೂಡ ಕಾಸ್ಮೆಟಿಕ್ ಸರ್ಜರಿ ಹೆಲ್ಪ್ ಕಂಡಿದ್ದಾರೆ.

 

 

ಅವರಿಗೆ ಅದು ವರ್ಕ್ ಆಗಿರಬಹುದು. ನನ್ನ ಅಭಿಪ್ರಾಯ ಏನು ಅಂತ ಅಂದ್ರೆ ಯಾವುದೇ ಆರೋಗ್ಯದ ತೊಂದರೆ ಇಲ್ಲದವರು ಕೇವಲ ಸೌಂದರ್ಯಕ್ಕೊಸ್ಕರ ಹೀಗೆ ಮಾಡುವವರು, ಇಂಡಸ್ಟ್ರಿ ಒತ್ತಡದಿಂದ ಹೀಗೆ ಮಾಡುವವರು, ಸಮಾಜದ ಒತ್ತಡದಿಂದ ಹೀಗೆ ಮಾಡುವ ಇದೆಲ್ಲದರ ಒತ್ತಡಕ್ಕಾಗಿ ಮಾಡುವ ಕಾಸ್ಮೆಟಿಕ್ ಸರ್ಜರಿ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ.

 

 

ನನಗೆ ಸೈನ್ಸ್ ಮೇಲೆ ತುಂಬಾ ನಂಬಿಕೆ ಇದೆ , ಮೆಡಿಸಿನ್ಸ್ ಮೇಲೆ ನಂಬಿಕೆ ಇದೆ ಅದೇ ತರ ನಾನು ಮಿರಾಕಲ್ ಕೂಡ ನಂಬ್ತೀನಿ ಇಲ್ಲ ಅಂತೇನಿಲ್ಲ ನಮ್ಮ ಮೇಲೆ ನಮಗೆ ಬೇಜಾರಾಗಿ ನಾವೇ ಆಪರೇಷನ್ ಥಿಯೇಟರಿಗೂ ಹೋಗಿ ಆಪರೇಷನ್ ಮಾಡಿಸಿಕೊಳ್ಳುವುದು ನಾನಿನ್ನು ಚೆನ್ನಾಗಿ ಕಾಣಿಸಬೇಕು ಎಲ್ಲರೂ ನನ್ನನ್ನೇ ನೋಡ್ಬೇಕು ಅಂತ ಮಾಡೋದು ಖಂಡಿತ ಸರಿಯಲ್ಲ.

 

 

ನಾನು ಆ ನಟ ಹೀಗೆ ಮಾಡ್ತಾರೆ ಈ ನಟಿ ಹೀಗೆ ಮಾಡ್ತಾರೆ ಅಂತ ಹೇಳ್ತಿಲ್ಲ ನಾನು ಕಾಸ್ಮೆಟಿಕ್ ಸರ್ಜರಿ ಮಾಡಿಸಿ ಎಂದು ಯಾರಿಗೂ ಹೇಳುವುದಿಲ್ಲ. ಇದು ನನ್ನ ಸ್ವಂತ ಅಭಿಪ್ರಾಯ ಕೂಡ ಸಮಾಜದ ಒತ್ತಡ ನಮ್ಮನ್ನು ತುಂಬಾ ಬೇಜಾರ್ ಮಾಡತ್ತೆ, ಕಣ್ಣು ಸರಿ ಇಲ್ಲ ,ಮೂಗು ದೊಡ್ಡದು, ಮೂಗು ಚಿಕ್ಕದು ,ತುಂಬಾ ದಪ್ಪಗಿದ್ದೀಯ ದೇಹದಲ್ಲಿ ಏನೇನು ನ್ಯೂ ನತೆಗಳಿವೆ ಎಂದು ಕೂಡ ನಮ್ಮ ಮೇಲೆ ಸಮಾಜ ನ್ಯೂನತೆಗಳನ್ನು ಹುಡುಕುತ್ತಿರುತ್ತದೆ. ಬಾಡಿ ಶೇವಿಂಗ್ ಬಗ್ಗೆ ಕೂಡ ನಾವು ಕೇಳಿದ್ದೇವೆ, ಇದರ ಬಗ್ಗೆ ಫೈಟ್ ಕೂಡ ಮಾಡಿದ್ದೇವೆ. ಇದು ಕೇವಲ ಬರೀ ದಪ್ಪ, ಸಣ್ಣ ವಿಷಯ ಅಷ್ಟೇ ಅಲ್ಲ ಇದೊಂದು ವ್ಯಕ್ತಿಯ ಆತ್ಮವಿಶ್ವಾಸದ ವಿಷಯ ಹಾಗಾಗಿ ನಾವು ಈ ವಿಷಯಕ್ಕೆ ತುಂಬಾ ಹೋರಾಡುತ್ತೇವೆ.

 

 

 

ಈ ಕಾಸ್ಮೆಟಿಕ್ ಸರ್ಜರಿ ಇಂದ ಹಲವಾರು ಜನ ಹಲವಾರು ತರಹದ ನಷ್ಟ ಅನುಭವಿಸಿದ್ದಾರೆ ಈ ಕಾಸ್ಮೆಟಿಕ್ ಸರ್ಜರಿ ಯನ್ನೂ ಮಾಡಿಸಿಕೊಂಡು ಹಲವಾರು ಜನರಿಗೆ ಇದು ಸಕ್ಸಸ್ ಆಗಿಲ್ಲ ಹಲವಾರು ಜನ ಇದರಿಂದ ನಿರಾಶರಾಗಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬಳು ಇನ್ನು ಮುಂದೆ ಆದರೂ ಜನ ಎಚ್ಚೆತ್ತುಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೇನೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕು ನಿಜವಾಗಲೂ ಕಾಸ್ಮೆಟಿಕ್ ಸರ್ಜರಿ ಅವಶ್ಯಕತೆ ಇದಿಯಾ ಎಂದು ತಿಳಿದುಕೊಂಡು ನಂತರ ಕಾಸ್ಮೆಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳಬೇಕು ಎಂದು ನಟಿ ನೀತು ಶೆಟ್ಟಿ ಹೇಳಿದ್ದಾರೆ.